ಉದಯವಾಹಿನಿ ಸಿಂಧನೂರು : ತಾಲ್ಲೂಕಿನ ಜವಳಗೇರಾ ಗ್ರಾಮದ ವ್ಯಾಪ್ತಿಯಲ್ಲಿ ಬರುವ ಕೊಪ್ಪಳ ಕ್ಯಾಂಪ್ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಪರಿಸರ ರಾಜ್ಯ ಪ್ರಶಸ್ತಿ ಪುರಸ್ಕೃತರು ವನಸಿರಿ ಫೌಂಡೇಶನ್ ಸಂಸ್ಥಾಪಕ ಅದ್ಯಕ್ಷರಾದ ಅಮರೇಗೌಡ ಮಲ್ಲಾಪೂರ ಅವರ 35ನೇ ಹುಟ್ಟು ಹಬ್ಬದ ಅಂಗವಾಗಿ 500ಸಸಿಗಳ ನೆಡುವ ಕಾರ್ಯಕ್ರಮ ಹಾಗೂ ವಿಶೇಷ ವ್ಯಕ್ತಿಗಳಿಗೆ ಸನ್ಮಾನ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿತು.ಈ ಸಂದರ್ಭದಲ್ಲಿ ವಿಶೇಷವಾಗಿ ಮೊರಾರ್ಜಿ ಶಾಲೆಯಲ್ಲಿ ಮಕ್ಕಳಿಗೆ ಶ್ರಮವಹಿಸಿ ರುಚಿಯಾದ ಅಡುಗೆ ಮಾಡಿ ಉಣಬಡಿಸುವ ಅಡುಗೆದಾರರಿಗೆ ವನಸಿರಿ ಫೌಂಡೇಶನ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

 ಈ ಕಾರ್ಯಕ್ರಮ ಕುರಿತು ಮಾತನಾಡಿದ ಶ್ರೀ ಸದಾನಂದ ಸ್ಟಾಮಿ ಶರಣರು 500 ಸಸಿಗಳನ್ನು ನೆಡುವುದು ಅಷ್ಟೇ ನಮ್ಮ ಕರ್ತವ್ಯ ಅಲ್ಲ ಅವುಗಳನ್ನು ಮಕ್ಕಳು ನಾವು ನೀವು ಪಾಲನೆ ಪೋಷಣೆ ಮಾಡಿದಾಗ ಮಾತ್ರ ಪ್ರಕೃತಿಗೆ ಒಂದು ಅರ್ಥ ಬರುತ್ತದೆ ಎಂದರು

ಮನುಷ್ಯನ ಬದುಕು ಸುಂದರವಾಗಬೇಕೆಂದರೆ ಸಾಧನೆ ಸೇವೆ ಸ್ವಾರ್ಥ ಸೇವೆಗಿಂತ ನಿಸ್ವಾರ್ಥ ಸೇವೆ ಮಾಡಿದಾಗ ಮಾತ್ರ ಬದುಕು ಸುಂದರವಾಗಲಿಕ್ಕೆ ಸಾಧ್ಯ.

ವೇದಮೂರ್ತಿ ಮಾದಯ್ಯ ಗುರವಿನ ಅಮೋಘ ಸಿದ್ಧೇಶ್ವರ ಮಠ ತುರವಿಹಾಳ,ಅಮರಯ್ಯ ಶಾಸ್ತ್ರೀ ಎಲೆಕೂಡ್ಲಿಗಿ ಅವರು ಸಸಿ ನೆಟ್ಟು ನೀರುಣಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಅದ್ಯಕ್ಷತೆ: ಮೌಲಾಲಿ ಪ್ರಾಂಶುಪಾಲರು ಮೊ.ದೇ.ವಾ.ಶಾ.ಜವಳಗೇರ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸೋಮಶೇಖರ ಪಾಟೀಲBEO,ದೊಡ್ಡಬಸನಗೌಡ ಬಾದರ್ಲಿ ಕಾಂಗ್ರೆಸ್ ಮುಖಂಡರು,ಕೆ.ಕರಿಯಪ್ಪBJP ಮುಖಂಡರು,ಶಿವನಗೌಡ ಗೊರೆಬಾಳ,ಬಸವರಾಜ AEE.ಅತಿಥಿಗಳಾಗಿ ಸುರೇಶ ನೆಕ್ಕಂಟಿ, ಸುರೇಶ ಸೈನಿಕರು, ಮೌನೇಶ ತಿಡಿಗೋಳ ವಿಶ್ವಕರ್ಮ ತಾಲೂಕ ಅದ್ಯಕ್ಷರು,ಬೀರಪ್ಪ ಶಂಭೋಜಿ,ತಿಮ್ಮಾರಡ್ಡಿ, ಅಮರಯ್ಯ ಪತ್ರಿಮಠ, ತಿಪ್ಪಾರಡ್ಡಿ,ಬಾಲಕೃಷ್ಣ ವಜ್ಜಲ, ನಿರೂಪಣೆ ಹನುಮೇಶ ಶಿಕ್ಷಕರು,ಸ್ವಾಗತ ಸಣ್ಣಹುಸೇನಪ್ಪ ಶಿಕ್ಷಕರು, ಪ್ರಾಸ್ತಾವಿಕ ಭಾಷಣ ಮೌನೇಶ ಶಿಕ್ಷಕರು,ವಂದನಾರ್ಪಣೆ ಲಕ್ಷೀಂವೆಂಕಟೇಶ ಶಿಕ್ಷಕರು ಮಾಡಿದರು.

Leave a Reply

Your email address will not be published. Required fields are marked *

error: Content is protected !!