ಉದಯವಾಹಿನಿ, ಪಾಟ್ನಾ (ಬಿಹಾರ): ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಪುತ್ರ ನಿಶಾಂತ್ ಕುಮಾರ್ ಭಾನುವಾರ ಅಧಿಕೃತವಾಗಿ ಜೆಡಿಯು ಪಕ್ಷ ಸೇರಲಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಜೆಡಿಯು ರಾಷ್ಟ್ರೀಯ ಕಾರ್ಯಕಾರಿ ಅಧ್ಯಕ್ಷ ಸಂಜಯ್ ಕುಮಾರ್ ಝಾ ಅವರ ನಿವಾಸದಲ್ಲಿ ಪಕ್ಷದ ಹಿರಿಯ ನಾಯಕರು ಮತ್ತು ಯುವ ಶಾಸಕರೊಂದಿಗೆ ನಿಶಾಂತ್ ಕುಮಾರ್ ಸಭೆ ನಡೆಸಿದರು.
ಮುಖ್ಯಮಂತ್ರಿ ನಿತೀಶ್​ ಕುಮಾರ್​ ಅವರು ರಾಜ್ಯಸಭೆಗೆ ಸ್ಪರ್ಧಿಸಿರುವ ಈ ಹಿನ್ನೆಲೆ ರಾಜ್ಯದಲ್ಲಿ ಪಕ್ಷದ ಭವಿಷ್ಯದ ಕಾರ್ಯತಂತ್ರ ಮತ್ತು ಅವರ ನಾಯಕತ್ವದ ಮಾರ್ಗದರ್ಶನದಲ್ಲಿ ಉತ್ತಮವಾಗಿ ಮುಂದುವರಿಯುವುದು ಹೇಗೆ ಎಂಬುದರ ಕುರಿತು ಈ ಸಭೆಯಲ್ಲಿ ಚರ್ಚಿಸಿದರು.
ಬಿಹಾರ ಅತಿ ದೀರ್ಘಾವಧಿ ಸಿಎಂ ಆಗಿರುವ ನಿತೀಶ್​ ಕುಮಾರ್​ ಇದೀಗ ರಾಜ್ಯಸಭೆ ಸ್ಥಾನಕ್ಕೆ ಸ್ಪರ್ಧಿಸುತ್ತಿದ್ದು, ಮಾರ್ಚ್​ 5ರಂದು ನಾಮಪತ್ರವನ್ನು ಸಲ್ಲಿಸಿದ್ದಾರೆ. ಬಿಹಾರದ ಈ ದಿಢೀರ್ ರಾಜಕೀಯ ಬೆಳವಣಿಯಲ್ಲಿ ನಿತೀಶ್ ಅವರ ಪುತ್ರ ನಿಶಾಂತ್​ ಪಕ್ಷಕ್ಕೆ ಪ್ರವೇಶಿಸಿದ್ದಾರೆ.

ನಿಶಾಂತ್ ಅವರ ಈ ಪಕ್ಷ ಪ್ರವೇಶವು ವಂಶಪಾರಂಪರ್ಯ ರಾಜಕೀಯದ ಬಗ್ಗೆ ನಿತೀಶ್ ಹೊಂದಿದ್ದ ನಿಲುವಿನಲ್ಲಿ ಬದಲಾವಣೆಯನ್ನು ವ್ಯಕ್ತಪಡಿಸಿದೆ. ಆದಾಗ್ಯೂ, ಜೆಡಿಯು ನಾಯಕ ನೀರಜ್ ಕುಮಾರ್ ಅವರು ಸಿಎಂ ಮನೆಯಲ್ಲಿ ನಡೆದ ಸಭೆಯಲ್ಲಿ ಕೇಂದ್ರ ಸಚಿವ ಮತ್ತು ಸಂಸದ ರಾಜೀವ್ ರಂಜನ್ ಸಿಂಗ್ (ಲಾಲನ್) ಮತ್ತು ಸಂಸದ ಸಂಜಯ್ ಝಾ ಅವರು ನಿಶಾಂತ್ ಅವರನ್ನು ರಾಜ್ಯ ರಾಜಕೀಯಕ್ಕೆ ಕರೆತರುವ ಕುರಿತು ಮಾತನಾಡಿದ್ದಾರೆ.

ಈ ಕುರಿತು ಮಾತನಾಡಿದ ಇಬ್ಬರು ನಾಯಕರು, ನಿಶಾಂತ್ ಕುಮಾರ್ ಪಕ್ಷಕ್ಕೆ ಸೇರಬೇಕು. ಅವರ ಸೇರ್ಪಡೆಯನ್ನು ಪಕ್ಷ ಸ್ವಾಗತಿಸುತ್ತದೆ. ಅವರು ನಾಳೆ ಪಕ್ಷಕ್ಕೆ ಸೇರಲಿದ್ದಾರೆ. ರಾಜ್ಯ ರಾಜಕೀಯ ಪ್ರವಾಸವನ್ನು ಅವರು ಮಾಡಲಿದ್ದಾರೆ ಎಂದ ಅವರು ರಾಜ್ಯ ರಾಜಕೀಯದಲ್ಲಿ ನಿಶಾಂತ್ ಅವರ ಪಾತ್ರದ ಬಗ್ಗೆ ಹೆಚ್ಚಿನ ಸ್ಪಷ್ಟನೆ ನೀಡಲಿಲ್ಲ. ನಿಶಾಂತ್ ಬಿಐಟಿ ಮೆಸ್ರಾ ಹಳೆಯ ವಿದ್ಯಾರ್ಥಿಯಾಗಿದ್ದು, ಸಾಫ್ಟ್​ವೇರ್​ ಎಂಜಿನಿಯರ್​ ಆಗಿದ್ದಾರೆ. ರಾಜಕೀಯದಿಂದ ಅಂತರ ಕಂಡುಕೊಂಡಿದ್ದರು. ಇದೀಗ ಪಕ್ಷಕ್ಕೆ ಸೇರುತ್ತಿರುವ ಅವರು, ಹೊಸ ಎನ್‌ಡಿಎ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿ ನೇಮಕಗೊಳ್ಳಬಹುದು ಅಥವಾ ಪಕ್ಷದೊಳಗೆ ನಾಯಕತ್ವದ ಪಾತ್ರವನ್ನು ವಹಿಸಿಕೊಳ್ಳಬಹುದು ಎಂಬ ಊಹಾಪೋಹಗಳು ಹರಿದಾಡುತ್ತಿವೆ.ನಿತೀಶ್​ ಕುಮಾರ್​ ರಾಜ್ಯಸಭೆಗೆ ಮರಳಿದರೆ, ಸಿಎಂ ಯಾರಾಗಲಿದ್ದಾರೆ? ನಿಶಾಂತ್​ ಡಿಸಿಎಂ ಆಗುತ್ತಾರಾ ಎಂಬ ಕುರಿತು ಕುತೂಹಲ ಮುಂದುವರೆದಿದೆ.

Leave a Reply

Your email address will not be published. Required fields are marked *

error: Content is protected !!