ಉದಯವಾಹಿನಿ ಕೊಲ್ಹಾರ: ಕೃಷ್ಣಾ ಮೇಲ್ದಂಡೆ ಯೋಜನೆಗಾಗಿ ಹಳೆ ಸಿದ್ದನಾಥ ಮುಳುಗಡೆಯಾಗಿ ಸಂತ್ರಸ್ತರು ಹೊಸ ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಗೊಂಡು ಎರಡು ದಶಕ ಗತಿಸಿದರೂ ಯೋಜನಾಬದ್ದ ಪುನರ್ವಸತಿ ಕೇಂದ್ರದಲ್ಲಿ ಇನ್ನೂ ಸಹ ಚರಂಡಿ, ಸುಸಜ್ಜಿತ ರಸ್ತೆಗಳು, ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಕರ್ಯಗಳು ಮರೀಚಿಕೆಯಾಗಿವೆ.
ನೀರು ಕುಲ ಕೋಟಿ ಜನಾಂಗದ ಜೀವಾಮೃತ. ಅದರಲ್ಲೂ ನೀರು ಪಂಚಪ್ರಾಣ ಕೂಡ ಹೌದು. ಇಂತಹ ಅಮೂಲ್ಯವಾದ ನೀರು ವಿಜಯಪುರ ಜಿಲ್ಲೆ ಕೊಲ್ಹಾರ ತಾಲೂಕಿನ  ಸಿದ್ದನಾಥ ಗ್ರಾಮದ ಕೆಲಬೀದಿಗೆ ಪರವಾಗಿ ಗೋಚರಿಸಿದರೆ, ಮತ್ತೊಂದೆಡೆ ಬರವಾಗಿ ಕಾಡ ತೊಡಗಿರುವುದು ವಾಸ್ತವಿಕ ಸತ್ಯ.
ತಾಲೂಕಿನ ಸಿದ್ಧನಾಥ ಗ್ರಾಮವು ದಶಕದ ಹಿಂದೆ ಸಿದ್ಧನಾಥ ಮತ್ತು ಹಳೆರೋಳ್ಳಿ ಗ್ರಾಮಕ್ಕೆ ಬಹುಹಳ್ಳಿ ಕುಡಿಯುವ ನೀರಿನ ಯೋಜನೆ ಕಾಲಿಟ್ಟಾಗ ಗ್ರಾಮಸ್ಥರ ಸಂಭ್ರಮಕ್ಕೆ ಏಣಿಯೇ ಇಲ್ಲದಂತಾಗಿತ್ತು.
ನದಿ ನೀರು ತಮ್ಮ ಗ್ರಾಮವಷ್ಟೇ ಅಲ್ಲ ಮನೆ ಬಾಗಿಲವರೆಗೆ ಬಂದು ಸಂತಸ ಇಮ್ಮಡಿ ಗೊಳಿಸಿದ್ದು ಇತಿಹಾಸ. ಇದರ ಜೊತೆಗೆ ಎರಡು ಮೂರು ವರ್ಷದ ಹಿಂದೆಅಷ್ಟೇ ಸಾವಿರಾರು ರೂಪಾಯಿ ಖರ್ಚು ಮಾಡಿ ಸಿದ್ದನಾಥ ಮತ್ತು ಹಳೆರೊಳ್ಳಿ ,  ಸಿದ್ದನಾಥ ತಾಂಡ ಹಾಗೂ ಹಳೆರೊಳ್ಳಿ ತಾಂಡ ಈ ಹಳ್ಳಿಗಳಲ್ಲಿ 20 ಕಡೆ ಮಿನಿ ವಾಟರ್ ಟ್ಯಾಂಕ್ ಅಳವಡಿಸಿದ್ದರಿಂದ ಟ್ಯಾಂಕರ್ ಗಳಿಗೆ ನೀರು ಇಲ್ಲದಂತಾಗಿದೆ, ಆದರೆ ಸ್ಥಳೀಯ ಗ್ರಾ. ಪಂ  ಅಧಿಕಾರಿಗಳು ನಿರ್ಲಕ್ಷವೇ ಕಾರಣ. ಮತ್ತು ಅಲ್ಲಲ್ಲಿ ಅಳವಡಿಕೆ ಮಾಡಲಾದ ಮಿನಿ ವಾಟರ್ ಟ್ಯಾಂಕುಗಳು  ಅದೆಷ್ಟು ಸಮರ್ಪಕವಾಗಿ ಸಾರ್ವಜನಿಕರಿಗೆ ಉಪಯೋಗವಾಗುತ್ತದೆ ಎಂಬುದನ್ನು ಸಂಬಂಧಪಟ್ಟವರು ತಿರುಗಿಯು ನೋಡದ ಪರಿಣಾಮ,  ಕೆಲವು ಬೀದಿಗಳಲ್ಲಿ ಬಳಕೆ ನೀರಿನ ದಾಹ ತೀರದಾಗಿ ದಿನವಿಡೀ ಪರದಾಡುವಂತಾಗಿದೆ.
ಕೆಲವು ದುಂಬಿ ಕಟ್ಟೆಗೆ (ಹೋಂಡಾ ಕ್ಕೆ ) ನೀರು ತುಂಬಿ ಯಥೇಚ್ಛವಾಗಿ ಹರಿದು ರಸ್ತೆಯನ್ನು ಚರಂಡಿಮಯವಾಗಿಸುವುದು ಬೇಸರ ಸಂಗತಿಯಾಗಿದೆ. ಬಹುತೇಕ ಕಡೆ ನೀರಿನ ಟಾಕೆ ತುಂಬಿ ಹರಿಯುತ್ತಿದ್ದರೂ ಕುಡಾ ಬಂದ್ ಮಾಡುವ ವ್ಯವಸ್ಥೆ ಇಲ್ಲಾ , ಕೆಲವಡಿ ಇದ್ದರೂ ಸ್ಥಳೀಯ ಜನತೆ ಕೂಡ ಆ ಗೋಜಿಗೆ ಹೋಗದ ಪರಿಣಾಮ ಯಾರು ಕ್ಯಾರೆ ಅನ್ನುವಂತಾಗಿದೆ.
ಚರಂಡಿ,ಸ್ವಚ್ಛತೆ ಮರಿತ ಸಿದ್ದನಾಥ ಗ್ರಾ ಪಂ ಅಧಿಕಾರಿಗಳು 
ದಶಕಗಳಿಂದ ಹೋಳು ತುಂಬಿದ ಚರಂಡಿಯಲ್ಲಿ ನೀರು ನಿಂತು ದುರ್ನಾಥ ಸೃಷ್ಟಿಸಿದೆ. ಹಾಗೂ ಸೊಳ್ಳಿ ಉತ್ಪತ್ತಿ ಹೆಚ್ಚಾಗುತ್ತಿದ್ದು.ಇದರ ಪರಿಣಾಮ ನಿವಾಸಿಗಳು ಸಾಂಕ್ರಾಮಿಕ ರೋಗದ ಭೀತಿ ಎದುರಿಸುವ ಸ್ಥಿತಿ ನಿರ್ಮಾಣವಾಗಿದೆ. ಗ್ರಾಮದ ಬಹುತೇಕ ಕಡೆಗಳಲ್ಲಿ ಮನೆಗಳಲ್ಲಿ ಮೋರಿ ನೀರು, ಸಿಸಿ ರಸ್ತೆ ಮೇಲೆ ಹರಿಯುವುದು ಸಾಮಾನ್ಯವಾಗಿದೆ.
ಸತತ ನೀರು ಹರಿಯುವ ಜಾಗದಲ್ಲಿ ಕಸ- ಪಾಚಿ ಹುಟ್ಟಿಕೊಂಡಿದ್ದು, ಗ್ರಾಮದಲ್ಲಿ ಸೂಕ್ತ ಚರಂಡಿಗಳು ನಿರ್ಮಾಣ ಆಗಬೇಕು ಎನ್ನುತ್ತಾರೆ ಇಲ್ಲಿನ ನಿವಾಸಿಗಳು.
ಈ ಗ್ರಾಮಗಳಲ್ಲಿ ಮೂಲ ಸೌಲಭ್ಯಗಳು ಕುಂಠಿತವಾಗಿದ್ದು ವಾರ್ಡ್ ಸಂಖ್ಯೆ 01-02- 03-04 ರಲ್ಲಿ ಚರಂಡಿ ಹೋಳು ತುಂಬಿಕೊಂಡಿದ್ದು. ಸ್ವಚ್ಛತೆ ಕೈಗೊಳ್ಳಬೇಕಾಗಿದ್ದ ಗ್ರಾಮ ಪಂಚಾಯತಿ ಅಧಿಕಾರಿಗಳು. ಜಿಲ್ಲಾ ಆರೋಗ್ಯ ಅಧಿಕಾರಿ, ತಾಲೂಕು ಆರೋಗ್ಯ ಅಧಿಕಾರಿ ಹಾಗೂ ಪ್ರಾಥಮಿಕ ಆರೋಗ್ಯ ಅಧಿಕಾರಿಗಳು(ತೆಲಗಿ )ಸಿದ್ದನಾಥ ಗ್ರಾಮಕ್ಕೆ ಆಗಮಿಸಿ, ಗ್ರಾಮದ ನೈರ್ಮಲ್ಲಿ ಮತ್ತು ಸಂಕ್ರಾಮಿಕ ರೋಗದ ಬಗ್ಗೆ ಪರಿಶೀಲನೆ ಮಾಡಿ, ಗ್ರಾ. ಪಂ.ಪಿಡಿಒ ಅಧಿಕಾರಿಗಳಿಗೆ ಮನವಿ ಕೊಟ್ಟರೂ ಕೂಡ  ಕ್ಯಾರಿ ಅನ್ನುತ್ತಿಲ್ಲ.ಹಾಗೂ ಸಾರ್ವಜನಿಕರು ಮನವಿಗೂ ಕೂಡಾ ಕಿವಿಗೂಡುತ್ತಿಲ್ಲಾ. 
» ಸ್ವಚ್ಛತೆಗೆ ಗ್ರಾಮ ಪಂಚಾಯತಿ ಪ್ರಾಮುಖ್ಯತೆ ನೀಡಬೇಕು.
»ಮೋರಿ ನೀರು ಹರಿಯಲು ಸೂಕ್ತ ವ್ಯವಸ್ಥೆ ಮಾಡಬೇಕು.
ಮನೆಗೊಂದು ಶೌಚಾಲಯ ನಿರ್ಮಾಣವಾಗದಿದ್ದರೂ ಕೂಡ ಶೌಚಾಲಯಕ್ಕೆ ಬಳಸಿದ ನೀರು ಹರಿಯಲು ಸೂಕ್ತ ಚರಂಡಿಗಳಿಲ್ಲ ಇದ್ದ ಚರಂಡಿಗಳು ಹೋಳು ತುಂಬಿಕೊಂಡಿವೆ. ಹೀಗಾಗಿ ಬಯಲುದರ್ಸಿಗೆ ಬಯಲನ್ನೇ  ಅವಲಂಬಿಸುವುದು ಅನಿವಾರ್ಯವಾಗಿದೆ. ಇದನ್ನು ತಪ್ಪಿಸಲು ಮಹಿಳೆಯರಿಗೆ ಸಾಮೂಹಿಕ ಶೌಚಾಲಯ ನಿರ್ಮಿಸಬೇಕು ಎಂದು ಸಾರ್ವಜನಿಕರು ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳಿಗೆ ಇಡೀ ಶಾಪ ಹಾಕುತ್ತಿದ್ದಾರೆ.
ಗ್ರಾಮ ಪಂಚಾಯತಿ ಚುನಾವಣೆ ಇಲ್ಲದ ಕಾರಣ ಗ್ರಾ. ಪಂ. ಪಿಡಿಒ  ತಾನು ಮಾಡಿದ್ದೆ ಮಾರ್ಗ ವಾಗಿದೆ. ಮತ್ತು ಸಾರ್ವಜನಿಕರ ಮಾಹಿತಿಗೆ ಉಡಾಫೆ ಉತ್ತರಗಳು ನೀಡುತ್ತಾರೆ . ಸಿದ್ದನಾಥ ಗ್ರಾಮಕ್ಕೆ ಸಿಇಒ ತಂಡ  ಭೇಟಿಕೊಟ್ಟು ಕುಂದು ಕೊರತೆಗಳನ್ನು ಪರಿಶೀಲನೆ ಮಾಡಬೇಕೆಂದು ಗ್ರಾಮದ ಸಾರ್ವಜನಿಕರಾದ ರೈಮು ಮುಲ್ಲಾಗೊಳ, ಸೈಯದ್ ದದೇಡ, ಸಿದ್ದನಗೌಡ ಬಿರಾದಾರ, ಹಸನ್ ಸಾಬ್ ದದೇಡ ಇತರರು ಒತ್ತಾಯಿಸಿದರು..

Leave a Reply

Your email address will not be published. Required fields are marked *

error: Content is protected !!