
ಉದಯವಾಹಿನಿ ಅಫಜಲಪುರ: ನಮ್ಮ ದೇಶಕ್ಕೆ ಸ್ವಾತಂತ್ರ ಸಿಕ್ಕಿರುವ ದಿನವನ್ನು ನಾವೆಲ್ಲರೂ ಸಂಭ್ರಮದಿಂದ ಆಚರಿಸಬೇಕು ಎಂದು ತಹಸೀಲ್ದಾರ ಸಂಜೀವಕುಮಾರ ದಾಸರ್ ತಿಳಿಸಿದರು.
ಪಟ್ಟಣದ ತಹಸೀಲ್ ಕಚೇರಿಯಲ್ಲಿ ಸ್ವಾತಂತ್ರ ದಿನದ ಕುರಿತು ಅಧಿಕಾರಿಗಳ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು ಅಗಸ್ಟ್ ೧೫ರಂದು ಬೆಳಿಗ್ಗೆ ೭.೩೦ ಕ್ಕೆ ಸರ್ಕಾರಿ, ಅರೇ ಸರ್ಕಾರಿ ಮತ್ತು
ಶಾಲಾ ಕಾಲೇಜುಗಳಲ್ಲಿ ಧ್ವಜಾರೋಣ ನಡೆಯಬೇಕು, ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಳ್ಳಬಹುದಾಗಿದೆ .
ಎಂದ ಅವರು ಎಲ್ಲಿಯೂ ರಾಷ್ಟ್ರಧ್ವಜಕ್ಕೆ ಅಗೌರವ ತೋರುವ ಕೆಲಸ ಆಗಬಾರದು ಹೀಗಾಗಿ ಎಲ್ಲರೂ ಬಹಳ ಜಾಗರೂಕತೆಯಿಂದ ಧ್ವಜಾರೋಹಣ ನಡೆಸಬೇಕು.ಸ್ವಾತಂತ್ರ ದಿನದಂದು ಸಹಾಯಕ
ಅಧಿಕಾರಿಗಳನ್ನು ಕಳುಹಿಸಿ ಮುಖ್ಯಾಧಿಕಾರಿಗಳು ತಪ್ಪಿಸಿಕೊಳ್ಳಬೇಡಿ. ಇಲ್ಲದಿದ್ದರೆ ಶಿಸ್ತು ಕ್ರಮಕ್ಕಾಗಿ ಮೇಲಾಧಿಕಾರಿಗಳಿಗೆ ಪತ್ರ ಬರೆಯಲಾಗುತ್ತದೆ ಎಂದರು. ಸಭೆಯಲ್ಲಿ ಅಧಿಕಾರಿಗಳಾದ ಮಾರುತಿ ಹೂಜರಾತಿ, ಶರಣಬಸಪ್ಪ, ರಮೇಶ ಪಾಟೀಲ್, ಬಸವರಾಜ, ಎಸ್.ಎಚ್ ಗಡಗಿಮನಿ, ಕೆ.ಎಂ ಕೋಟೆ, ವಿಜಯ ಮಹಾಂತೇಶ ಹೂಗಾರ ಸೇರಿದಂತೆ ಅನೇಕರು ಇದ್ದರು.
