ಉದಯವಾಹಿನಿ,ಹರಿಯಾಣ: ಹರಿಯಾಣದ ಹಿಂಸಾಚಾರ ಪೀಡಿತ ಗುರುಗ್ರಾಮ, ನೂಹ್ ಪ್ರದೇಶಗಳಿಗೆ ಭೇಟಿ ನೀಡಲು ಮುಂದಾದ ಒಂಬತ್ತು ಸದಸ್ಯರ ಕಾಂಗ್ರೆಸ್ ನಿಯೋಗವನ್ನು ಪೊಲೀಸರು ತಡೆದಿದ್ದಾರೆ.
ನಿಯೋಗದಲ್ಲಿ ಕಾಂಗ್ರೆಸ್ ಸಂಸದ ದೀಪೇಂದರ್ ಹೂಡಾ ಸೇರಿದಂತೆ ಹರಿಯಾಣ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಉದಯ್ ಭಾನ್ ಇದ್ದರು.
ಹಿಂಸಾಚಾರ ಪೀಡಿತ ಪ್ರದೇಶಗಳಲ್ಲಿ ಭದ್ರತಾ ನಿಯಮಗಳನ್ನು ಉಲ್ಲೇಖಿಸಿ ಪೊಲೀಸರು ಕಾಂಗ್ರೆಸ್ ಸದಸ್ಯರನ್ನು ತಡೆದಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.’ನಮ್ಮ ನಿಯೋಗವು ನೂಹ್, ನಲ್ಹಾರ್ ಮಂದಿರ ಮತ್ತು ಮಾರುಕಟ್ಟೆ ಪ್ರದೇಶಗಳಿಗೆ ಭೇಟಿ ನೀಡಲು ಬಯಸಿದ್ದು, ನಾವು ಸ್ಥಳೀಯರೊಂದಿಗೆ ಮಾತನಾಡಬೇಕಿದೆ. ಆದರೆ, ಈ ಎಲ್ಲಾ ಪ್ರದೇಶಗಳಲ್ಲೂ ಸಾಕಷ್ಟು ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಇದನ್ನು ಸರ್ಕಾರ ಮೊದಲೇ ಮಾಡಿದ್ದರೆ ಘರ್ಷಣೆ ಸಂಭವಿಸುತ್ತಿರಲಿಲ್ಲ’ ಎಂದು ದೀಪೇಂದರ್ ಹೂಡಾ ಹೇಳಿದ್ದಾರೆ.
