
ಉದಯವಾಹಿನಿ ಇಂಡಿ : ಗ್ರಾಮೀಣ ಭಾಗದ ಕೂಲಿಕಾರರ ಮಕ್ಕಳ ಆರೈಕೆ ನಿಟ್ಟಿನಲ್ಲಿ ಕೂಸಿನ ಮನೆ ಶಿಶು ಪಾಲನ ಕೇಂದ್ರವನ್ನು ತೆರೆದು ಮಕ್ಕಳ ಆರೋಗ್ಯ, ಪಾಲನೆ ಮಾಡುವ ಜವಾಬ್ದಾರಿ ಮೇಲ್ವಿಚಾರಕರಾದ ತಮ್ಮದಾಗಿರುತ್ತದೆ. ಈ ತರಬೇತಿಯಲ್ಲಿ ತಾವು ಎಲ್ಲರಿತಿಯ ಮಾಹಿತಿ ಪಡೆದು ಪರಿಣಾಮಕಾರಿಯಾದ ಕಾರ್ಯ ಚಟುವಟಿಕೆಯಲ್ಲಿ ತೊಡಗಿಕೊಳ್ಳಬೇಕು ಎಂದು ಚಡಚಣ ತಾಲೂಕು ಸಹಾಯಕ ನಿರ್ದೇಶಕ ಮತ್ತು ತರಬೇತಿ ಕಾರ್ಯಕ್ರಮದ ನೋಡಲ್ ಅಧಿಕಾರಿ ಮಹಾಂತೇಶ ಹೋಗೋಡಿ ಅವರು ಹೇಳಿದರು.
ಮಹಾತ್ಮಾ ಗಾಂಧಿ ನರೇಗಾ ಯೋಜನೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಯೋಗದಲ್ಲಿ ಇಂಡಿ ಮತ್ತು ಚಡಚಣ ತಾಲೂಕು ಗ್ರಾಮೀಣ ಶಿಶು ಪಾಲನಾ ಕೇಂದ್ರಗಳ ಮಕ್ಕಳ ಆರೈಕೆದಾರರ ತರಬೇತಿ ಕಾರ್ಯಾಗಾರವನ್ನು ಇಂಡಿ ತಾಲೂಕು ಪಂಚಾಯತ ಹೊರಗಣದಲ್ಲಿ ಸಸಿಗೆ ನೀರು ಎರೆಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ನರೇಗಾ ಯೋಜನೆಯಡಿ ಆರಂಭವಾಗುತ್ತಿರುವ ಶಿಶು ಪಾಲನಾ ಕೇಂದ್ರದವು ಚಡಚಣ ತಾಲೂಕು 10, ಇಂಡಿ ತಾಲೂಕಿನ 31 ಗ್ರಾಮ ಪಂಚಾಯತಗಳಲ್ಲಿ ಆಗಸ್ಟ್ 15 ರಂದು ಉದ್ಘಾಟನೆಗೊಳ್ಳುತ್ತವೆ. ಈ ದೆಸೆಯಿಂದ ಕೇರ್ ಟೆಕಾರ್ ಗಳನ್ನು ಆಯ್ಕೆ ಮಾಡಲಾಗಿದೆ. ಈ ತರಬೇತಿಯಲ್ಲಿ ಚಟುವಟಿಕೆಯಿಂದ ಭಾಗವಹಿಸಬೇಕು ಎಂದು ಹೇಳಿದರು.
ಸಂಪನ್ಮೂಲ ವ್ಯಕ್ತಿಗಳಾದ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಾಧವಾನಂದ ಅವರು ಶಿಶು ಪಾಲನೆ ಮತ್ತು ಆರೈಕೆ ಮಾಡುವುದು ಆರೋಗ್ಯಯುತ ಆಹಾರ ತಯಾರಿಕೆ ಒಳಗೊಂಡಂತೆ ಮಗುವಿನ ಮನೋಬಲಕ್ಕೆ ತಕ್ಕಂತೆ ಚಟುವಟಿಕೆಗಳನ್ನು ಮಾಡಿಸಿ ಕಲಿಸುವ ವಿಧಾನವನ್ನು ಪ್ರಾಯೋಗಿಕವಾಗಿ ಹೇಳಿದರು.ಕೇಂದ್ರದ ಮಕ್ಕಳನ್ನು ಅರಿತು ತಾಯಿಯಂತೆ ಆರೈಕೆ ಮಾಡಬೇಕು.ಸದರಿ ಕಾರ್ಯಾಗಾರದ ಸದುಪಯೋಗ ಪಡೆಯುವಂತೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯತ ವ್ಯವಸ್ಥಾಪಕ ಎಂ. ವಿ. ನಾರಾಯಣಪುರ, ತಾಲೂಕು ಐಇಸಿ ಸಂಯೋಜಕರಾದ ಡಾ.ಜ್ಞಾನಜ್ಯೋತಿ ಚಾಂದಕವಠೆ, ವಿನೋದ ಸಜ್ಜನ, ಜಿ. ಕೆ. ಲಾಳಸೆರಿ, ಆಡಳಿತ ಸಹಾಯಕ ಪ್ರದೀಪ ಹಿಳ್ಳಿ, ಹನುಮಂತ ಮೇಟಿ ತಾಲೂಕು ಪಂಚಾಯತ ಸಿಬ್ಬಂದಿಗಳು, ಗ್ರಾಮ ಕಾಯಕ ಮಿತ್ರರು, 200 ಕ್ಕೂ ಅಧಿಕ ಜನ ಮಹಿಳಾ ಕೇರ್ ಟೇಕರ್ ಹಾಜರಿದ್ದರು
