ಉದಯವಾಹಿನಿ, ದೇವದುರ್ಗ: ವೈದ್ಯರು ನೆಪ ಹೇಳುವ ಕೆಲಸ ಬಿಟ್ಟು ರೋಗಿಗಳ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಪ್ರಮಾಣಿಕ ಸೇವೆ ಕೊಡಿ ಎಂದು ಶಾಸಕಿ ಕರೆಮ್ಮ ಗೋಪಾಲಕೃಷ್ಣ ವೈದ್ಯರಿಗೆ ಸೂಚನೆ ನೀಡಿದರು. ಪಟ್ಟಣದ ಸಾರ್ವಜನಿಕ ಸರಕಾರಿ ಆಸ್ಪತ್ರೆಯಲ್ಲಿ ಹಮ್ಮಿಕೊಂಡಿದ್ದ, ಪರಿಣಾಮಕಾರಿ ಮಿಷನ್ ಇಂದ್ರಧನುಷ್ ಲಸಿಕಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಇಂತಹ ಲಸಿಕಾ ಕಾರ್ಯಕ್ರಮ ಮಾಡುವುದ್ದರಿಂದ ರೋಗಗಳನ್ನು ತಡೆಗಟ್ಟಬಹುದು. ಗ್ರಾಮೀಣ ಭಾಗದಲ್ಲಿ ಜಾಗೃತಿ ಮೂಡಿಸುವ ಜತೆ ಗುರಿ ಮುಟ್ಟುವ ಕೆಲಸ ಮಾಡಬೇಕು. ಗರ್ಭಿಣಿಗೆ ಪೌಷ್ಠಿಕ ಆಹಾರ ನೀಡುವ ಕುರಿತು ಜಾಗೃತಿ ಮೂಡಿಸಿ. ಪ್ರತಿಯೊಂದು ಮನೆ ಮನೆಗೆ ಹೋಗಿ ಆರೋಗ್ಯ ಸಿಬ್ಬಂದಿಗಳು ಮಗುವಿಗೆ ಲಸಿಕಾ ಹಾಕುವ ಕೆಲಸ ಮಾಡಬೇಕು ಎಂದು ಹೇಳಿದರು. ರೋಗಿಗಳು ವೈದ್ಯರನ್ನು ದೇವರೆಂದು ನಂಬಿ ಕೊಂಡು ಆಸ್ಪತ್ರೆಗೆ ಬರುತ್ತಾರೆ. ಅವರ ಭಾವನೆಗಳಿಗೆ ದಕ್ಕೆ ಬರದಂತೆ ಗುಣಮಟ್ಟ ಚಿಕಿತ್ಸೆ ನೀಡಿ ದೇವರಂತೆ ಕಾಣಿ ಎಂದು ಕಿವಿಮಾತು ಹೇಳಿದರು. ಶಾಸಕರು ಕಾರ್ಯಕ್ರಮಕ್ಕೆ ಬರುತ್ತಾರೆ ಎಂದು ಎಲ್ಲವೊ ಸ್ವಚ್ಛತೆ ವಾತಾವರಣವೇ ಬೇರನ್ನೇ ಕಾಣುವಂತೆ ಮಾಡಿದ್ದೀರಿ. ಮೊತ್ತೊಮ್ಮ ಆಸ್ಪತ್ರೆಗೆ ಯಾವಾಗ ಭೇಟಿ ನೀಡುತ್ತೇನೆ ಗೊತ್ತಿಲ್ಲ. ದೂರುಗಳು ಬರದಂತೆ ನೋಡಿಕೊಂಡು ಕರ್ತವ್ಯ ನಿರ್ವಹಿಸಿ ಎಂದು ಹೇಳಿದರು. ಆಸ್ಪತ್ರೆಗೆ ಡಯಲಿಷ್ ಅಗತ್ಯವಿದ್ದು, ಸರಕಾರ ಮಟ್ಟದಲ್ಲಿ ಸಂಬಂಧಪಟ್ಟ ಮಂತ್ರಿ ಜೊತೆ ಮಾತಾಡುತ್ತೇನೆ. ಯಾವ ಯಾವ ಚಿಕಿತ್ಸೆಗೆ ಎಷ್ಟೇಷ್ಟು ಹಣ ನಾಮಫಲಕ ಬೋರ್ಡ್ ಹಾಕಿ. ರೋಗಿಗಳಿಗೆ ಪೂರಕ ಮಾಹಿತಿ ಲಭ್ಯವಾಗುತ್ತದೆ. ಹೆರಿಗೆ ವೇಳೆ ಸ್ಟಾಪ್‍ನರ್ಸ್‍ಗಳು ರೋಗಿಗಳಿಗೆ ಹಣ ಬೇಡಿಕೆ ದೂರಗಳು ಬರುತ್ತಿವೆ. ಇಂತಹ ದಂಧೆಗೆ ಕಡಿವಾಣ ಹಾಕುವಂತೆ ವೈದ್ಯರಿಗೆ ಶಾಸಕಿ ಸೂಚನೆ ನೀಡಿದರು. ಇನ್ನು ಖಾಸಗಿ ಆಸ್ಪತ್ರೆಗಳಿಂದ ದೂರುಗಳು ಹೆಚ್ಚಿವೆ. ಬಡರೋಗಿಗಳಿಗೆ ಉತ್ತಮ ಗುಣಮಟ್ಟದ ಸೇವೆ ನೀಡುವ ಕಡೆ ವೈದ್ಯರು, ಸಿಬ್ಬಂದಿಗಳು ಗಮನಕೊಡಿ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ತಹಶೀಲ್ದಾರ ಚನ್ನಮಲ್ಲಪ್ಪ ಘಂಟಿ, ಇಒ ರಾಮರೆಡ್ಡಿ ಪಾಟೀಲ್, ಶೇಖಮುನ್ನಬೈ, ತಬುಸ್ಸಮ್ ಶಾಲಂ, ಡಾ.ಶಿವಾನಂದ, ಡಾ.ನಿರ್ಮಲ, ಡಾ.ಗಂಗಾಧರ್, ಡಾ.ನಾಗರಾಜ ಸೇರಿದಂತೆ ಇತರರ ಇದ್ದರು.
