ಉದಯವಾಹಿನಿ ಹುಣಸಗಿ: ರೈತರ ರಾಷ್ಟಿಕೃತ ಬ್ಯಾಂಕ್ ಸಾಲಮನ್ನಾ ಮಾಡಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ತಾಲೂಕು ಸಮಿತಿ ವತಿಯಿಂದ ಹುಣಸಗಿ ತಹಶೀಲ್ದಾರಗೆ ಮನವಿ ಸಲ್ಲಿಸಿ ಒತ್ತಾಯಿಸಲಾಯಿತು. 2022-23 ನೇ ಸಾಲಿನಲ್ಲಿ ನಿರೀಕ್ಷೆಗೆ ತಕ್ಕಂತೆ ಮಳೆ ಬಂದಿಲ್ಲ. ಮುಂಗಾರು ಹಂಗಾಮು ಸಂಪೂರ್ಣ ಕೈಕೊಟ್ಟಿದೆ. ರೈತರು ಚಿಂತೆಯಲ್ಲಿದ್ದಾರೆ. ಅಲ್ಲದೆ ಬಗರಹುಕುಂ ಸಾಗುವಳಿ ಸಮರ್ಪಕ ಜಾರಿಗೊಳಿಸಬೇಕು. ಸರಿಯಾಗಿ ವಿದ್ಯುತ್ ಪೂರೈಸಿ, ಹಳೆಯ ಟಿಸಿ ನಿರ್ವಹಣೆ ಮಾಡಬೇಕು. ಇತ್ತೀಚೆಗೆ ಕುರಿ-ಮೇಕೆಗಳು ಕಳ್ಳತನವಾಗುತ್ತಿದ್ದು, ಸಂಪೂರ್ಣ ತಡೆಗಟ್ಟಲು ಕಾನೂನು ಬಿಗಿಗೊಳಿಸಬೇಕು, ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆ ಕಲ್ಪಿಸಬೇಕು ಆಗ್ರಹಿಸಿದರು.
ಈ ಸಂದರ್ಭ ತಾಲೂಕು ಅಧ್ಯಕ್ಷ ಶಂಕರನಾಯಕ ಜಾಧವ, ಮುದ್ದಣ್ಣ ಅಮ್ಮಾಪುರ, ಸಿದ್ದಣ್ಣ ಮೇಟಿ, ಮಲ್ಲಣ್ಣ ಮೇಟಿ, ಸಾಯಬಲಾಲ ಕಕ್ಕಲದೊಡ್ಡಿ, ಭೀಮಣ್ಣ ಕಾಮನಟಗಿ, ಹಣಮಂತ್ರಾಯಗೌಡ ಪಾಟೀಲ್, ದೇವಪ್ಪ ಪೂಜಾರಿ, ಸಾಬಣ್ಣ ಐದಬಾವಿ, ಹಯ್ಯಾಳಪ್ಪ ಕಲ್ಲೂರು, ಸಂಗಣ್ಣ ಪೂಜಾರಿ, ಹಣಮಂತ್ರಾಯ ಪೂಜಾರಿ, ಸಾಬಣ್ಣಗೌಡ ಕಾಮನಟಗಿ ಸೇರಿದಂತೆ ಇತರರಿದ್ದರು.
