ಉದಯವಾಹಿನಿ ಸಿರುಗುಪ್ಪ : ತಾಲೂಕಿನ ಸಿರಿಗೇರಿ ಗ್ರಾಮದ ವಿವೇಕಾನಂದ ಪ್ರೌಡಶಾಲಾ ಆವರಣದಲ್ಲಿ ನಡೆದ ೨೦೨೩-೨೪ನೇ ಸಾಲಿನ ವಲಯ ಮಟ್ಟದ ಪ್ರೌಡಶಾಲೆಗಳ ಕ್ರೀಡಾಕೂಟವನ್ನು ಸಿರಿಗೇರಿ ಪೋಲೀಸ್ ಠಾಣೆಯ ಪಿ.ಎಸ್.ಐ. ಸದ್ದಾಂ ಹುಸೇನ್ ಅವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು ಮಕ್ಕಳು ತಮ್ಮ ನೈಜ ಪ್ರತಿಭೆಯನ್ನು ಪ್ರದರ್ಶಿಸುವುದಕ್ಕೆ ಇದು ಸೂಕ್ತ ವೇದಿಕೆಯಾಗಿದ್ದು ಯಾವುದೇ ಅಹಿತಕರ ಘಟನೆಗಳಿಗೆ ಪ್ರೇರೇಪಿತವಾಗದೇ ಕ್ರೀಡೆಗಳಲ್ಲಿ ಭಾಗವಹಿಸಬೇಕೆಂದು ತಿಳಿಸಿದರು.ಸಿರಿಗೇರಿ, ಕೊಂಚಿಗೇರಿ, ಶಾನವಾಸಪುರ, ಮುದ್ದಟನೂರು, ಕರೂರು, ಹೆಚ್.ಹೊಸಳ್ಳಿ, ಎಂ.ಸೂಗೂರು, ನಡವಿ ವ್ಯಾಪ್ತಿಯ ಪ್ರೌಡಶಾಲೆಗಳ ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು.ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿಗಳಾದ ರೆಹಮತ್‌ಉಲ್ಲಾ ಮಾತನಾಡಿ ದೈಹಿಕ ಶಿಕ್ಷಕರು ತಮ್ಮ ತಮ್ಮ ಶಾಲೆಗಳ ಆಟದ ಟೀಂಗಳನ್ನು ಬಿಟ್ಟು ಪ್ರಮಾಣಿಕವಾಗಿ ಆಡುತ್ತಿರುವ ಎಲ್ಲಾ ಶಾಲಾ ಆಟಗಾರರ ತಂಡಗಳನ್ನು ಪಾದರ್ಶಕವಾಗಿ ಫಲಿಂತಾಶದ ತೀರ್ಪು ನೀಡಬೇಕು. ಆಟದ ಮಧ್ಯದಲ್ಲಿ ಅಸಭ್ಯವಾಗಿ ವರ್ತಿಸಿದಲ್ಲಿ ಆ ತಂಡಗಳನ್ನು ಅನರ್ಹತಾ ಎಂದು ಘೋಸಿಸಲಾಗುವುದು ಆದ್ದರಿಂದ ಎಚ್ಚರಿಕೆಯಿಂದ ಆಟವಾಡಿಯೆಂದು ತಿಳಿಸಿದರು.ಮುಖ್ಯಶಿಕ್ಷಕ ಎನ್.ಪಂಪಾಪತಿ ಸಿರಿಗೇರಿ ವಲಯ ಕ್ರೀಡಾ ವ್ಯವಸ್ಥಾಪಕರಾದ ಕೃಷ್ಣಮೂರ್ತಿ, ಅಬ್ದುಲ್‌ಸೂಕುರು, ಮುಖ್ಯಶಿಕ್ಷಕರಾದ ಕೆ.ವೀರಪ್ಪ, ಫರ್ವೆಜ್ ಅಹ್ಮದ್, ಕಾರೆ ಶಾಂತಮ್ಮ, ಸಂಸ್ಥೆಯ ಖಜಾಂಚಿ ವೀರೇಶಪ್ಪ, ಸದಸ್ಯ ಗೋಡೆ ಪಂಪಾಪತಿ ತಾಲೂಕು ದೈಹಿಕ ಶಿಕ್ಷಕರಾದ ಮಲ್ಲಿಕಾರ್ಜುನ, ಉಪೇಂದ್ರ, ಚೆನ್ನಪ್ಪ, ರಮೇಶ್, ಬಿ.ಆರ್.ಸಿಯಾದ ಕಾಳಿಂಗ, ಲಕ್ಷö್ಮಣ್, ವೀರೇಶಪ್ಪ, ಶಿಕ್ಷಕರಾದ ಮಹಾಬಲೇಶ್, ಶಿವುಕುಮಾರ್, ರಂಜಿತ್ ಇದ್ದರು.

Leave a Reply

Your email address will not be published. Required fields are marked *

error: Content is protected !!