ಉದಯವಾಹಿನಿ, ಶಿಡ್ಲಘಟ್ಟ: ದಿಬ್ಬೂರಹಳ್ಳಿಯಿಂದ ಸುಮಾರು 10 ಕಿಮಿ ದೂರದಲ್ಲಿರುವ ವಡ್ಡಹಳ್ಳಿ, ವಯಾ ಬುಡಗವಾರಹಳ್ಳಿ ಗ್ರಾಮ ಬಸ್ ಸೇವೆ ಇಲ್ಲದೆ ಪರದಾಡುವಂತಹ ಪರಿಸ್ಥಿತಿ ಇತ್ತು. ಈ ಮಾರ್ಗದಲ್ಲಿ ಸುಮಾರು 7-8 ಹಳ್ಳಿಗಳಿರುತ್ತವೆ ಈ ಗ್ರಾಮಗಳಿಗೆ ಸುಮಾರು ವರ್ಷಗಳಿಂದ ಮೂಲಭೂತ ಸೌಲಭ್ಯಗಳಿಲ್ಲದೆ ವಂಚಿತರಾಗಿದ್ದಾರೆ.
 ವಡ್ಡಹಳ್ಳಿಯಿಂದ ,ದಿಂಬಾರ್ಲಹಳ್ಳಿ,ಮರ್ಲಪ್ಪನಹಳ್ಳಿ, ದಾಸಾರ್ಲಹಳ್ಳಿ ವಯಾ ಬುಡಗವಾರಹಳ್ಳಿ ಯಿಂದ ಅಲಗುರ್ಕಿ ರಸ್ತೆಯ ಮೂಲಕ 11 ನೇ ಮೈಲಿಗೆ ತಲಪುವ ಗ್ರಾಮಗಳಿಗೆ ಸುಮಾರು ಹದಿನೈದು ವರ್ಷಗಳಿಂದ ಯಾವುದೇ ಬಸ್ ವ್ಯವಸ್ಥೆ ಹಾಗೂ ಮೂಲಸೌಲಭ್ಯಗಳಿಲ್ಲದೆ ವಂಚಿತರಾಗಿದ್ದಾರೆ, ಈ ಹಿಂದಿನ ಸರ್ಕಾರಗಳಿಗೂ ಹಾಗೂ ಸಾರಿಗೆ  ಸಂಸ್ಥೆಗೆ ಎಷ್ಟು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿರಲಿಲ್ಲ.
ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಶಾಸಕ ಬಿಎನ್ ರವಿಕುಮಾರ್ ಅವರಿಗೆ ಬಸ್ ವ್ಯವಸ್ಥೆ ಮಾಡಿಕೊಡಿ ಎಂದು ಮನವಿ ಮಾಡಿದಾಗ ಸರಿ ಎಂದು ಮಾತು ಕೊಟ್ಟಿದ್ದರು. ಅದೇ ರೀತಿ ಇಂದಿನಿಂದ ಸರ್ಕಾರಿ ಬಸ್ ಬರತ್ತಿರುವುದಕ್ಕೆ ಸಂತಸವಾಗಿದೆ. ನಾವು ಇಂದು ಹಬ್ಬದಂತೆ ಸಂಭ್ರಮಿಸುತ್ತೇವೆ. ಈ ಕ್ಷೇತ್ರದ ಶಾಸಕರ ಕೃಪಾ ಕಟಾಕ್ಷದಿಂದ ನಮಗೆ ಬಸ್ ಸೇವೆ ಒದಗಿಬಂದಿದೆ. ಬೆಳಗ್ಗೆ 9ಗಂಟೆಗೆ ಚಿಂತಾಮಣಿಯಿಂದ ದಿಬ್ಬೂರಹಳ್ಳಿ ಮಾರ್ಗವಾಗಿ ಶಿಡ್ಲಘಟ್ಟ ಕ್ಕೆ  ಸಂಜೆ 5 ಗಂಟೆಗೆ ಶಿಡ್ಲಘಟ್ಟ ದಿಂದ ದಿಬ್ಬೂರಹಳ್ಳಿ ಮಾರ್ಗದ ವಡ್ಡಹಳ್ಳಿ, ದಿಂಬಾರ್ಲಹಳ್ಳಿಯ ಮಾರ್ಗವಾಗಿ  ಚಿಂತಾಮಣಿಗೆ ಬಂದರೆ ಶಾಲಾ ಕಾಲೇಜಿಗೆ ಹೋಗುವ ಹಾಗೂ ನಗರ ಪ್ರದೇಶಗಳಿಗೆ ತೆರಳುವ ಸಾರ್ವಜನಿಕರಿಗೆ ಉಪಯೋಗವಾಗುತ್ತದೆ ಎಂದು ಗ್ರಾಮದ ಮುಖಂಡ ಬಿಟಿ ನಾಗರಾಜ್ ತಿಳಿಸಿದರು.
ಈ ಸಂದರ್ಭದಲ್ಲಿ ಬುಡಗವಾರಹಳ್ಳಿ ಗ್ರಾಮದ ಮುಕಂಡರಾದ ವೆಂಕಟೇಶಪ್ಪ,ನಾರಾಯಣಪ್ಪ,ವೆಂಕಟೇಶಪ್ಪ,ಚೌಡರೆಡ್ಡಿ,ವೆಂಕಟರೆಡ್ಡಿ ,ದಿಂಬಾರ್ಲಹಳ್ಳಿ ಮುಖಂಡರಾದ ಡಿ ವಿ ವೆಂಕಟರೆಡ್ಡಿ,ಡಿ ಎನ್ ಶಿವಕುಮಾರ್,ಮುತ್ತಪ್ಪ,ಟೈಲರ್ ನಾಗಪ್ಪ,ಸುಭ್ರಮಣಿ ಹಾಗೂ ಸುತ್ತ ಮುತ್ತ ಗ್ರಾಮಸ್ಥರು ಇದ್ದರು.
ಸುಮಾರು ನಾಲ್ಕೈದು ಹಳ್ಳಿಗಳಿಗೆ ಬಸ್ ವ್ಯವಸ್ಥೆ ಇಲ್ಲದೆ ಪರದಾಡಿದ್ದೇವೆ. ಸುಮಾರು ಹತ್ತು ವರ್ಷಗಳ ಹಿಂದೆ ಒಂದು ವಾರ ಬಸ್ ಬಂದಿದ್ದು ಬಿಟ್ಟರೆ ಇಲ್ಲಿಯವರೆಗೂ ಬಸ್ ಬಂದಿಲ್ಲ. ಹಿಂದೆ ಇದ್ದ ಸರ್ಕಾರಕ್ಕೆ ಹಾಗೂ ಬಸ್ ಡಿಪೋ ಗಳಲ್ಲಿ ಅನೇಕ ಬಾರಿ ಮನವಿ ಮಾಡಿದರೂ ಪ್ರಯೋಜನವಾಗಲಿಲ್ಲ. ಈಗಿನ ಶಾಸಕರಿಗೆ ಮನವಿ ಮಾಡಿದ ಕೂಡಲೇ ಹತ್ತು ದಿನಗಳಲ್ಲಿ ಬಸ್ ವ್ಯವಸ್ಥೆ ಮಾಡುತ್ತೇನೆ ಎಂದು ಮಾತು ಕೊಟ್ಟಿದ್ದರು. ಕೊಟ್ಟ ಮಾತಿನಂತೆ ಶಾಸಕ ಬಿಎನ್ ರವಿಕುಮಾರ್ ಅವರು ನಮ್ಮ ಗ್ರಾಮಗಳಿಗೆ ಬಸ್ ವ್ಯವಸ್ಥೆ ಮಾಡಿದ್ದಾರೆ ಅವರಿಗೆ ಅಭಿನಂದನೆಗಳನ್ನ ತಿಳಿಸಿದರು.
– ಗ್ರಾಪಂ ಸದಸ್ಯ ಡಿ ಬಿ ನಾರಾಯಣಸ್ವಾಮಿ.

Leave a Reply

Your email address will not be published. Required fields are marked *

error: Content is protected !!