
ಉದಯವಾಹಿನಿ ಕೆಂಭಾವಿ : ಸುಮಾರು ೧೮ವರ್ಷಗಳಕಾಲ ಸುದೀರ್ಘವಾಗಿ ಪಟ್ಟಣದ ಸಂಜೀವನಗರ ಬಡಾವಣೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೇವೆ ಸಲ್ಲಿಸಿ ಬೇರೆ ಕಡೆ ವರ್ಗಾವಣೆಗೊಂಡ ಶಿಕ್ಷಕರನ್ನು ವಿದ್ಯಾರ್ಥಿಗಳು ಅತ್ಯಂತ ಭಾವುಕರಾಗಿ ಬೀಳ್ಕೊಟ್ಟ ಅಪರೂಪದ ಘಟನೆ ಶನಿವಾರ ನಡೆಯಿತು. ಶಾಲೆಯಲ್ಲಿ ವಿಠ್ಠಲ ನಾಯಕ ಎಂಬ ಶಿಕ್ಷಕರು ಕಳೆದ ೧೮ ವರ್ಷಗಳಿಂದ ಇಲ್ಲಿಯ ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಶಿಕ್ಷಕರಾಗಿ ಸಿಬ್ಬಂದಿಯ ಸರಳ ಸಜ್ಜನಿಕೆಯ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದರು. ಸರ್ಕಾರದ ಸಾಮಾನ್ಯ ವರ್ಗಾವಣೆಯ ಪ್ರಕ್ರಿಯೆಯಲ್ಲಿ ಶಹಪೂರ ತಾಲೂಕಿನ ನಾಗನಟಗಿ ತಾಂಡಾದ ಶಾಲೆಗೆ ವರ್ಗಾವಣೆಗೊಂಡ ಅವರನ್ನು ಶಾಲಾ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಬೀಳ್ಕೊಡುಗೆ ಸಮಾರಂಭ ಏರ್ಪಸಿದ್ದರು. ಸಮಾರಂಭದ ನಂತರ ಶಲೆಯ ಆಟದ ಮೈದಾನದಲ್ಲಿ ತೆರಳುತ್ತಿರುವ ಶಿಕ್ಷಕರನ್ನು ಮೆರವಣಿಗೆ ಮಾಡಿ ಬೀಳ್ಕೊಟ್ಟಾಗ ಎಲ್ಲ ವಿದ್ಯಾರ್ಥಿಗಳ ಮತ್ತು ಶಿಕ್ಷಕರ ಕಣ್ಣಂಚಿನಲ್ಲಿ ನೀರು ಹೇಳದೆ ಬರಲಾರಂಭಿಸಿತು. ಈ ಭಾವುಕ ಕ್ಷಣವನ್ನು ಅಲ್ಲಿದ್ದವರು ನೋಡಿ ಕೆಲಕಾಲ ಅವರ ಕಣ್ಣುಗಳು ಒದ್ದೆಯಾದವು. ಮುಖ್ಯಗುರು ಮಹಾದೇವಿ ಹಿರೇಮಠ,ಶಿಕ್ಷಕರಾದ ಜಯಶ್ರೀ,ಜಯಂತಿ ವಿ ಹರಸೂರ,ಚೇತನಾ ವಿ, ಸಲೀಂ, ರಾಜ ಹಮ್ಮದ
ಸೇರಿದಂತೆ , ಬಿಸಿಯೂಟ ಸಿಬ್ಬಂದಿ ಇದ್ದರು.
