
ಉದಯವಾಹಿನಿ,ಮಾಲೂರು: ತಾಲ್ಲೂಕಿನ ಜಯಮಂಗಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಆಡಳಿತ ಮಂಡಳಿಗೆ 11 ಮಂದಿ ನಿರ್ದೇಶಕರು ಚುನಾವಣೆಯಲ್ಲಿ ಜಯಗಳಿಸಿದ್ದಾರೆ.
ಸಹಕಾರ ಸಂಘದ ಮುಂದಿನ 5 ವರ್ಷದ ಅವಧಿಗೆ ಸಾಲಗಾರರ ಕ್ಷೇತ್ರದ ಸಾಮಾನ್ಯ, ಪರಿಶಿಷ್ಟ ಜಾತಿ,ಹಿಂದುಳಿದ ವರ್ಗ(ಪ್ರವರ್ಗ-ಎ), (ಪ್ರವರ್ಗ-ಬಿ) ಕ್ಷೇತ್ರದ ಒಟ್ಟು 11 ಸ್ಥಾನಗಳಿಗೆ ನಿಗದಿಯಾಗಿದ್ದ
ಚುನಾವಣೆಗೆ ಒಟ್ಟು 33 ಮಂದಿ ನಾಮಪತ್ರ ಸಲ್ಲಿಸಿದ್ದರು. ಈ ಪೈಕಿ 11 ಮಂದಿ ನಾಮಪತ್ರ ಹಿಂಪಡೆದಿದ್ದ ಕಾರಣ ಉಳಿದ 8 ಸ್ಥಾನಗಳಿಗೆ ಅಂತಿಮ ಅಖಾಡದಲ್ಲಿ 19 ಮಂದಿ ಕಣದಲ್ಲಿ ಉಳಿದು ಚುನಾವಣೆ ನಡೆಯಿತು.ಚುನಾವಣಾಧಿಕಾರಿಯಾಗಿ ಅಭೀದ್ ಹುಸೇನ್ ಅವರು ಕಾರ್ಯನಿರ್ವಹಿಸಿದ್ದು, ಚುನಾವಣೆಯಲ್ಲಿ ನೂತನ ನಿರ್ದೇಶಕರಾಗಿ ಎಸ್.ಗುರುಮೂರ್ತಿರೆಡ್ಡಿ, ನಾಗೇಶ್.ವಿ, ಕೆಂಪಯ್ಯ, ಸತೀಶ್.ವಿ, ಪ್ರಭಾಕರ್‌ರೆಡ್ಡಿ,ಶ್ರೀನಿವಾಸ್.ಕೆ, ಎಂ.ಶ್ರೀನಿವಾಸಯ್ಯ, ಎಸ್.ನಾರಾಯಣಸ್ವಾಮಿ, ರಾಜಪ್ಪ ಜಯಗಳಿದ್ದು, ಮೀಸಲು ಕ್ಷೇತ್ರದಿಂದ ದೊಡ್ಡ ಅಮ್ಮಯ್ಯ, ಮುನಿವೆಂಕಟಮ್ಮ ಅವಿರೋಧವಾಗಿ ಆಯ್ಕೆಯಾಗಿರುವುದಾಗಿ ಚುನಾವಣಾಧಿಕಾರಿ ತಿಳಿಸಿದರು.ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಎಟ್ಟಕೋಡಿ ಕೃಷ್ಣಾರೆಡ್ಡಿ ಮಾತನಾಡಿ ಇದೇ ಮೊದಲ ಬಾರಿಗೆ 25 ವರ್ಷಗಳ ನಂತರ ಚುನಾವಣೆ ಪ್ರಕಿಯೆ ನಡೆಯುತ್ತಿದ್ದು 25 ವರ್ಷಗಳಿಂದ ಯಾವುದೇ ಚುನಾವಣೆ ಇಲ್ಲದೆ ಎಲ್ಲರ ವಿಶ್ವಾಸದಿಂದ ಒಗ್ಗೂಡಿಸಿ ಗೊಂಡು ಅವಿರೋಧವಾಗಿ ನಿರ್ದೇಶಕರ ಆಯ್ಕೆ ಮಾಡಿಕೊಂಡು ಸಹಕಾರ ಸಂಘವನ್ನು ಮುನ್ನಡೆಸಿಕೊಂಡು ಯಾವುದೇ ಪಕ್ಷಪಾತ ವಿಲ್ಲದೆ ಬರಲಾಗುತ್ತಿದೆ.ಅದೇ ರೀತಿಯಲ್ಲಿ ಅಧ್ಯಕ್ಷರನ್ನು ಸಹ ಅವಿರೋಧವಾಗಿ ಒಮ್ಮತದಿಂದ ಆಯ್ಕೆ ಮಾಡಲಾಗುವುದು ಎಂದರು.ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಗುರುನಾಥ್ ರೆಡ್ಡಿ, ವುಡನ್ ನಾರಾಯಣಪ್ಪ, ವಕೀಲ ಸತೀಶ್, ಕಾರ್ಯನಿರ್ವಹಣಾ ಅಧಿಕಾರಿಗಳಾದ ಆರ್.ಶಿವಶಂಕರ್, ವೇಣುಗೋಪಾಲ್, ವೆಂಕೋಬರಾವ್, ರಾಮಪ್ಪ ಹಾಜರಿದ್ದರು.
