ಉದಯವಾಹಿನಿ, ಲಕ್ನೋ: ಸಲಿಂಗಕಾಮಿಗಳ ಡೇಟಿಂಗ್ ಆಪ್ ಬಳಸಿಕೊಂಡು ಯುವಕರನ್ನು ವಂಚಿಸುತ್ತಿದ್ದ ಗ್ಯಾಂಗ್ ಅನ್ನು ಕಲ್ಯಾಣಪುರ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ದಿಲೀಪ್ ಅಲಿಯಾಸ್ ಪ್ರದ್ಯುಮ್ನ್ ಸಿಂಗ್ (೨೧), ಅರುಣ್ ರಜಪೂತ್ (೨೨), ವಿಪಿನ್ ಸಿಂಗ್ (೨೧), ಪವನ್ ಕುಮಾರ್ ಸಿಂಗ್ (೨೨), ಪ್ರವೀಣ್ ಸಿಂಗ್ (೨೦) ಹಾಗೂ ಬ್ರಿಜೇಂದ್ರ ಸಿಂಗ್ (೧೯) ಬಂಧಿತ ಗ್ಯಾಂಗ್‌ನ ಆರೋಪಿಗಳಾಗಿ ದ್ದಾರೆ.
ಸಲಿಂಗಕಾಮಿ ಡೇಟಿಂಗ್ ಆ?ಯಪ್ ‘ಬ್ಲೂಡ್ನಲ್ಲಿ ಆರೋಪಿಗಳು ನಕಲಿ ಖಾತೆಗಳನ್ನು ರಚಿಸಿ ಯುವಕರನ್ನು ವಂಚಿಸುತ್ತಿದ್ದರು ಎಂದು ಹೆಚ್ಚುವರಿ ಪೊಲೀಸ್ ಉಪ ಆಯುಕ್ತ ಲಖನ್ ಸಿಂಗ್ ಯಾದವ್ ತಿಳಿಸಿದ್ದಾರೆ. ಆರೋಪಿಗಳು ಗೇ ಡೇಟಿಂಗ್ ಆಪ್‌ನಲ್ಲಿ ಅಮಾಯಕ ಯುವಕರೊಂದಿಗೆ ಚಾಟ್ ಮಾಡಿ ಬಳಿಕ ಡೇಟಿಂಗ್‌ಗೆ ಕರೆಯುತ್ತಿದ್ದರು. ಬಂದ ಯುವಕರೊಂದಿಗೆ ಲೈಂಗಿಕ ಚಟುವಟಿಕೆಯಲ್ಲಿ ತೊಡಗಿದ್ದ ವೇಳೆ ಬೆತ್ತಲೆ ವೀಡಿಯೋಗಳನ್ನು ಶೂಟ್ ಮಾಡಿದ್ದಾರೆ. ತದನಂತರ ಯುವಕರಿಂದ ಹಣ ಹಾಗೂ ಬೆಲೆಬಾಳುವ ವಸ್ತುಗಳನ್ನು ದೋಚಿದ್ದಾರೆ.
