ಉದಯವಾಹಿನಿ, ಬೆಂಗಳೂರು: ನಟ- ನಿರೂಪಕ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನ ಅವರು ಹೃದಯಾಘಾತದಿಂದ ನಿಧರಾಗಿದ್ದಾರೆ. ಕಳೆದ ಶುಕ್ರವಾರ ಕುಟುಂಬದ ಜೊತೆ ಥೈಲ್ಯಾಂಡ್ ವಿದೇಶ ಪ್ರವಾಸ ತೆರಳಿದ್ದ ಸಂದರ್ಭದಲ್ಲಿ ಅವರಿಗೆ ತೀವ್ರ ಹೃದಯಾಘಾತವಾಗಿದ್ದು ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಕಳೆದ ರಾತ್ರಿ ಅವರು ನಿಧನರಾಗಿದ್ದಾರೆ.
ಈ ವಿಷಯ ತಿಳಿಯುತ್ತಿದ್ದಂತೆ ಚಂದನವನದ ಗಣ್ಯರು ದಿಗ್ಬ್ರಮೆ ವ್ಯಕ್ತಪಡಿಸಿದ್ದಾರೆ. ಬ್ಯಾಂಕಾಕ್‍ನ ಹೋಟೆಲ್‍ನಲ್ಲಿ ತಂಗಿದ್ದಾಗ ಅವರಿಗೆ ಎದೆ ನೋವು ಕಾಣಿಸಿಕೊಂಡಿದ್ದು, ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋದೆವು ಆದರೆ ದುರಾದೃಷ್ಟವಶಾತ್ ಈ ದುರಂತ ನಡೆದಿದ್ದು, ನಮಗೆ ನಂಬಲು ಸಾಧ್ಯಲಾಗುತ್ತಿಲ್ಲ ಎಂದು ಕಟುಂಬದ ಮೂಲಗಳು ತಿಳಿಸಿವೆ.
ಹಲವು ಚಿತ್ರಗಳಲ್ಲಿ ನಟಿಸಿದ್ದ ಸ್ಪಂದನ ಅವರು ಸದಾ ಲವಲವಿಕೆಯಿಂದ ಇದ್ದರು. ಆದರೆ ಆವರಿಗೆ ಯಾವುದೇ ರೀತಿಯ ಆರೋಗ್ಯದ ಸಮಸ್ಯೆ ಇರಲಿಲ್ಲ. ಪತಿ ವಿಜಯರಾಘವೇಂದ್ರ ಜೊತೆಗೆ ಹಲವು ಕಾರ್ಯಕ್ರಮಗಳಲ್ಲಿ ಬಾಗಿಯಾಗುತ್ತಿದ್ದರು. ಇತ್ತೀಚೆಗೆ ಚುನಾವಣಾ ಪ್ರಚಾರಕ್ಕೂ ಕೂಡ ಪಾಲ್ಗೊಂಡಿದ್ದರು. ಇದು ಕುಟುಂಬಕ್ಕೆ ಬರಸಿಡಿಲಂತೆ ಸಾವಿನ ಸುದ್ದಿ ಬಂದಿದೆ. ಇದನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಸ್ಪಂದನ ಅವರ ಮಾವ ಚಿನ್ನೇಗೌಡ ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!