
ಉದಯವಾಹಿನಿ, ನಾಗಮಂಗಲ: ನಾವು ನಮ್ಮ ಮೊದಲ ಆದ್ಯತೆ ಪರಿಸರ ಸಂರಕ್ಷಣೆಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪ್ಲಾಸ್ಟಿಕ್ ಮುಕ್ತ ಪರಿಸರ ನಿರ್ಮಾಣ ಮಾಡುವುದು ನಮ್ಮ ಗುರಿಯಾಗಿ ಇರಬೇಕೆಂದು ಹೈಕೋರ್ಟ್ ನ್ಯಾಯಮೂರ್ತಿಗಳಾದ ಬಿಎಮ್ ಶ್ಯಾಮಪ್ರಸಾದ್ ತಿಳಿಸಿದರು.ಅವರು ನಾಗಮಂಗಲ ತಾಲೂಕು ತಾಲೂಕಿನ ಹೂರ ವಲಯದಲ್ಲಿರುವ ಹೊನ್ನಬೆಟ್ಟ ಹೊಸೂರಿನ ಅರಣ್ಯ ಪ್ರದೇಶದಲ್ಲಿ ಬೆಂಗಳೂರು ವಕೀಲರ ಸಂಘ ಹಾಗೂ ಜಿಲ್ಲೆಯ ಎಲ್ಲಾ ತಾಲೂಕುಗಳ ವಕೀಲರ ಸಂಘ ಮಾತೃ ಫೌಂಡೇಶನ್ ಹಾಗೂ ಇಲಾಖೆಯ ವತಿಯಿಂದ ನೆನ್ನೆ ವಿಶ್ವ ಪರಿಸರ ದಿನಾಚರಣೆ ಭಾಗವಹಿಸಿ ಮಾತನಾಡಿದರು.ನಾವುಗಳು ಅತಿ ಹೆಚ್ಚು ಸರಕು ಸಾಮಗ್ರಿಗಳನ್ನು ತರಲು ಪ್ಲಾಸ್ಟಿಕ್ ಬ್ಯಾಗುಗಳಿಗೆ ಅವಲಂಬಿತರಾಗಿದ್ದು ಮುಂದೆ ಬಟ್ಟೆ ಬ್ಯಾಗ್ ಬಳಸುವುದಕ್ಕೆ ಹೆಚ್ಚಿನ ಆದ್ಯತೆ ನೀಡುವ ಮುಖಾಂತರ ಇಂದಿನ ಯುವ ಪೀಳಿಗೆ ಪ್ಲಾಸ್ಟಿಕ್ ಮುಕ್ತ ಸಮಾಜ ಮಾಡಲು ನಾವುಗಳು ಶ್ರಮಿಸಬೇಕಾಗಿದೆ ಬದಲಾವಣೆಯ ತರುವ ಮುಖಾಂತರ ಪರಿಸರ ನಾಡು ಕಟ್ಟುವ ಪ್ರಯತ್ನ ಮಾಡಲು ಎಲ್ಲರೂ ಸಹಕರಿಸಬೇಕೆಂದು ಮನವಿ ಮಾಡಿದರು. ಪರಿಸರವನ್ನು ನಾವುಗಳು ಕಾಪಾಡುವುದರಲ್ಲಿ ವಿಫಲವಾದರೆ ನಮ್ಮ ಮುಂದಿನ ಪೀಳಿಗೆ ಬಹಳ ತೊಂದರೆ ಅನುಭವಿಸುಬೇಕಾಗುತ್ತದೆ ಅದನ್ನು ಮುಂಜಾಗ್ರತ ಕ್ರಮ ಕೈಗೊಳ್ಳಬೇಕಾಗಿದೆ.ಪ್ಲಾಸ್ಟಿಕ್ ನಿಷೇಧ ಮಾಡುವ ಕುರಿತು ಈಗಾಗಲೇ ಸುಮಾರು ವರ್ಷಗಳ ಕಾಲ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದರು ಅದನ್ನು ತಡೆಗಟ್ಟಲು ಸಾಧ್ಯವಾಗುತ್ತಿಲ್ಲ ಪರಿಸರಕ್ಕೆ ಮಾರಕವಾಗಿರುವ ಪ್ಲಾಸ್ಟಿಕ್ ಪದಾರ್ಥಗಳನ್ನು ತಡೆಗಟ್ಟುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ನ್ಯಾಯಮೂರ್ತಿ ಎಚ್.ಟಿ ನರೇಂದ್ರ ಪ್ರಸಾದ್ ಮಾತನಾಡಿದರು.
ನ್ಯಾಯಮೂರ್ತಿಗಳಾದ ಎಚ್ ಟಿ ನರೇಂದ್ರಪ್ರಸಾದ್ ಎಸ್ ರಾಚಯ್ಯ ಟಿಜಿ ಶಿವಶಂಕರೇ ಗೌಡ.ವಿಜಯಕುಮಾರ್ ಎ ಪಾಟೀಲ್ ಜಿಲ್ಲಾ ಪ್ರಧಾನ ಹಾಗೂ ಸಚಿನ್ ನ್ಯಾಯಾಧೀಶ ಬಿ.ಜೆ ರಾಮಾ. ವಕೀಲರ ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ ಹಿರಿಯ ವಕೀಲ ಶಿವಣ್ಣ ಹೈಕೋರ್ಟ್ ಡೆಪ್ಯೂರಿಟಿ ಸಾಲಿಸಿಟರ್ ಜನರಲ್ ಶಾಂತಿಭೂಷಣ್ ನ್ಯಾಯಾಧೀಶರಾದ ಯೋಗೇಶ್ ಗಿರಿಗೌಡ ಕೆ.ಎನ್. ಪುಟ್ಟೇಗೌಡ ಮಾತೃ ಫೌಂಡೇಶನ್ ಅಧ್ಯಕ್ಷ ಆರ್.ಚಂದ್ರ ಕುಮಾರ್ ತಹ ಸಿಲ್ದಾರ್ ನಯೀoಉನ್ನಿಸಾ.ಡಿ ವೈ ಎಸ್ ಪಿ ಲಕ್ಷ್ಮಿನಾರಾಯಣ್ ಪ್ರಸಾದ್.ಎಸಿಎಫ್ ಶಂಕರೇ ಗೌಡ.ಶಿವರಾಂ. ವಲಯ ಅರಣ್ಯ ಅಧಿಕಾರಿ ಮಂಜುನಾಥ್ ಹಾಗೂ ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರದ ವಕೀಲರ ಸಂಘದ ಅಧ್ಯಕ್ಷರು ಪದಾಧಿಕಾರಿಗಳು ಹಾಜರಿದ್ದರು.
ಕಾರ್ಯಕ್ರಮ ದಲ್ಲಿ ಕಾಲೇಜು ಎನ್ಎಸ್ಎಸ್ ವಿದ್ಯಾರ್ಥಿಗಳು ವಹಿಸಿದ್ದು ಬೆಟ್ಟದ ತಪ್ಪಲಿನಲ್ಲಿ ನ್ಯಾಯಮೂರ್ತಿಗಳಿಂದ ವಿವಿಧ ಬಗೆಯ ಗಿಡ ನೆಡುವ ಮುಖಾಂತರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಇದೇ ಸಂದರ್ಭದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜು ಉಪ ಪ್ರಾಂಶುಪಾಲರಾದ ಚಂದ್ರಶೇಖರ್ ಹಾಜರಿದ್ದರು.
