
ಉದಯವಾಹಿನಿ ಇಂಡಿ: ಮಾನ್ಯ ತಾಲೂಕು ಆರೋಗ್ಯ ಅಧಿಕಾರಿಗಳು ಡಾ|| ಅರ್ಚನಾ ಕುಲಕರ್ಣಿ ಮಾತನಾಡಿ ನಮ್ಮ ಕ್ಲೀನಿಕ್ ಇಂಡಿಯಲ್ಲಿ ಚಾಲನೆ ನೀಡಿದರು. ಇಂದ್ರಧನುಷ್ ಕಾರ್ಯಕ್ರಮದಲ್ಲಿ ಗರ್ಭಿಣಿಯರ ಸಂಖ್ಯೆ ೪೫೪ ೦ ರಿಂದ 2 ವರ್ಷದ 1192 ಹಾಗೂ 2 ರಿಂದ 5 ವರ್ಷದ 362 ಮಕ್ಕಳು ಹಾಗೂ ಗರ್ಭಿಣಿಯರು ಇದ್ದು 7 ರಿಂದ 12 ನೇ ತಾರೀಖಿನವರೆಗೆ ನಡೆಯುವ ಮಿಷನ್ ಇಂದ್ರಧನುಷ್ ಕಾರ್ಯಕ್ರಮದಲ್ಲಿ ಎಲ್ಲಾ ಫಲಾನುಭವಿಗಳಿಗೆ ನಿರ್ಧರಿಸಿದ್ದು. ಎಲ್ಲಾ ಆರೋಗ್ಯ ಕೇಂದ್ರಗಳಿಂದ ಲಸಿಕಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಆದ ಕಾರಣ ಎಲ್ಲಾ ಸಾರ್ವಜನಿಕರು ಮತ್ತು ವಿವಿಧ ಇಲಾಖೆಗಳ ಸಹಕಾರದೊಂದಿಗೆ ಅಭಿಯಾನವನ್ನು ಯಶಸ್ವಿಗೊಳಿಸಲು ಸಹಕಾರ ನೀಡಬೇಕಾಗಿ ತಿಳಿಸಿದರು. ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಮತ್ತು ಆಶಾ ಅಂಗನವಾಡಿ ಕಾರ್ಯಕರ್ತೆಯರು ಹಾಜರಿದ್ದರು.
