ಉದಯವಾಹಿನಿ ಮಹಾಲಕ್ಷ್ಮಿಲೇಔಟ್: ವಿಧಾನ ಸಭಾ ಕ್ಷೇತ್ರದ ಶಂಕರ ಮಠ ವಾರ್ಡ್ ನ ಕುರುಬರ ಹಳ್ಳಿಯಲ್ಲಿರುವ ಶ್ರೀ ಬಾಲಸುಬ್ರಹ್ಮಣ್ಯ ಸೇವಾ ಸಮಿತಿ ( ರಿ) ವತಿಯಿಂದ ಶ್ರೀ ಬಾಲಸುಬ್ರಮಣ್ಯಂ ಸ್ವಾಮಿಯ 45 ನೇ ಆಡಿ ಕೃತಿಕ ಮಹೋತ್ಸವ ಹಾಗೂ ಕಾವಡಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಇಂದು ಈ ಹಬ್ಬಕ್ಕೆ ಸ್ಥಳೀಯ ಶಾಸಕರು ಹಾಗೂ ಮಾಜಿ ಸಚಿವರಾದ ಕೆ ಗೋಪಾಲಯ್ಯ ರವರು ಪಾಲ್ಗೊಂಡು ದೇವರ ದರ್ಶನ ಪಡೆದು ಕ್ಷೇತ್ರದ ಎಲ್ಲ ಜನರಿಗೆ ಶುಭಾಶಯ ಕೋರಿದರು. ಈ ಸಂದರ್ಭದಲ್ಲಿ ಮಾತನಾಡಿದ ಗೋಪಾಲಯ್ಯ ರವರು ನಾಡಿನ ಸಮಸ್ತ ಸರ್ವ ಜನತೆಗೆ ದೇವರು ಸುಬ್ರಮಣ್ಯ ಸ್ವಾಮಿ ಆಶೀರ್ವಾದ ಮಾಡಲಿ ಎಂದು ಕೇಳಿಕೊಂಡರು. ಈ ಸಂದರ್ಭದಲ್ಲಿ ದೇವಸ್ಥಾನ ಮಂಡಳಿಯ ರಾಘವೇಂದ್ರ ನಾಗರಾಜ್, ಎನ್ ವೆಂಕಟರೆಡ್ಡಿ, ನಾಗಣ್ಣ, ಸ್ಥಳೀಯ ಮುಖಂಡರುಗಳಾದ ಎನ್, ವೆಂಕಟೇಶ್, ವೆಂಕಟೇಶ್ ಮೂರ್ತಿ, ಶಿಲ್ಪಾ ರಾಘವೇಂದ್ರ, ಗಂಗ ಹನುಮಯ್ಯ, ನಾರಾಯಣ ಸ್ವಾಮಿ, ಮಲ್ಲು, ಸೇರಿದಂತೆ ಹಲವು ಗಣ್ಯರು ಹಾಗೂ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವರ ದರ್ಶನ ಪಡೆದರು.
