
ಉದಯವಾಹಿನಿ ಜೇವರ್ಗಿ: ಶಿವಲಿಂಗ ಪಾಟೀಲ್ ನರಬೋಳ ಎಜುಕೇಶನ್ ಚರಿಟೇಬಲ್ ಸೋಶಿಯಲ್ ವೆಲ್ಫೇರ್ ಟ್ರಸ್ಟ್ ನರಿಬೋಳ ಇವರ ಸಹಯೋಗದೊಂದಿಗೆ ದಿನಾಂಕ 10.08.2023 ರ ಶ್ರೀ ಮಹಾಲಕ್ಷ್ಮಿ ಕಲಾ ಮತ್ತು ವಾಣಿಜ್ಯ ಪದವಿ ಮಾವಿದ್ಯಾಲಯ ಹಾಗೂ ಸ್ವಾಮಿ ವಿವೇಕಾನಂದ ಕಲಾ ಮತ್ತು ವಾಣಿಜ್ಯ ಪದವಿಪೂರ್ವ ಕಾಲೇಜು ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಸ್ವಾಗತ ಮತ್ತು ಸಾಧಕರಿಗೆ ಸೇವಾ ರತ್ನ ಪ್ರಶಸ್ತಿ ಸಮಾರಂಭ ಜರುಗುವುದು ಎಂದು ಡಾ. ಧರ್ಮಣ್ಣ ಕೆ ಬಡಿಗೇರ್ ಪ್ರಾಚಾರ್ಯರು ಹಾಗೂ ಸಿಂಡಿಕೇಟ್ ವಿಶ್ವವಿದ್ಯಾಲಯ ಪರಿಷತ್ ಸದಸ್ಯರು ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಬಿಜಾಪುರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಈ ಕಾರ್ಯಕ್ರಮದಲ್ಲಿ ಪರಮ ಪೂಜ್ಯ ಶ್ರೀ ಮ.ನಿ.ಪ್ರ.ಸಿದ್ದಲಿಂಗ ಮಹಾಸ್ವಾಮಿಗಳ ವಿರಕ್ತಮಠ ಯಡ್ರಾಮಿ ದಿವಸಾನ್ಯ ವಹಿಸಲಿದ್ದಾರೆ. ಗಂಗಾಧೀಶ್ವರ ಮಹಾಸ್ವಾಮಿಗಳು ಸಿದ್ದಲಿಂಗೇಶ್ವರ ಬೆಟ್ಟ ಶಾಹಪುರ ಸಮ್ಮುಖದಲ್ಲಿ ಕಾರ್ಯಕ್ರಮ ಜರಗುವುದು. ಶ್ರೀ ದೊಡ್ಡಪ್ಪಗೌಡ ಎಸ್ ಪಾಟೀಲ್ ನರಿಬೋಳ ಮಾಜಿ ಶಾಸಕರು ಜೇವರ್ಗಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶ್ರೀಮತಿ ರಾಜೇಶ್ವರಿ ಪಿ ಎಸ್ ತಾಲೂಕ ದಂಡಾಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಸಾಧಕರಿಗೆ ಸೇವಾ ರತ್ನ ಪ್ರಶಸ್ತಿ ಪ್ರಧಾನ1) ರಾಜಣ್ಣ ಚಿಕ್ಕಜೇವರ್ಗಿ ನಾಟಕ ರತ್ನ ಪ್ರಶಸ್ತಿ, ಡಾಕ್ಟರ್ ಪ್ರಕಾಶ ಬಡಿಗೇರ್ ಹರನಾಳ ಶಿಕ್ಷಣ ರತ್ನ ಪ್ರಶಸ್ತಿ, ಸಂಗಮೇಶ್ ಅಂಗಡಿ ಪಿಎಸ್ಐ ಆರಕ್ಷಕ ರತ್ನ ಪ್ರಶಸ್ತಿ, ಶ್ರೀಮತಿ ವನಿತಾ ಸೀತಾಳೆ ಸಮಾಜ ಸೇವ ರತ್ನ ಪ್ರಶಸ್ತಿ, ಶರಣಬಸು ಕಲಾ ಬಸವ ರತ್ನ ಪ್ರಶಸ್ತಿ, ಡಾಕ್ಟರ್ ಪಿ ಎಂ ಮಠ ಜೇವರ್ಗಿ ಸಮಾಜ ಸೇವ ರತ್ನ ಪ್ರಶಸ್ತಿ, ಸಿದ್ದು ಪಾಟೀಲ್ ವೈದ್ಯಾಧಿಕಾರಿಗಳು ಜೇವರ್ಗಿ ವೈದ್ಯರತ್ನ ಪ್ರಶಸ್ತಿ, ಶಿವಕುಮಾರ್ ಗೌಡ ಪಾಟೀಲ್ ನರಿಬೋಳ ಸಮಾಜಸೇವರತ್ನ ಪ್ರಶಸ್ತಿ, ಅನಿಲ್ ರಾಂಪುರೆ ಯೋಗ ರತ್ನ ಪ್ರಶಸ್ತಿ, ಸಿದ್ದು ಅಂಕುಶದೊಡ್ಡಿ ಯುವರತ್ನ ಪ್ರಶಸ್ತಿ, ಮಾಳಪ್ಪ ಎಸ್ ದೇಸಾಯಿ ಕುಮ್ಮನಸಿರಸಿಗಿ ಸಂಗೀತ ರತ್ನ ಪ್ರಶಸ್ತಿ, ಅಮೀನಪ್ಪ ಬಿ ಹೊಸಮನಿ ಶಿಕ್ಷಣ ಸೇವಾ ರತ್ನ ಪ್ರಶಸ್ತಿ, ಪ್ರಭು ಜಾದವ್ ಸಮಾಜ ಸೇವಾ ರತ್ನ ಪ್ರಶಸ್ತಿ, ಮರೇಪ್ಪ ಕಂಡೋಳ್ಕರ್ ಸಮಾಜ ಸೇವ ರತ್ನ ಪ್ರಶಸ್ತಿ, ವಿಷ್ಣು ಮಹೇಂದ್ರಕರ್ ರೈತ ರತ್ನ ಪ್ರಶಸ್ತಿ, ರವೀಂದ್ರ.ಎನ್. ವಕೀಲರು ಮಾಧ್ಯಮ ರತ್ನ ಪ್ರಶಸ್ತಿ, ರಮೇಶ್ ಆಲೂರು ಮಾಧ್ಯಮ ರತ್ನ ಪ್ರಶಸ್ತಿ, ಮಾಳಪ್ಪ ಪೂಜಾರಿ ಸಮಾಜ ಸೇವಾ ರತ್ನ ಪ್ರಶಸ್ತಿ, ಈ 18 ಜನ ಸಮಾಜ ಸೇವಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ ಎಂದು ಡಾ. ಧರ್ಮಣ್ಣ ಕೆ ಬಡಿಗೇರ್ ಪ್ರಾಚಾರ್ಯರು ಶ್ರೀ ಮಹಾಲಕ್ಷ್ಮಿ ಕಲಾ ಮತ್ತು ಮಾವ ವಾಣಿಜ್ಯ ಪದವಿ ಮಹಾ ವಿದ್ಯಾಲಯ ಹಾಗೂ ಶ್ರೀ ಸ್ವಾಮಿ ವಿವೇಕಾನಂದ ಕಲಾ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜು ಜೇವರ್ಗಿ ಪ್ರಿನ್ಸಿಪಾಲರು ತಿಳಿಸಿದ್ದಾರೆ.
