
ಉದಯವಾಹಿನಿ ನಾಗಮಂಗಲ: ಮಕ್ಕಳ ವ್ಯಾಸಂಗದ ಅವಧಿಯಲ್ಲಿ ಸಾಂಸ್ಕೃತಿಕ ಚಟುವಟಿಕೆಗಳು ಪ್ರತಿಭಾ ಕಾರಂಜಿ ಯಿಂದ ಕಲಿಕಾ ಶಿಕ್ಷಣಕ್ಕೆ ಪೂರಕವಾಗಿದೆ ಇ ಸಿ ಓ ಡಿ ಪಿ ಗಿರೀಶ್ ಎಂದು ತಿಳಿಸಿದರು.ಅವರು ನಾಗಮಂಗಲ ತಾಲೂಕು ದೇವಲಾಪುರ ಹೋಬಳಿಯ ದೇವರಮಲ್ಲನಾ ಯಕನಹಳ್ಳಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಉದ್ಘಾಟನೆ ಮಾಡುತ್ತಾ ಮಾತನಾಡಿದರು. ಗ್ರಾಮಾಂತರ ಪ್ರದೇಶದಲ್ಲಿ ಮಕ್ಕಳಲ್ಲಿ ಹಡಗಿರುವ ಪ್ರತಿಭೆಗಳಿಗೆ ವ್ಯಾಸಂಗಕ್ಕೆ ಪೂರಕವಾಗಿ ಕಲಿನಲಿಯ ಶಿಕ್ಷಣದ ಜೊತೆ ತಮ್ಮ ಪ್ರತಿಭೆಗಳನ್ನು ಹೊರ ಚಿಮ್ಮಿಸುತ್ತ ಉತ್ಸಾಹದ ಕಲಿಕಾ ಚಿಲುಮೆಗಳಾಗಿ ಸೂಕ್ತ ವೇದಿಕೆಯನ್ನು ಸದುಪಯೋಗಪಡಿಸಿಕೊಂಡು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸುವಿಕೆ ನಿಮ್ಮಗಳ ಅಗತ್ಯ ಎಂದು ತಿಳಿಸಿದರು.
ಪಠ್ಯದ ಜೊತೆಯಲ್ಲೇ ಪೂರಕವಾಗಿರುವ ಕಲಿಕೆಯ ಕಲಿ ನಲಿ ಮಕ್ಕಳಲ್ಲಿ ಶಿಕ್ಷಣದ ಉತ್ಸಾಹ ಹಾಗೂ ಕಲಿಯುವ ಆಸಕ್ತಿ ವ್ಯಾಸಂಗದಲ್ಲಿ ಇದ್ದು ಇದರ ಜೊತೆ ಪ್ರತಿಭಾ ಕಾರಂಜಿಗಳನ್ನ ಮುಖಾಂತರ ಪ್ರತಿಭೆಯ ಬೆಳಕಿನ ಹೂರಣ ಬೆಳಗಲು ಸಾಧ್ಯವಾಗುತ್ತದೆ ಎಂದು ಶಿಕ್ಷಣ ಸಂಯೋಜಕರಾದ ಉಗ್ರಗೌಡ ರವರು ತಿಳಿಸಿದರು. ಪ್ರತಿಭಾ ಕಾರಂಜಿ ಮಕ್ಕಳ ಕಲಾಪ್ರಕಾರಗಳನ್ನು ಉತ್ತೇಜಿಸಲು ಇಂತಹ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆಯಲಿ ಎಂದು ಸಂಯೋಜಕರ ಶಿಕ್ಷಣ ಸಂಯೋಜಕರಾದ ಮಾತನಾಡಿದರು. ಸಮಾರಂಭದಲ್ಲಿ ಶಿಕ್ಷಣ ಸಂಯೋಜಿಕರಗಳಾದ ಶಿವ ಸ್ವಾಮಿ.ಬಿ ಆರ್ ಪಿ ವಿರೂಪಾಕ್ಷ ಸಿಇಓ ಸಿದ್ದೇಶ್ ವೃತ್ತದ ಎಲ್ಲಾ ಶಿಕ್ಷಕರು ಉಪಸಿತರಿದ್ದರು. ಇದೇ ಸಂದರ್ಭದಲ್ಲಿ ಸೇವಕರಾದ ಡೈಮಂಡ್ ನರಸಿಂಹಮೂರ್ತಿಯವರು ಅವರಿಗೆ ಸನ್ಮಾನಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಗಿರೀಶ್ ವಹಿಸಿದ್ದ ಸಮಾರಂಭದಲ್ಲಿ ಶಿಕ್ಷಕರಾದ ದೇವರಾಜ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
