ಉದಯವಾಹಿನಿ ಹುಣಸಗಿ: ದಲಿತರ ಏಳ್ಗೆಗಾಗಿ ದಲಿತ ಸೇನೆ ಪೂರಕವಾಗಿ ಕೆಲಸ ಮಾಡುತ್ತಿದೆ. ಸಮಾಜಕ್ಕೆ ನ್ಯಾಯ ಒದಗಿಸಲು ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ದಲಿತ ಸೇನೆ ರಾಜ್ಯಾಧ್ಯಕ್ಷ ಹಣಮಂತ ಯಳಸಂಗಿ ಹೇಳಿದರು. ಪಟ್ಟಣದ ಶಾದಿಮಹಲ್ ಹಾಲ್‌ನಲ್ಲಿ ಹಮ್ಮಿಕೊಂಡ ಯಾದಗಿರಿ ಜಿಲ್ಲಾ ಮಟ್ಟದ ಸಮಾಲೋನೆ ಸಭೆ ಹಾಗೂ ಹುಣಸಗಿ ತಾಲೂಕು ನೂತನ ಪದಾಧಿಕಾರಿಗಳ ಆಯ್ಕೆ ಕರ‍್ಯಕ್ರಮದಲ್ಲಿ ಮಾತನಾಡಿ, ಸಾಮಾಜಿಕ ನ್ಯಾಯ ಹಾಗೂ ಹಿಂದುಳಿದವರ ಶ್ರೇಯಾಭಿವೃದ್ಧಿಗಾಗಿ ಮಾಜಿ ಕೇಂದ್ರ ಸಚಿವ ರಾಮ್‌ವಿಲಾಸ್ ಪಾಸ್ವಾನ್ ಅವರು ದಲಿತ ಸೇನೆ ಸಂಘಟನೆ ಸ್ಥಾಪಿಸಿದರು. ಅವರ ಹಾಕಿಕೊಟ್ಟ ಮಾರ್ಗ ಹಾಗೂ ಡಾ:ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ಇಟ್ಟುಕೊಂಡು ಸಂಘಟನೆ ಮುನ್ನಡೆಸಿಕೊಂಡು ಹೋಗಬೇಕು ಎಂದು ಕರೆ ನೀಡಿದರು.
ಕಲಬುರಗಿ ದಲಿತ ಸೇನೆ ಜಿಲ್ಲಾಧ್ಯಕ್ಷ ಮಂಜುನಾಥ ಭಂಡಾರಿ ಮಾತನಾಡಿ, ಬದುಕಿಗಾಗಿ ಸಂಘಟನೆ ನಡೆಸದೆ, ಬಡವರು, ದಲಿತರ ಉದ್ದಾರಕ್ಕಾಗಿ ಸಂಘಟನಾತ್ಮಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಕ್ರೀಯಾಶೀಲರಾಗಬೇಕು ಎಂದು ಕರೆ ನೀಡಿದರು.ದಲಿತ ಸೇನೆ ವಿದ್ಯಾರ್ಥಿ ಘಟಕದ ರಾಜ್ಯಾಧ್ಯಕ್ಷ ಶಿವಲಿಂಗ ದೊಡ್ಡಮನಿ ಮಾತನಾಡಿದರು.ಈ ವೇಳೆ ಸಂವಿಧಾನ ಶಿಲ್ಪಿ ಡಾ:ಬಿ.ಆರ್.ಅಂಬೇಡ್ಕರ ಮತ್ತು ಹೋರಾಟಗಾರ ಟಿಪ್ಪು ಸುಲ್ತಾನ್ ಭಾವಚಿತ್ರಕ್ಕೆ ಪುಷ್ಪ ಸಲ್ಲಿಸಿದರು. ನಂತರ ದಲಿತ ಸೇನೆ ತಾಲೂಕು ಘಟಕಕ್ಕೆ ಪದಾಧಿಕಾರಿಗಳ ಆಯ್ಕೆಗೊಳಿಸಿ ಸನ್ಮಾನಿಸಲಾಯಿತು.
ಈ ಸಂದರ್ಭ ಯಾದಗಿರಿ ಜಿಲ್ಲಾ ಅಧ್ಯಕ್ಷ ಅಶೋಕ ಹೊಸಮನಿ, ಯುಸೂಫ್ ಡೆಕ್ಕನ್, ಬಾಬು ಹವಾಲ್ದಾರ, ವಿರೇಶ ಗುಳಬಾಳ, ಮರಲಿಂಗಪ್ಪ ಹುಣಸಿಹೊಳೆ, ನಿಂಗಣ್ಣ ಗೋನಾಲ ಹಾಗೂ ತಾಲೂಕು ಅಧ್ಯಕ್ಷರು ಮತ್ತು ದಲಿತ ವಿವಿಧ ಮುಖಂಡರು ಸೇರಿದಂತೆ ಇತರರಿದ್ದರು.
