
ಉದಯವಾಹಿನಿ,ಚಿಂಚೋಳಿ: ಪಟ್ಟಣದ ಚಂದಾಪೂರ ಹಾಗೂ ಗ್ರಾಮೀಣ ಪ್ರದೇಶದಲ್ಲಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸರಕಾರಿ ಮೇಟ್ರಿಕ್ ನಂತರ ಬಾಲಕರ ಹಾಗೂ ಬಾಲಕಿಯರ ವಸತಿ ನಿಲಯದಲ್ಲಿ ವಿದ್ಯಾರ್ಥಿಗಳಿಗೆ ಸರಕಾರದಿಂದ ಸಿಗುವ ಮೂಲಭೂತ ಸೌಲಭ್ಯಗಳನ್ನು ಸಿಗದೆ ಪರದಾಡುತ್ತಿದ್ದು ಶೀಘ್ರದಲ್ಲಿ ವಿದ್ಯಾರ್ಥಿಗಳಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು ಎಂದು ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ (ಎನ್ಎಸ್ ಯುಐ) ತಾಲ್ಲೂಕಾಧ್ಯಕ್ಷ ಅಂಕೀತಾ ಕಮಲಾಕರ್ ಆಗ್ರಹಿಸಿದರು.
ಪಟ್ಟಣದ ತಹಸೀಲ್ ಕಛೇರಿ ಎದುರು ಭಾರತ ರಾಷ್ಟ್ರೀಯ ವಿಧ್ಯಾರ್ಥಿ ಒಕ್ಕೂಟದ ವತಿಯಿಂದ ಬಿಸಿಎಂ ವಸತಿನಿಲಯಗಳಲ್ಲಿ ಮೂಲಭೂತ ಸೌಲಭ್ಯ ಹಾಗೂ ವಿವಿಧ ಬೇಡಿಕೆಗಳನ್ನು ಆಗ್ರಹಿಸಿ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿಪತ್ರ ಸಲ್ಲಿಸಿ ಮಾತನಾಡಿದ ಅವರು,ಶೌಚಾಲಯ ಸ್ವಚ್ಚತೆ,ಗ್ರಂಥಾಲಯದಲ್ಲಿ ಪುಸ್ತಕಗಳ ಕೊರತೆ,ಮೇನು ಪ್ರಕಾರ ಊಟದ ಕೊರತೆ,ಕ್ರೀಡಾ ಸಾಮಾಗ್ರಿಗಳ ಕೊರತೆ,ವಸತಿ ನಿಲಯದ ಸುತ್ತಮುತ್ತ ಸ್ವಚ್ಚತೆಗೊಳಿಸುವುದು,ಶುದ್ಧ ಕುಡಿಯುವ ನೀರಿನ ಕೊರತೆ,ಅಡುಗೆ ಸಾಮಾಗ್ರಿಗಳ ಕೊರತೆ,ಕಂಪ್ಯೂಟರ್ ಕೊರತೆ,ಇನ್ವೇಟರ್ ಕೊರತೆ,ಸೋಲಾರ್ ಬಿಸಿ ನೀರಿನ ಕೊರತೆ ಹೀಗೆ ಹತ್ತಾರು ವಿಧ್ಯಾರ್ಥಿಗಳ ಸಮಸ್ಯೆಗಳು ಆದಷ್ಟೂ ಶೀಘ್ರದಲ್ಲೇ ಬಗೆಹರಿಸಬೇಕು ಎಂದು ಅವರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಅಜರೋದ್ದೀನ ಕನಕಪೂರ,ಯಲ್ಲಾಲಿಂಗ,ಶ್ರೀನಿವಾಸ,ಹರಿ ಶ ದೇಗಲಮಡಿ,ರಾಹುಲ್,ವೀರಶೇಟ್ಟಿ,ಆನಂದ, ಚನ್ನವೀರ,ದಶರಥ,ಚಂದ್ರಕಾಂತ,ಶ್ರೀಕೃ ಷ್ಣ,ಮಹೇಶ,ಶಿವಪುತ್ರ,ಅಂಬರೀಷ್,ಬಾಲೇ ಶ,ಶಿವಕುಮಾರ,ನವೀನ್,ಅಜಯ,ನರಸಿಂಹಮಲು ,ಪಾಂಡು,ಅನೇಕ ವಿಧ್ಯಾರ್ಥಿಗಳು ಇದ್ದರು.
