
ಉದಯವಾಹಿನಿ,ಶಿಡ್ಲಘಟ್ಟ : ತಲಕಾಯಲಬೆಟ್ಟ ಗ್ರಾಮ ಪಂಚಾಯತಿಯ ಎರಡನೇ ಅವಧಿಗೆ ತೆರವಾಗಿದ್ದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಪರಿಶಿಷ್ಟ ಜಾತಿ ಅಧ್ಯಕ್ಷ ಹಾಗೂ ಹಿಂದಳಿದ ವರ್ಗ ಎ ಮಹಿಳೆ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಿತು. ತಲಕಾಯಲಬೆಟ್ಟ ಗ್ರಾಮ ಪಂಚಾಯತಿಯ 14 ಸದಸ್ಯರನ್ನು ಹೊಂದಿದ್ದು, ಅಧ್ಯಕ್ಷ ಸ್ಥಾನಕ್ಕೆ ವೆಂಕಟರೋಣಪ್ಪ ಹಾಗೂ ಟಿ ಎಸ್ ವೆಂಕಟಸ್ವಾಮಿ ಸೇರಿ ಎರಡು ನಾಮಪತ್ರ ಸಲ್ಲಿಸಿದ್ದು,ಉಪಾಧ್ಯಕ್ಷ ಸ್ಥಾನಕ್ಕಾಗಿ ಶುಭಾವತಿ ವೆಂಕಟೇಶ್ ಅವರು ಮಾತ್ರ ನಾಮಪತ್ರ ಸಲ್ಲಿಸಲಾಗಿತ್ತು. ನಿಗದಿತ ಸಮಯದಲ್ಲಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ಮೂಲಕ ಆಂಜಿನಪ್ಪ ಪುಟ್ಟು ಬೆಂಬಲದ ವೆಂಕಟರೋಣಪ್ಪ ಅವರು 7 ಮತಗಳನ್ನು ಪಡೆದು, ಉಪಾಧ್ಯಕ್ಷ ಸ್ಥಾನದ ಶುಭಾವತಿ ವೆಂಕಟೇಶ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಒಂದು ಮತ ತಿರಸ್ಕೃತಗೊಂಡಿದೆ ಎಂದು ಚುನಾವಣಾಧಿಕಾರಿ ನಗರ ಸಭೆ ಆಯುಕ್ತ ಆರ್ ಶ್ರೀಕಾಂತ್ ಅವರು ತಿಳಿಸಿದರು. ತೀವ್ರ ಕುತೂಹಲ ಕೆರಳಿಸಿದ್ದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಜೀವ್ ಗೌಡ ಅವರ ಬೆಂಬಲಿತ ಅಭ್ಯರ್ಥಿಯನ್ನು ಸಮಾಜಸೇವಕ ಪುಟ್ಟು ಆಂಜಿನಪ್ಪ ಬೆಂಬಲಿತ ಅಭ್ಯರ್ಥಿ ವೆಂಕಟಸ್ವಾಮಿಯವರು ಒಂದ ಮತದ ಅಂತರದಿಂದ ರೋಚಕ ಗೆಲುವು ಪಡೆದು ಎದುರಾಳಿಯನ್ನು ಒಂದು ಮತದಿಂದ ವಿರೋಚಿತ ಸೋಲು ತೋರಿಸಿದ್ದಾರೆ.ಒಟ್ಟು14 ಸದಸ್ಯರು ಮತದಾನ ಮಾಡಿ, ಆಂಜಿನಪ್ಪ ಪುಟ್ಟು ಬೆಂಬಲದ ವೆಂಕಟರೋಣಪ್ಪ ಅವರು 7 ಮತಗಳನ್ನು ಪಡೆದು, ಒಂದು ಮತದ ಅಂತರದಿಂದ ರೋಚಕ ಗೆಲುವು ಸಾಧಿಸಿದ್ದಾರೆ.
ತಲಕಾಯಲಬೆಟ್ಟ ಗ್ರಾಪಂ ಯನ್ನು ಉನ್ನತ ಮಟ್ಟದಲ್ಲಿ ಅಭಿವೃದ್ಧಿ ಮಾಡಲು ಎಲ್ಲರ ಸಹಕಾರ ಪಡೆದು ಹೆಚ್ಚು ಅಭಿವೃದ್ಧಿ ಪಡಿಸಿ. ಕಟ್ಟ ಕಡೆಯ ವ್ಯಕ್ತಿಗೂ ಗ್ರಾಮ ಪಂಚಾಯಿತಿಯಿಂದ ಯಾವುದೇ ಅನುದಾನದಿಂದ ವಂಚಿತನಾಗದಂತೆ, ಯಾವುದೇ ಪಕ್ಷಪಾತವಿಲ್ಲದೆ ಸಹಕರಿಸಿ, ಗ್ರಾ ಪಂ ಅಭಿವೃದ್ಧಿ ಮಾಡಿ.
– ಆಂಜಿನಪ್ಪ ಪುಟ್ಟು ಸಮಾಜಸೇವಕರು.
ಈ ಸಂದರ್ಭದಲ್ಲಿ ಸಹಾಯಕ ಚುನಾವಣಾಧಿಕಾರಿ ಹೆಚ್ ಸಿ ಮುನಿರಾಜು,ಕಾರ್ಯದರ್ಶಿ, ಮಾದೇನಹಳ್ಳಿ ರವಿ, ತಲಕಾಯಲಬೆಟ್ಟ ಅಶ್ವತ್ಥನಾರಾಯಣರೆಡ್ಡಿ, ನಾರಾಯಣರೆಡ್ಡಿ,ಮಂಜುನಾಥ್,ವೆಂಕಟರೆ ಡ್ಡಿ,ಚಿಕ್ಕನರಸಪ್ಪ,ರಾಮಚಂದ್ರಪ್ಪ, ನಾರಾಯಣಪ್ಪ, ದೊಡ್ಡತೇಕಹಳ್ಳಿ ಗ್ರಾಪಂ ಮುಖಂಡ ಕೆ.ಬೈರಾರೆಡ್ಡಿ,ಮುನಿಶಾಮಿ, ಸಿಕೆ ಮಂಜುನಾಥ್, ಎಲ್ಲಾ ಸದಸ್ಯರು, ಸಿಬ್ಬಂದಿ ಹಾಗೂ ಮತ್ತಿತರರು ಇದ್ದರು.
