ಉದಯವಾಹಿನಿ ಕುಶಾಲನಗರ:- ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಇತ್ತಿಚೆಗೆ ಮಡಿಕೇರಿ ಆಕಾಶವಾಣಿಯಿಂದ ನಿವೃತ್ತಿ ಹೊಂದಿದ ಕೂಪದಿರ ಶಾರದಾ ನಂಜಪ್ಪ ರವರನ್ನು ಅವರು ಆಕಾಶವಾಣಿಯಲ್ಲಿ ಸಲ್ಲಿಸಿದ ಸೇವೆಯನ್ನು ಗುರುತಿಸಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪಿ ಕೇಶವ ಕಾಮತ್, ಮಾಜಿ ಅಧ್ಯಕ್ಷ ಟಿ.ಪಿ. ರಮೇಶ್, ಗೌರವ ಕಾರ್ಯದರ್ಶಿ ರೇವತಿ ರಮೇಶ್, ನಿರ್ದೇಶಕರುಗಳಾದ  ವಿ.ಟಿ ಮಂಜುನಾಥ್, ಶೋಭಾ ಸುಬ್ಬಯ್ಯ, ಶ್ವೇತಾ ರವೀಂದ್ರ, ಸದಸ್ಯರುಗಳಾದ ಚೊಕ್ಕಾಡಿ ಪ್ರೇಮಾ ರಾಘವಯ್ಯ, ಸುಂದರಿ ಮಾಚಯ್ಯ, ಕಸ್ತೂರಿ ಗೋವಿಂದಮಯ್ಯ ಉಪಸ್ಥಿತರಿಧ್ದರು.
ಮಡಿಕೇರಿ ಎಫ್ಎಂ ರೇಡಿಯೋ ಸ್ಟೇಷನ್ ನಲ್ಲಿ ಕೂಪದಿರ ಶಾರದಾ ನಂಜಪ್ಪ ಕಳೆದ 30  ವಷ೯ಗಳಲ್ಲಿ ರೇಡಿಯೋ ಮೂಲಕ ಸಂಮೋಹನದ ರೀತಿಯಲ್ಲಿ  ಕೊಡಗಿನ ಮನೆ ಮನಗಳನ್ನೂ ತಲುಪಿದ್ದಾರೆ. ಸಂಹವನ ಮಾಧ್ಯಮದ ದೊಡ್ಡ ಶಕ್ತಿಯಾಗಿ ಶಾರದಾ ತಮಗೆ ಅರಿವಿಲ್ಲದಂತೆಯೇ ಬೆಳೆದಿದ್ದಾರೆ.  ವಿಶಿಷ್ಟ ಶೈಲಿಯ ಮಾತುಗಳ ಮೂಲಕ ಎಂಥವರಲ್ಲಿಯೂ ಸಂಭ್ರಮ ಉಂಟಾಗುವಂತೆ ಮಾಡಿದ್ದಾರೆ
 30  ವಷ೯ಗಳ ಸಾಥ೯ಕ ರೇಡಿಯೋ ಪಯಣವನ್ನು ಮುಕ್ತಾಯಗೊಳಿಸಿ ಶಾರದಾ ವೖತ್ತಿಯಿಂದ ನಿವೖತ್ತಿಯಾಗಿದ್ದಾರೆ. ಅವರ ನಿವೃತ್ತಿ ಜೀವನವು ಸುಖಕರವಾಗಿರಲಿ ಮತ್ತು ಮುಂದೆ ಸಮಾಜ ಸೇವೆಯಲ್ಲಿ ಅವರು ತೊಡಗಿಸಿಕೊಳ್ಳಲಿ ಎಂದು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಆಶಿಸುತ್ತದೆ.

Leave a Reply

Your email address will not be published. Required fields are marked *

error: Content is protected !!