
ಬಂಧನಕ್ಕೊಳಗಾಗಿರುವ ಪಾಕಿಸ್ತಾನದ ಮಾಜಿ ಅಧ್ಯಕ್ಷ ಹಾಗೂ ಪಿಟಿಐ ಪಕ್ಷದ ಮುಖ್ಯಸ್ಥ ಇಮ್ರಾನ್‍ಖಾನ್ ಅವರಿಗೆ ಜೈಲಿನಲ್ಲಿ ಸರಿಯಾದ ಊಟ ನೀಡುತ್ತಿಲ್ಲ ಹಾಗೂ ಅವರ ಜೀವಕ್ಕೆ ಅಪಾಯವಿದೆ ಎಂದು ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾ ಪಕ್ಷದ ಉಪಾಧ್ಯಕ್ಷ ಶಾ ಮಹಮೂದ್ ಖುರೇಷಿ ಆರೋಪಿಸಿದ್ದಾರೆ. ಇಮ್ರಾನ್‍ಖಾನ್ ಅವರನ್ನು ಅಡಿಯಾಲಾ ಜೈಲಿನಲ್ಲಿ ಇರಿಸುವಂತೆ ನ್ಯಾಯಾಲಯವು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದೆ ಆದರೆ ಅವರನ್ನು ಅಟಾಕ್ ಜೈಲಿಗೆ ಸ್ಥಳಾಂತರಿಸಲಾಯಿತು ಎಂದು ಅವರು ಹೇಳಿದರು. ಅಟಾಕ್ ಜೈಲಿನಲ್ಲಿ ಸೌಲಭ್ಯಗಳ ಕೊರತೆಯಿದೆ, ಅಲ್ಲಿ ಬಿ ಕ್ಲಾಸ ಸೌಲಭ್ಯಗಳನ್ನು ಒದಗಿಸಲಾಗಿಲ್ಲ ಎಂದು ಅವರು ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ದೂರಿದ್ದಾರೆ.
ಮಾಜಿ ಪ್ರಧಾನಿಯೊಬ್ಬರನ್ನು ಸಿ ಕ್ಲಾಸ್ ಜೈಲಿನ ಸೆಲ್‍ನಲ್ಲಿ ಬಂಧಿಸಲಾಗಿದೆ ಎಂದು ಹೇಳಿರುವ ಖುರೇಷಿ, ಜೈಲಿನಲ್ಲಿ ಇಮ್ರಾನ್ ಖಾನ್ ಅವರ ವಕೀಲರಿಗೆ ಪ್ರವೇಶವನ್ನು ನೀಡಲಾಗಿಲ್ಲ ಎಂದು ಹೇಳಿದರು. ಪವರ್ ಆ- ಅಟಾರ್ನಿಯಲ್ಲಿ ಅವರ ಸಹಿ ಇಲ್ಲದೆ ಪಿಟಿಐ ಮುಖ್ಯಸ್ಥರ ಬಿಡುಗಡೆಗೆ ಮನವಿ ಸಲ್ಲಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.
