ಉದಯವಾಹಿನಿ ಹೊಸಕೋಟೆ :ಹೊಸಕೋಟೆತಾಲೂಕಿನ ನೆಲವಾಗಿಲು ಗ್ರಾಮ ಪಂಚಾಯಿತಿಯ ೨ನೇ ಅವಧಿಗೆ ನಡೆದಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ನೂತನಅಧ್ಯಕ್ಷೆಯಾಗಿ ವಸಂತ ಲೋಕೇಶ್, ಉಪಾಧ್ಯಕ್ಷರಾಗಿರವಿ ಅವಿರೋಧವಾಗಿಅಯ್ಕೆಯಾದರು.೨ನೇ ಅವಧಿಗೆ ಜಿಲ್ಲಾಧಿಕಾರಿಗಳ ಅಧಿಸೂಚನೆಯಂತೆಅಧ್ಯಕ್ಷ ಪರಿಶಿಷ್ಟ ಜಾತಿ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ವರ್ಗ ಬ ಮೀಸಲು ಪ್ರಕಟವಾಗಿತ್ತು.ಚುನಾವಣೆ ಪ್ರಕ್ರಿಯೆಆರಂಭವಾದಾಗಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ತಲಾಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧವಾಗಿಆಯ್ಕೆಯಾಗಿದ್ದಾರೆಂದುಚುನಾವಣಾಧಿಕಾರಿ ಸಿ.ಎಲ್.ಸತೀಶ್ ಘೋಷಿಸಿದರು. ರಾಜ್ಯಒಕ್ಕಲಿಗರ ಸಂಘದ ನಿರ್ದೇಶಕ ಬಿ.ವಿ. ರಾಜಶೇಖರಗೌಡ ಮಾತನಾಡಿ, ತಾವುಗಳು ಗ್ರಾಮದಜನರಿಗೆ ಹಾಗೂ ಗ್ರಾಮದಅಭಿವೃದ್ಧಿ ಕಾರ್ಯಗಳಿಗೆ ಶ್ರಮಿಸಬೇಕು.ಪಕ್ಷ ಭೇದ-ಭಾವ ಮಾಡದೇ ಬಡಜನರಿಗೆ ಹಾಗೂ ಗ್ರಾಮದಲ್ಲಿಅಭಿವೃದ್ಧಿ ಕಾರ್ಯಗಳನ್ನು ಮಾಡಿ.ಗ್ರಾಪಂ.ಯಿ0ದಜನರಿಗೆದೊರೆಯುವ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಬೇಕುಎಂದರು.
ನೂತನವಾಗಿಅಯ್ಕೆಯಾದಅಧ್ಯಕ್ಷೆ, ಉಪಾಧ್ಯಕ್ಷರನ್ನುತಾಲೂಕು ಶಾಸಕ ಶರತ್ ಬಚ್ಚೇಗೌಡ, ಅಭಿನಂದಿಸಿದ್ದಾರೆ. ಈ ಸಂದರ್ಭದಲ್ಲಿಜಿಪA.ಮಾಜಿಅಧ್ಯಕ್ಷೆ ಸವಿತಾಗೋಪಾಲ್, ತಾಪಂನ ಮಾಜಿ ಸದಸ್ಯ ಬೀರಪ್ಪ, ಎಪಿಎಂಸಿ ಮಾಜಿಅಧ್ಯಕ್ಷಧರ್ಮೇಶ್, ನೆಲವಾಗಿಲು ಎಸ್‌ಎಫ್‌ಸಿಎಸ್ ಅಧ್ಯಕ್ಷಎಸ್. ಮಂಜುನಾಥ್, ಮಾಜಿಅಧ್ಯಕ್ಷರಾದ ನಾರಾಯಣಗೌಡ, ಶ್ರೀನಿವಾಸ್, ಎಸ್‌ಬಿಟಿ ಬೈರೇಗೌಡ, ನಿರ್ದೇಶಕರಾದಎನ್.ಡಿ. ರಮೇಶ್, ಎ.ಆರ್.ಕೃಷ್ಣಪ್ಪ, ಪಿಡಿಒ ಮುನಿರಾಜು, ಗ್ರಾಪಂ ಮಾಜಿಅಧ್ಯಕ್ಷರಾದ ಪದ್ಮಾನಾಗೇಶ್, ವಿ.ರುಕ್ಮಿಣಿಮಂಜುನಾಥ್, ಉಪಾಧ್ಯಕ್ಷರಾದ ಸೊಣ್ಣೇಗೌಡ ಮಧುಸೂದನ್ ಗ್ರಾಪಂ ಸದಸ್ಯರಾದ ವೆಂಕಟರಾಜು, ಮುನಿರತ್ನಮ್ಮ, ಸುಮಾ, ಕವಿತಾ, ಗೋಪಾಲಪ್ಪ, ಸತೀಶ್, ಆಶಾ, ಮಾಲಾ, ಮಹೇಶ್, ಮಂಜುಳ, ಶಿಲ್ಪಶ್ರೀ, ಸುರೇಶ್ ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.
