
ಉದಯವಾಹಿನಿ, ಚಿಂತಾಮಣಿ: ತಾಲೂಕಿನ ಕೈವಾರ ಹೋಬಳಿಯ ಮಸ್ತೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಗುಟ್ಟಹಳ್ಳಿ ಗ್ರಾಮದಲ್ಲಿ 15ನೇ ಹಣಕಾಸು ಯೋಜನೆಯಯಡಿಯಲ್ಲಿ ಸರಿ ಸುಮಾರು 2.80 ಲಕ್ಷ ಅನುದಾನದಲ್ಲಿ ನಿರ್ಮಾಣವಾಗಿರು ಶುದ್ಧ ಕುಡಿಯುವ ನೀರಿನ ಘಟಕವನ್ನು ಗ್ರಾಮ ಪಂಚಾಯತಿ ಅಧ್ಯಕ್ಷೆ ಪಿ.ಉಮಾ ರಾಜಣ್ಣ ರವರು ಉದ್ಘಾಟಿಸಿ ಚಾಲನೆ ನೀಡಿದರು.ಈ ವೇಳೆ ಮಾತನಾಡಿದ ಗ್ರಾಮ ಪಂಚಾಯತಿ ಸದಸ್ಯರಾದ ಜಿ.ಎಸ್ ಮಂಜುನಾಥ್ ಹಾಗೂ ಮುಖಂಡರಾದ ಜೆಸಿಬಿ ಶಿವು ಹಳ್ಳಿಯ ಜನರಿಗೆ ಶುದ್ಧ ಕುಡಿಯುವ ನೀರು ನೀಡಲು
ಬಹು ದಿನಗಳ ಕನಸು ಆಗಿತ್ತು ಅದಕ್ಕೆ ಇಂದು ಚಾಲನೆ ಸಿಕ್ಕಿದೆ. ಐದು ರೂಪಯಿಗೆ ಒಂದು ಕ್ಯಾನ್ ಕುಡಿಯುವ ನೀರು ಲಭ್ಯವಾಗುತ್ತದೆ ಎಂದು ಹೇಳಿದವರು ನೀರಿನ ಘಕಟದ ಪಕ್ಕದಲ್ಲಿ ತಿಪ್ಪೆ ಗುಂಡಿ ಹಾಕಿ ಸ್ವಚ್ಚತೆ ಹಾಳುಮಾಡುತ್ತಿರುವ ಬಗ್ಗೆ ಅಧಿಕಾರಗಳ ಗಮನಕ್ಕೆ ತಂದರು ತಿಪ್ಪೆ ಗುಂಡಿ ತೆರವು ಗೊಳಿಸುವಲ್ಲಿ ಅಧಿಕಾರಿಗಳು ಸಂಪೂರ್ಣ ವಿಫಲವಾಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಅಂಬರೀಶ್, ಲಕ್ಷ್ಮೀನಾರಾಯಣಪ್ಪ,ಕೋಟೆ ಮುನಿಯಪ್ಪ ,ಚಿಕ್ಕಗುಟ್ಟಹಳ್ಳಿ ಕೃಷ್ಣಾಪ್ಪ ,ದೇವರಾಜ್ ,ಮುನಿರಾಜು ,ಹನುಮಂತ,ಸೊಣ್ಣಪ್ಪ ,ನಾರಾಯಣ ಸ್ವಾಮಿ,ಮಂಜುನಾಥ ಅಕ್ಕಯಮ್ಮ,ಉಶಾ, ಬಾಗ್ಯಮ್ಮ ,ಮೋಹನ ಬಾಬು,ಚಿಕ್ಕ ಮುನಿಸ್ವಾಮಿ ಸೇರಿದಂತೆ ಗ್ರಾಮಸ್ಥರು ಭಾಗವಹಿಸಿದ್ದರು.
