ಉದಯವಾಹಿನಿ, ಕೆ.ಆರ್.ಪೇಟೆ: ಸೂಕ್ತ ಸಮಯಕ್ಕೆ ಸೂಕ್ತ ಲಸಿಕೆ ಹಾಕಿಸುವುದು ಪೋಷಕರ ಕರ್ತವ್ಯವಾಗಿದ್ದು ಮಕ್ಕಳಲ್ಲಿ ಕಾಣಿಸುವ ಅಪಾಯಕಾರಿ ಏಳು ರೋಗಗಳನ್ನು ನಿರ್ಮೂಲನೆ ಮಾಡಲು ರೂಪಿಸಿರುವ ಇಂದ್ರಧನುಷ್ ಯೋಜನೆಯನ್ಮು ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಬಂಡಿಹೊಳೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಪುನೀತ್ ತಿಳಿಸಿದರು.
ಅವರು ತಾಲ್ಲೂಕಿನ ಕಸಬಾ ಹೋಬಳಿಯ ಬಂಡಿಹೊಳೆ ಆಸ್ಪತ್ರೆಯಲ್ಲಿ ಮಕ್ಕಳಿಗೆ ಚುಚ್ಚುಮದ್ದು ಹಾಕುವ ಮೂಲಕ ಇಂದ್ರಧನುಷ್ ೫.೦ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಇದು ಮಕ್ಕಳಿಗೆ ಮತ್ತು ಗರ್ಭಿಣಿ ಮಹಿಳೆಯರಿಗೆ ಲಸಿಕೆ ನೀಡುವ ಯೋಜನೆಯಾಗಿದ್ದು ವಲಸಿಗರು, ಕೊಳೆಗೇರಿಗಳು, ಅಲೆಮಾರಿಗಳು, ಇಟ್ಟಿಗೆ ಗೂಡುಗಳು, ನಿರ್ಮಾಣ ಸ್ಥಳ, ಮೀನುಗಾರರ ಗ್ರಾಮಗಳು, ನದಿ ತೀರ ಪ್ರದೇಶದ ವಲಸಿಗರು, ಕಡಿಮೆ ಸೇವಾ ವ್ಯಾಪ್ತಿಯನ್ನು ಹೊಂದಿರುವ ಪ್ರದೇಶಗಳು, ಅರಣ್ಯ ಪ್ರದೇಶಗಳು ಮತ್ತು ಬುಡಕಟ್ಟು ಪ್ರದೇಶಗಳಲ್ಲಿ ವಾಸಿಸುವವರನ್ನು ಕೇಂದ್ರೀಕರಿಸಿ ಲಸಿಕೆಯನ್ನು ಹಾಕಬೇಕು. ಫಲಾನುಭವಿಗಳ ಎಲ್ಲಾ ನಮೂದುಗಳನ್ನು ಡಿಜಿಟಲ್ ಪ್ಲಾಟ್‌ಫಾರ್ಮ್ನಲ್ಲಿ ಆಧಾರ್‌ಕಾರ್ಡ್ ಮತ್ತು ಪೋಷಕರು ಅಥವಾ ಫಲಾನುಭವಿಗಳ ಫೋನ್ ಸಂಖ್ಯೆಯೊAದಿಗೆ ಪರಿಶೀಲನೆಯ ನಂತರ ಪ್ರತಿ ಅರ್ಹ ಫಲಾನುಭವಿಯನ್ನು UWIಓ ಪ್ಲಾಟ್‌ಫಾರ್ಮ್ನಲ್ಲಿ ನೋಂದಾಯಿಸಬೇಕಿದೆ ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳು ಬದ್ದತೆಯಿಂದ ಕೆಲಸ ಮಾಡುವ ಮೂಲಕ ಆರೋಗ್ಯವಂತ ಸಮಾಜದ ನಿರ್ಮಾಣಕ್ಕೆ ತಳಪಾಯ ಹಾಕಬೇಕು ಎಂದು ಡಾ.ಪುನೀತ್ ತಿಳಿಸಿದರು. ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯೆ ಜಯಲಕ್ಷಿö್ಮ, ಅಣ್ಣಪ್ಪ, ಸಮುದಾಯ ಆರೋಗ್ಯಾಧಿಕಾರಿ ಶಾರದ, ಪ್ರೀತಿ, ಶುಶ್ರೂಶಕಿ ಸೌಮ್ಯ, ರಮ್ಯ, ಐಶ್ವರ್ಯ, ರಾಮು, ಕೃಷ್ಣ, ಶೀಲ ಮತ್ತು ಆಶಾ ಕಾರ್ಯಕರ್ತೆಯರು, ಗರ್ಭಿಣಿಯರು ಹಾಜರಿದ್ದರು.
