ಉದಯವಾಹಿನಿ, ಗುವಾಹಟಿ
: ಹಿಂಸಾಚಾರ ಪೀಡಿತ ಮಣಿಪರದಲ್ಲಿ ನಾಗರಿಕರ ಮೇಲೆ ಕೇಂದ್ರೀಯ ಅರೆಸೇನಾ ಪಡೆ ದೌರ್ಜನ್ಯ ನಡೆಸುತ್ತಿದೆ ಎಂದು ಆರೋಪಿಸಿ ನೂರಾರು ಮಹಿಳಾ ಕಾರ್ಯಕರ್ತರು ಬೀದಿಗಿಳಿದು ಹೋರಾಟ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಷ್ಣುಪುರ ಜಿಲ್ಲೆಯ ಮೊಯಿರಾಂಗ್ ಲಾಮ್‌ಖೈನಲ್ಲಿನ ನಿರ್ಣಾಯಕ ಚೆಕ್‌ಪಾಯಿಂಟ್‌ನಲ್ಲಿ ಅಸ್ಸಾಂ ರೈಫಲ್ಸ್ ಪಡೆ ನೂರಾರು ಮಹಿಳೆಯರನ್ನು ತಡೆಯುವಲ್ಲಿ ಯಶಸ್ವಿಯಾಗಿದೆ. ಈ ಘಟನೆ ಹಿನ್ನೆಲೆಯಲ್ಲಿ ಬಿಷ್ಣುಪುರ್-ಕಾಂಗ್ವಾಯ್ ರಸ್ತೆಯ ಚೆಕ್‌ಪಾಯಿಂಟ್‌ನಲ್ಲಿ ತಕ್ಷಣದಿಂದಲೇ ಜಾರಿಗೆ ಬರುವಂತೆ ೯ ಅಸ್ಸಾಂ ರೈಫಲ್ಸ್ ಅನ್ನು ಪೊಲೀಸ್ ಮತ್ತು ಸಿಆರ್‍ಪಿಎಫ್ ತುಕಡಿಗಳು ಬದಲಾಯಿಸಲಿವೆ ಎಂದು ಪೊಲೀಸ್ ಮಹಾನಿರ್ದೇಶಕರು ಆದೇಶ ಹೊರಡಿಸಿದ್ದಾರೆ. ಮಣಿಪುರದಾದ್ಯಂತ ಹೊಸದಾಗಿ ಸಂಭವಿಸಿದ ಹಿಂಸಾಚಾರದಲ್ಲಿ ೨೩ ಮಂದಿ ಗಾಯಗೊಂಡಿದ್ದಾರೆ. ಮುಖ್ಯಮಂತ್ರಿ ಬಿರೆನ್ ಸರ್ಕಾರ ಕಾನೂನು ಸುವ್ಯವಸ್ಥೆ ಕಾಪಾಡಲು ವಿಫಲವಾಗಿದೆ ಎಂದು ಮಹಿಳೆಯರು ಆರೋಪಿಸಿದ್ದಾರೆ.
