
ಸಿಂಧನೂರು ಚಿತ್ರದುರ್ಗ : ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಉಪ್ಪರಗೇನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಲೆಕ್ಕ ಅಧಿಕಾರಿ ಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ತಿಪ್ಪಯ್ಯಸ್ವಾಮಿ ಆತ್ಮಹತ್ಯೆಗೆ ಮತ್ತು ಮೂಲ ಈ ಘಟನೆಗೆ ಯಾರು ಕೈವಾಡ ಇದೆ ಅವರು ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕರ್ನಾಟಕ ರಾಜ್ಯ ಪಂಚಾಯತ್ ಲೆಕ್ಕ ಸಹಾಯಕರ ಕ್ಷೇಮಾಭಿವೃದ್ಧಿ ಸಂಘದ ತಾಲ್ಲೂಕು ಸಮಿತಿ ವತಿಯಿಂದ ತಾಲ್ಲೂಕು ಪಂಚಾಯಿತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಮೂಲಕ ಗ್ರಾಮೀಣ ಅಭಿವೃದ್ಧಿ ಸಚಿವ ಬೆಂಗಳೂರು ಅವರಿಗೆ ಮನವಿ ಪತ್ರ ಸಲ್ಲಿಸಿ ಆಗ್ರಹಿಸಿದರು ನಂತರ ಪ್ರತಿಭಟನೆ ಕುರಿತು ತಾಲ್ಲೂಕು ಸಮಿತಿ ಸಂಚಾಲಕ ಮಾತನಾಡಿದ ಅವರು ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಉಪ್ಪರಗೇನಹಳ್ಳಿ ಗ್ರಾಮ ಪಂಚಾಯಿತಿ ಲೆಕ್ಕ ಸಹಾಯಕರಾಗಿ ಕೆಲಸ ನಿರ್ವಹಿಸುತ್ತಿರುವ ತಿಪ್ಪಯ್ಯಸ್ವಾಮಿ ಆಗಸ್ಟ್ 05 ರಂದು ಆತ್ಮಹತ್ಯೆ ಮಾಡಿಕೊಂಡದನ್ನು ಕರ್ನಾಟಕ ರಾಜ್ಯ ಪಂಚಾಯಿತಿ ಲೆಕ್ಕ ಸಹಾಯಕರ ಕ್ಷೇಮಾಭಿವೃದ್ಧಿ ಸಂಘ ಜಿಲ್ಲಾ ಘಟಕ ರಾಯಚೂರು ಹಾಗೂ ತಾಲ್ಲೂಕು ಸಮಿತಿ ವತಿಯಿಂದ ಈ ಸಂದರ್ಭದಲ್ಲಿ ಸಂತಾಪ ವ್ಯಕ್ತಪಡಿಸಿದರು ಆತ್ಮಹತ್ಯೆ ಮಾಡಿಕೊಂಡಿರುವ ಪೂರ್ವದಲ್ಲಿ ಡೆತ್ ನೋಟ್ ನಲ್ಲಿ ಹೊಳಲ್ಕೆರೆ ಶಾಸಕರು ಎಂ ಚಂದ್ರಪ್ಪ ರವರು ಈ ಖಾತೆ ಮಾಡಿಕೊಂಡಿದ್ದು ಅಮಾನತು ಮಾಡಲಾಗುತ್ತದೆ ಎಂದು ಬೆದರಿಕೆ ಹಾಕಿದ್ದಾರೆಂದು ಹೊಳಲ್ಕೆರೆ ತಾಲ್ಲೂಕು ಪಂಚಾಯಿತ ಯು ಇ ಒ ರವಿ ಅವರು ಹಿಂಸೆ ಮತ್ತು ಗ್ರಾಮ ಪಂಚಾಯತ್ ಯ ಸದಸ್ಯರು ಮೋಹನ್ ಮೂರ್ತಿ ಉಗ್ರಪ್ಪ ಲವರಾಜಪ್ಪ ಅವರ ಸೇರಿ ಕಿರಿಕುಳ ನೀಡುತ್ತಿದ್ದಾರೆ ಎಂದು ಡೆತ್ ನೋಟ್ ನಲ್ಲಿ ಕಂಡುಬಂದಿದೆ ಕೂಡಲೇ ತಿಪ್ಪಯ್ಯಸ್ವಾಮಿ ಅವರ ಆತ್ಮಹತ್ಯೆಗೆ ಕಾರಣವಾಗಿರುವ ವ್ಯಕ್ತಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಈ ಸಂ. ಜಿಲ್ಲಾ ಸಮಿತಿ ಮತ್ತು ತಾಲೂಕು ಸಮಿತಿ ವತಿಯಿಂದ ಒತ್ತಾಯಿಸಿದರು ಈ ಸಂದರ್ಭದಲ್ಲಿ ಪಿಡಿಒ ಸಿ ಎಚ್ ಮುದುಕಪ್ಪ ಶಾಂತಪ್ಪ ದೀಪಾ ರಣ ಜಜಾಲಪ್ಪ ಕೃಷ್ಣ ಹನುಮಂತ ದೇವಮ್ಮ ಸೇರಿದಂತೆ ಇತರರು ಭಾಗವಹಿಸಿದ್ದರು.
