ಉದಯವಾಹಿನಿ ಬೆಂಗಳೂರು : ಪೀಣ್ಯ ದಾಸರಹಳ್ಳಿ ಕ್ಷೇತ್ರದ ಹೆಗ್ಗನಹಳ್ಳಿ ವಾರ್ಡಿನ ಮಾರುತಿ ನಗರದ ಭೀಮ ಸಂದೇಶ ಕನ್ನಡ ಪತ್ರಿಕೆಯ ಸಂಪಾದಕ ವೈ ಜಿ ನರಸಿಂಹ ಮೂರ್ತಿ ಅವರ ನೇತೃತ್ವದಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ ರವರ,ಹಸಿರು ಕ್ರಾಂತಿ ಹರಿಕಾರ ಬಾಬು ಜಗಜೀವನ್ ರಾಮ್ ಮತ್ತು ವಿಶ್ವ ಪತ್ರಿಕಾ ದಿನಾಚರಣೆ ಅಂಗವಾಗಿ ಹೆಗ್ಗನಹಳ್ಳಿ ವಾರ್ಡಿನ ದಲಿತ ಮುಖಂಡ ಆಟೋ ಸುರೇಶ್ ಭಾಗವಹಿಸಿದ್ದರು.
ಡಾ. ಅಂಬೇಡ್ಕರ್ ಜಯಂತಿ ಆಯೋಜಕ ವೈ ಜಿ ನರಸಿಂಹ ಮೂರ್ತಿ ಆಟೋ ಸುರೇಶ್  ಅವರಿಗೆ ಶಾಲು ಹೊದಿಸಿ ಮೈಸೂರು ಪೆಟೆ ಧರಿಸಿ ಫಲಪುಷ್ಪದೊಂದಿಗೆ ಗೌರವಿಸಿ ಅಂಬೇಡ್ಕರ್ ಭಾವ ಚಿತ್ರಯುಳ್ಳ ನೆನಪಿನ ಕಾಣಿಕೆ ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಉದಯ ವಾಹಿನಿ ಪತ್ರಿಕೆಯ ಪ್ರತಿನಿಧಿ ಅಯ್ಯಣ್ಣ ಮಾಸ್ಟರ್, ಡಾ.ಶಿವಕುಮಾರ್, ಅಂತಾರಾಷ್ಟ್ರೀಯ ಹಿಂದೂ ಪರಿಷತ್ ರಾಷ್ಟ್ರೀಯ ಬಜರಂಗದಳದ ಕಾರ್ಯದರ್ಶಿ ಶ್ರೀಕಾಂತ್ ಸೇರಿದಂತೆ ಮುಂತಾದವರು ಇದ್ದರು.

Leave a Reply

Your email address will not be published. Required fields are marked *

error: Content is protected !!