
ಉದಯವಾಹಿನಿ, ಮುದ್ದೇಬಿಹಾಳ ; ಚಿಮ್ಮಲಗಿ ಏತ ನೀರಾವರಿ ಎಡದಂಡೆ ಕಾಲುವೆ ನಿರ್ಮಾಣದ ವೇಳೆ ಕಾಲುವೆಗಾಗಿ ಜಮೀನು ಕಳೆದುಕೊಂಡ ರೈತರಿಗೆ ಕಳೆದ 12 ವರ್ಷದಿಂದ ಪರಿಹಾರವನ್ನು ನೀಡಿಲ್ಲ ಮತ್ತು ಕಾಲುವೆ ನಿರ್ಮಾಣ ವೇಳೆ ರೈತರು ತಮ್ಮ ಜಮೀನಿನಲ್ಲಿ ಬೆಳೆದ ಬೆಳೆ ಸಹ ನಷ್ಟವಾಗಿತ್ತು ಆ ಬೆಳೆಯ ಪರಿಹಾರವನ್ನು ನೀಡಿಲ್ಲ ವೆಂದು ಮುದ್ದೇಬಿಹಾಳ ತಾಲ್ಲೂಕಿನ ಸಿದ್ದಾಪುರ ಪಿಟಿ ಗ್ರಾಮದ ರೈತರು ಕಾಲುವೆಗೆ ಮಣ್ಣು ಹಾಕಿ ಕಾಲುವೆಯ ನೀರು ಬಂದ್ ಮಾಡಿ ಶನಿವಾರದಿಂದ ಪ್ರತಿಭಟನೆ ಮೂಲಕ ಅಧಿಕಾರಿಗಳಿಗೆ ಪರಿಹಾರ ಒದಗಿಸುವಂತೆ ಆಗ್ರಹಪಡಿಸುತ್ತಿದ್ದಾರೆಈ ವಿಷಯ ಕುರಿತಂತೆ ರೈತರು ಅನೇಕ ಬಾರಿ ಕೃಷ್ಣಭಾಗ್ಯಜಲ ನಿಗಮದ ಅಧಿಕಾರಿಗಳಿಗೆ ಪರಿಹಾರ ಕುರಿತು ಮನವಿ ಮಾಡಿದಾಗ ನಿಮ್ಮ ಜಮೀನನಲ್ಲಿ ಕಾಲುವೆಯೇ ಇಲ್ಲ ಎಂಬ ಉಡಾಫೆಯ ಉತ್ತರ ನೀಡಿದ ಕಾರಣ ನಾವು ನಮ್ಮ ಜಮೀನನಲ್ಲಿ ಇರುವ ಕಾಲುವೆಗೆ ಮಣ್ಣು ಹಾಕಿ ಬಂದ್ ಮಾಡಿದ್ದೇವೆ ಈಗಲಾದರೂ ಅಧಿಕಾರಿಗಳು ನಮ್ಮ ಜಮೀನನಲ್ಲಿ ಕಾಲುವೆ ಇದೆ ಇಲ್ವಾ ? ನೋಡಿ ನಮಗೆ ಪರಿಹಾರವನ್ನು ಒದಗಿಸಿ ಎಂದು ಆಗ್ರಹಿಸಿದ್ದಾರೆರೈತರು ಕಾಲುವೆಗೆ ಮಣ್ಣು ಹಾಕಿ ಪ್ರತಿಭಟನೆ ನಡೆಸುತ್ತಿರುವ ಸುದ್ದಿ ತಿಳಿದು ಘಟನಾ ಸ್ಥಳಕ್ಕೆ ದೌಡಾಯಿಸಿದ ಕೃಷ್ಣಾ ಭಾಗ್ಯ ಜಲನಿಗಮದ ಅಧಿಕಾರಿಗಳು ರೈತರ ಮನವೂಲಿಸಿ ಕಾಲುವೆಗೆ ಹಾಕಿರುವ ಮಣ್ಣು ತಗೆಯುವಂತೆ ವಿನಂತಿಸಿದರು ರೈತರು ಇದಕ್ಕೆ ಒಪ್ಪದೆ ನಮಗೆ ಕಳೆದ 12 ವರ್ಷದಿಂದ ನೀಡಬೇಕಿರುವ ಪರಿಹಾರವನ್ನು ನೀಡುವವರಗೆ ಈ ಪ್ರತಿಭಟನೆ ನಿಲ್ಲುವುದಿಲ್ಲ ಕಾಲುವೆಗೆ ಹಾಕಿರುವ ಮಣ್ಣು ತಗೆಯುವುದಿಲ್ಲವೆಂದು ಪಟ್ಟು ಹಿಡಿದ್ದಾರೆಈ ವೇಳೆ ಮಾತನಾಡಿದ ಸಿದ್ದಪೂರ ಪಿಟಿ ಗ್ರಾಮದ ಭೂಮಿ ಕಳೆದುಕೊಂಡ ಸಂತ್ರಸ್ತ ರೈತರಾದ ವಿಠ್ಠಲ್ ಹಾಲ್ಯಾಳ, ಗುರು ರಾಯಗೂಂಡ ಮಾತನಾಡಿ ಚಿಮ್ಮಲಗಿ ಏತ ನೀರಾವರಿ ಯೋಜನೆಯ ಎಡದಂಡೆ ಕಾಲುವೆಯ ಹೆಚ್ಚುವರಿ ಕ್ಷೇತ್ರದ ೦ ,484 ದಿಂದ 2.193 ಕಿಮೀ ವರಗಿನ ಜಮೀನು ಕಳೆದುಕೊಂಡ ರೈತರಿಗೆ ಪರಿಹಾರವನ್ನು ಒದಗಿಸಿಲ್ಲ ಕಾಲುವೆ ನಿರ್ಮಾಣವಾಗಿ 12 ವರ್ಷ ಮುಗಿಯುತ್ತಾ ಬಂದಿದ್ದರು ಪರಿಹಾರವನ್ನು ನೀಡಿಲ್ಲ ರೈತರ ಸಮಸ್ಯೆಯನ್ನು ಅಧಿಕಾರಿಗಳು ಅರಿಯಬೇಕು ಉಡಾಫೆಯಾಗಿ ಮಾತನಾಡುವುದಲ್ಲಾ ಆಶ್ವಾಸನೆ ಬಿಟ್ಟು ಪರಿಹಾರವನ್ನು ನೀಡಿಬೇಕು ಎಂದರುಕೃಷ್ಣ ಭಾಗ್ಯಜಲ ನಿಗಮದ ಅಧಿಕಾರಿಗಳು ಪೊಲೀಸರನ್ನು ಮುಂದೆ ಇಟ್ಟು ನ್ಯಾಯಕ್ಕಾಗಿ ಹೋರಾಡುತ್ತಿರುವ ರೈತರನ್ನು ಹತ್ತಿಕ್ಕುವ ತಂತ್ರ ಮಾಡುತ್ತಿದ್ದಾರೆ ರೈತರ ಕಷ್ಟ ಬದುಕು ಏನೆಂದು ಅರಿಯದ ಅಧಿಕಾರಿಗಳಿಗೆ ನೈತಿಕತೆಯ ಜವಾಬ್ದಾರಿ ಬಗ್ಗೆ ತಿಳಿದಿದೆಯಾ? ನಮಗೆ ಬರಬೇಕಿರುವ ಪರಿಹಾರ ನೀಡುವರಗೆ ಈ ಹೋರಾಟ ನಿಲ್ಲುವುದಿಲ್ಲ ಒಂದು ವೇಳೆ ರೈತರ ಈ ಹೋರಾಟ ತಡೆದು ಕಾಲುವೆಗೆ ಹಾಕಿರುವ ಮಣ್ಣು ತಗೆದರೆ ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ ಎಂದು ರೈತರು ಎಚ್ಚರಿಕೆ ನೀಡಿದ್ದಾರೆ , ಪ್ರತಿಭಟನೆಯಲ್ಲಿ ರೈತರಾದ ಶಾಂತಪ್ಪ ಬ್ಯಾಕೋಡ್, ಗುರು ಗೋಡಿಕಾರ,ಸಿದ್ದಪ್ಪ ಸೋಮನಾಳ,ಶಿವಾನಂದ ಬಾಗೇವಾಡಿ, ಮುತ್ತಪ್ಪ ಗೋಡಿಕಾರ ಉಪಸ್ಥಿತರಿದ್ದರು.
ಸಂಧಾನ ವಿಫಲ; ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಕೆಬಿಜೆಎನ್ ಎಲ್ ಅಧಿಕಾರಿಗಳಾದ ಆರ್ ಎಲ್ ಹಳ್ಳೂರ, ಎಸ್ ಎಲ್ ಒ ಶಿವಾನಂದ ಸಾಗರ, ಎಇಇ ಅಬೂಬಕ್ಕರ್ ಬಾಗವಾನ ಮತ್ತು ಪಿಎಸೈ ಆರಿಫ್ ಮುಶಾಪೂರಿ ನಡೆಸಿದ ಸಂಧಾನ ವಿಫಲಗೂಂಡಿದ್ದು ರೈತರ ಹೋರಾಟ ಮುಂದುವರೆದಿದೆ.
