ಉದಯವಾಹಿನಿ, ಮಧ್ಯಪ್ರದೇಶ: ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಇನ್ನೂ ಹೆಚ್ಚಿನ ಚಿರತೆಗಳು ಸಾಯುವ ಸಂಭವವಿದೆ ಎಂದು ದಕ್ಷಿಣ ಆಫ್ರಿಕಾದ ತಜ್ಞರು ಹೇಳಿದ್ದಾರೆ. ೨೦ ಚಿರತೆಗಳಲ್ಲಿ ೫-೭ ಚಿರತೆಗಳು ಮಾತ್ರ ಇಲ್ಲಿ ಬದುಕಬಲ್ಲವು. ಇದಕ್ಕೆ ಹಲವಾರು ಕಾರಣಗಳಿವೆ. ಭಾರತದಲ್ಲಿ ಚಿರತೆಗಳ ಸಾವು ಸಹಜವಾಗಿದ್ದು, ಅವುಗಳನ್ನು ಉಳಿಸಲು ಮತ್ತೊಂದು ತಂತ್ರ ರೂಪಿಸಬೇಕು ಎಂದರು.
’ಪ್ರಾಜೆಕ್ಟ್ ಚೀತಾ’ ಅಡಿಯಲ್ಲಿ, ಮಧ್ಯಪ್ರದೇಶದ ಶಿಯೋಪುರದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಬಿಡುಗಡೆಯಾದ ನಮೀಬಿಯಾ ಮತ್ತು ದಕ್ಷಿಣ ಆಫ್ರಿಕಾದ
ಚೀತಾವನ್ನು ಭಾರತಕ್ಕೆ ಕರೆತರುವ ಯೋಜನೆಯನ್ನು ಹಾಕಿಕೊಂಡಿತು. ಅದರಂತೆ ಎರಡು ಹಂತದಲ್ಲಿಒಟ್ಟು ೨೦ ಚೀತಾಗಳನ್ನು ಮಹಾರಾಷ್ಟ್ರದ ಕುನೋ ರಾಷ್ಟ್ರೀಯ ಉದ್ಯಾನಕ್ಕೆ ತಂದು ಬಿಡಲಾಯಿತು.
ಆದರೆ ಚೀತಾಗಳ ಸರಣಿ ಸಾವು ಅವುಗಳ ಮರು ಸೇರ್ಪಡೆ ಯೋಜನೆಗೆ ಗ್ರಹಣ ಬಡಿದಂತಾಗಿದೆ. ಇದುವರೆಗೆ ಮರಿಗಳು, ಗಂಡು ಮತ್ತು ಹೆಣ್ಣು ಚಿರತೆ ಸೇರಿದಂತೆ ಒಟ್ಟು ೯ ಸಾವುಗಳು ಸಂಭವಿಸಿವೆ. ಈ ಘಟನೆಗಳ ನಂತರ, ’ಪ್ರಾಜೆಕ್ಟ್ ಚೀತಾ’ ಯಶಸ್ಸಿನ ಬಗ್ಗೆ ಅನುಮಾನಗಳು ವ್ಯಕ್ತವಾಗುತ್ತಿವೆ. ಆ
ದರೆ ದಕ್ಷಿಣ ಆಫ್ರಿಕಾದ ತಜ್ಞರು ಇಂತಹ ಪುನರ್ವಸತಿ ಯೋಜನೆಗಳಲ್ಲಿ ಚಿರತೆಗಳ ಸಾವು ಸಾಮಾನ್ಯ ವಿದ್ಯಮಾನವೆಂದು ಪರಿಗಣಿಸುತ್ತಾರೆ.
