
ಉದಯವಾಹಿನಿ ಸಿಂಧನೂರು: ತಾಲ್ಲೂಕು ತಹಶೀಲ್ದಾರ್ ಕಛೇರಿಯಲ್ಲಿ ನಡೆದ 76ನೇ ಸ್ವಾತಂತ್ರ್ಯ ದಿನಾಚರಣೆ ಕುರಿತು ಪೂರ್ವ ಭಾವಿ ಸಭೆ ತಹಶೀಲ್ದಾರ್ ಅಧ್ಯಕ್ಷತೆಯಲ್ಲಿ ನಡೆಸಲಾಯಿತು ಎಂದರುಈ ಪೂರ್ವ ಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ತಾಲ್ಲೂಕು ದಂಡಾಧಿಕಾರಿ ಅರುಣ್ ಕುಮಾರ್ ಹೆಚ್ ದೇಸಾಯಿ ಅವರ ಈ ಅಮೃತ ಮಹೋತ್ಸವ ಮಾದರಿಯಲ್ಲಿ ಈ ಸಲ ಸ್ವಾತಂತ್ರ್ಯ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಅತ್ಯಂತ ಸಡಗರ ಸಂಭ್ರಮದಿಂದ ಆಚರಣೆ ಮಾಡಬೇಕೆಂದು ತಿಳಿಸಿದರುನಗರದ ಪ್ರತಿಯೊಂದು ಇಲಾಖೆಯ ತಮ್ಮ ತಮ್ಮ ಇಲಾಖೆಯ ಸೌಲಭ್ಯಗಳು ಕುರಿತು ಸಮಸ್ಯೆ ಮಾಹಿತಿ ಇರುವ ಸ್ತಭ ಚಿತ್ರ ತಯಾರಿಸುವ ಮೂಲಕ ದಿ-14 ರಂದು ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು ಜನರಿಗೆ ಪ್ರದೇಕ್ಷಿಸಿಬೇಕ ಎಂದು ಹೇಳಿದರುಎಲ್ಲಾ ಇಲಾಖೆಯಲ್ಲಿ ದೀಪಾದ ಅಲಂಕಾರ ಕೊಡಿರಬೇಕು ಮತ್ತು ನಿಗದಿತ ಸಮಯದಲ್ಲಿ ಧ್ವಜಾರೋಹಣ ನೆರವೇರಿಸಿಬೇಕು ಹಾಗೂ ಕಡಿಯವಾಗಿ ಮಹಾತ್ಮ ಗಾಂಧಿ ಹಾಗೂ ಸಂವಿಧಾನ ಶಿಲ್ಪಿ ಬಿ ಆರ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಗೌರವ ಸಲ್ಲಿಸಬೇಕು ಧ್ವಜಾರೋಹಣ ಅರ್ಥಪೂರ್ಣವಾಗಿ ಆಚರಣೆ ಮಾಡುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಿ ಬೇಕು ಎಂದು ತಾಲ್ಲೂಕು ತಹಶೀಲ್ದಾರ್ ಅರುಣ್ ಕುಮಾರ್ ಹೆಚ್ ದೇಸಾಯಿ ಅವರ ಅಧಿಕಾರಿಗಳಿಗೆ ಸೂಚನೆ ನೀಡಿದರು.ಈ ಪೂರ್ವ ಭಾವಿ ಸಭೆಯಲ್ಲಿ ಕಾರ್ಮಿಕ ಇಲಾಖೆ ಮತ್ತು ಪೋಲಿಸ್ ಇಲಾಖೆ ಅಧಿಕಾರಿಗಳ 76 ನೇ ಸ್ವಾತಂತ್ರ್ಯ ದಿನಾಚರಣೆ ಸಂಬಂಧ ಇಲ್ಲದಂತೆ ಸಭೆಗೆ ಗೈರಾಗಿದ್ದರು ಈ ಪೋಲಿಸ್ ಇಲಾಖೆ ಗೆ ಪೋನ್ ಮೂಲಕ ಮಾತನಾಡಿ ಈ ಸಭೆಗೆ ನಿಮ್ಮ ಜವಾಬ್ದಾರಿ ಅತ್ಯಂತ ಎಂದು ಆವಶ್ಯಕತೆ ಇದೆ ಎಂದು ಎಚ್ಚರಿಕೆ ನೀಡಿದರು.ಈ ಈ ಸಂದರ್ಭದಲ್ಲಿ ನಗರ ಸಭೆ ಪೌರಾಯುಕ್ತರು ಮಂಜುನಾಥ್ ಗುಂಡೂರು ತಾ ಪಂ ಇಓ ಚಂದ್ರಶೇಖರ್ ಬಿಓ ಸೋಮಶೇಖರ್ ಗೌಡ ತಾಲೂಕು ವೈದ್ಯಧಿಕಾರಿ ಡಾ ಅಯ್ಯನಗೌಡ. ಮಲ್ಲಿಕಾರ್ಜು ಎಇ ಅನ್ನಪೂರ್ಣ ಮತ್ತು ಇಲಾಖೆ ಇತರರು ಸಿಬ್ಬಂದಿ ಸೇರಿದಂತೆ ಇತರರು ಉಪಸ್ಥಿತರಿದ್ದರು
