ಉದಯವಾಹಿನಿ, ಶಿಡ್ಲಘಟ್ಟ; ದೇಶದ ಅರ್ಥವ್ಯವಸ್ಥೆಯಲ್ಲಿ ಚಲಾವಣೆಯಲ್ಲಿರುವ 2,000 ರೂಪಾಯಿ ಮುಖಬೆಲೆಯ ನೋಟುಗಳ ವಿನಿಮಯ ವಿಚಾರದಲ್ಲಿ ವಂಚನೆ ಎಸಗುವ ಜಾಲ ಈಗ ಸಕ್ರಿಯವಾಗಿದೆ. ಸಾರ್ವಜನಿಕರು ಯಾವುದೇ ರೀತಿಯ ಅನುಮಾನ ಬಂದ ಕೂಡಲೆ ಪೋಲಿಸ್ ಠಾಣೆಗೆ ಅಥವಾ 112 ಗೆ ಕರೆ ಮಾಡಿ ಎಂದು ಪಿ ಎಸ್ ಐ ಪಿ.ವಿ ಕೃಷ್ಣಪ್ಪ ತಿಳಿಸಿದರು.
ತಾಲ್ಲೂಕಿನ ಬಶೆಟ್ಟಹಳ್ಳಿ ಗ್ರಾಮದಲ್ಲಿ ಸಾರ್ವಜನಿಕರಿಗೆ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಚಲಾವಣೆಯಲ್ಲಿರುವ 2,000 ರೂಪಾಯಿ ಮುಖಬೆಲೆಯ ನೋಟುಗಳನ್ನು ಹಿಂಪಡೆಯುವ ತೀರ್ಮಾನವನ್ನು ಭಾರತೀಯ ರಿಸರ್ವ್‌ ಬ್ಯಾಂಕ್‌ ಪ್ರಕಟಿಸಿದೆ. ಸೆಪ್ಟೆಂಬರ್‌ 30ರ ತನಕ ವಿನಿಮಯ, ಠೇವಣಿ ಇರಿಸುವುದಕ್ಕೆ ಅವಕಾಶವನ್ನೂ ನೀಡಿದೆ. ಈ ಅವಕಾಶದ ದುರಪಯೋಗ ಪಡೆಯಲು ವಂಚಕರು ಸಕ್ರಿಯರಾಗಿದ್ದಾರೆ. ಕೆಲವು ದಂಧೆಕೋರರು ಜನರನ್ನು ವಂಚಿಸುವ ಕೆಲಸದಲ್ಲಿ ತೊಡಗಿದ್ದಾರೆ ಎಂದು ಎಚ್ಚರಿಕೆ ನೀಡಿದರು.
2,000 ರೂಪಾಯಿ ನೋಟು ವಿನಿಮಯಕ್ಕೆ ಹೀಗೆ ಮಾಡಿ
ನಿಮ್ಮ ಬಳಿ ಇರುವ 2,000 ರೂಪಾಯಿ ಮುಖಬೆಲೆಯ ನೋಟುಗಳನ್ನು ಯಾವುದೇ ಗೊಂದಲವಿಲ್ಲದೆ ನೇರವಾಗಿ ಬ್ಯಾಂಕುಗಳಿಗೆ ಹೋಗಿ ಜಮೆ ಮಾಡಿ ಅಥವಾ ವಿನಿಮಯ ಮಾಡಿಕೊಳ್ಳಿ. ಮಧ್ಯವರ್ತಿಗಳ ಅಥವಾ ವಂಚಕರ ಜಾಲಕ್ಕೆ ಸಿಲುಕಬೇಡಿ. ಈ ರೀತಿ ವಂಚನೆ ಸುಳಿವು ಸಿಕ್ಕರೆ ಅಥವಾ ವಂಚನೆಗೆ ಒಳಗಾದರೆ ಕೂಡಲೇ 112 ನಂಬರ್‌ಗೆ ಕರೆ ಮಾಡಿ ದೂರು ನೀಡುವಂತೆ ದಿಬ್ಬೂರಹಳ್ಳಿ ಠಾಣೆಯ ಪಿ ಎಸ್ ಐ ಪಿ.ವಿ ಕೃಷ್ಣಪ್ಪ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷ ಡಿ ಬಿ ವೆಂಕಟೇಶ್, ತಾ.ಪಂ ಮಾಜಿ ಅಧ್ಯಕ್ಷ ಬಿವಿ ನಾರಾಯಣಸ್ವಾಮಿ, ಚಿಕ್ಕತೇಕಹಳ್ಳಿ ಸಿ ವೆಂಕಟೇಶಪ್ಪ,ಪಿಸಿ ಶ್ರೀನಿವಾಸ್ ಜಿ.ವಿ ಹಾಗೂ ಸಾರ್ವಜನಿಕರು ಇದ್ದರು

Leave a Reply

Your email address will not be published. Required fields are marked *

error: Content is protected !!