ಉದಯವಾಹಿನಿ ಕೆ.ಆರ್.ಪೇಟೆ: ತಾಲ್ಲೂಕು ಶಿಕ್ಷಣ ಇಲಾಖೆಯ ನೌಕರರ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಎಂ.ಪಿ.ಕಿರಣ್ ಕುಮಾರ್ ಅವಿರೋಧವಾಗಿ ಆಯ್ಕೆಯಾದರು.
ಹಿಂದಿನ ಅಧ್ಯಕ್ಷ ಕೃಷ್ಣನಾಯಕ್ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಎಂ.ಪಿ.ಕಿರಣ್‌ಕುಮಾರ್ ಹೊರತುಪಡಿಸಿ ಬೇರೆ ಯಾರೂ ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿ ಭರತ್ ನೂತನ ಅಧ್ಯಕ್ಷರ ಆಯ್ಕೆಯನ್ನು ಘೋಷಿಸಿದರು.
ನೂತನ ಅಧ್ಯಕ್ಷ ಕಿರಣ್ ಕುಮಾರ್ ಮಾತನಾಡಿ ಶಿಕ್ಷಣ ಇಲಾಖೆಯ ನೌಕರರಿಗೆ ಈ ಹಿಂದಿನಿ0ದಲೂ ಪತ್ತಿನ ಸಹಕಾರ ಸಂಘವು ಆರ್ಥಿಕವಾಗಿ ಸಂಕಷ್ಟದಲ್ಲಿದ್ದ ನೌಕರರಿಗೆ ತನ್ನ ನೆರವಿನ ಹಸ್ತವನ್ನು ನೀಡುತ್ತಾ ಬಂದಿದೆ. ಮುಂದೆಯೂ ಸಂಘದ ಬೆಳವಣಿಗೆಗೆ ಹಾಗೂ ಸರ್ವ ಸದಸ್ಯರ ಹಿತಾಸಕ್ತಿಗೆ ಅನುಗುಣವಾಗಿ ಉತ್ತಮವಾಗಿ ಕೆಲಸ ಮಾಡಿ ಸಂಘದ ಶ್ರೇಯೋಭಿವೃದ್ದಿಗೆ ಶ್ರಮಿಸಲಾಗುವುದು ಎಂದು ತಿಳಿಸಿದರು.
ಇದೇ ಸಂಧರ್ಭದಲ್ಲಿ ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರಾದ ಪದ್ಮೇಶ್, ಕಾರ್ಯದರ್ಶಿ ಸಿ.ಟಿ.ಲಕ್ಷö್ಮಣಗೌಡ, ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷ ಎಲ್.ಎಸ್.ಧವiðಪ್ಪ, ಸಹಕಾರ್ಯದರ್ಶಿ ಸಂಧ್ಯಾರಾಣಿ, ಕಸಾಪ ಅಧ್ಯಕ್ಷ ಪೂರ್ಣಚಂದ್ರತೇಜಸ್ವಿ, ಪತ್ತಿನ ಸಹಕಾರ ಸಂಘದ ನಿರ್ದೇಶಕರಾದ ಎ.ಹೆಚ್.ಯೋಗೇಶ್, ಕೃಷ್ಣನಾಯಕ್, ದೊರೆಸ್ವಾಮಿ, ಲೋಕೇಶ್, ಆರ್.ಕೆ.ರಮೇಶ, ಕೆ.ರಾಧಮ್ಮ, ಸುಧಾಮಣಿ, ಎ.ಕೆ.ದೇವರಾಜು, ನಾಗೇಶ್, ಜೆ.ಬಿ.ನಾಗರಾಜು, ಡಿ.ಎಸ್.ಗಿರೀಶ್, ರಾಮಕೃಷ್ಣೇಗೌಡ, ಶಶಿಧರ್, ಇಂದ್ರಾಣಿ, ಜಿಎಸ್.ಮಂಜು, ಸಿ.ಎಸ್.ಅಶೋಕ್, ಕಟ್ಟೆಮಹೇಶ್, ಎಸ್.ಎಸ್.ಶಿವಕುಮಾರ್, ರಂಗಸ್ವಾಮಿ, ಕಾರ್ಯನಿವಾಹಕ ಅಧಿಕಾರಿ ಹೆಚ್.ಎಲ್.ಜಯರಾಮು ಸೇರಿದಂತೆ ಹಲವರು ಹಾಜರಿದ್ದರು.
