ಉದಯವಾಹಿನಿ,
ಇಂಡಿ : ವೈದ್ಯರ ನಿರ್ಲಕ್ಷದಿಂದಾಗಿ ತಾಯಿಯ ಗರ್ಭದಲ್ಲಿಯೇ ಮಗು ಸಾವನ್ನಪ್ಪಿಪ್ಪಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆ ಎಂದು ಗರ್ಭಿಣಿಯ ಪೋಷಕರು ಆರೋಪಿಸಿದ್ದಾರೆ. ಗಜಕೋಶ ಆಸ್ಪತ್ರೆಯಲ್ಲಿ ಅವಘಡ ಸವಿತಾ ಧರ್ಮು ದಶವಂತ, ಎಂಬುವರ ಮಗು ಸಾವು, ಮಗು ಸಾವು ಹಿನ್ನೆಲೆ ಆಸ್ಪತ್ರೆಯ ಎದುರು ಕುಟುಂಬಸ್ಥರ ಪ್ರತಿಭಟನೆ, ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಆಕ್ರೋಶ ಹೊರಹಾಕಿದರು. ಸ್ಥಳಕ್ಕೆ ಪೊಲೀಸರು, ತಹಶೀಲ್ದಾರ್ ನಾಗಯ್ಯ ಹಿರೇಮಠ ಬೇಟಿ ನೀಡಿ ಪರಿಶೀಲಿಸಿದರು.
