ಉದಯವಾಹಿನಿ ಇಂಡಿ : ಇಂಡಿ ತಾಲೂಕಿನಲ್ಲಿ ಕೈಗಾರಿಕೆ ವಸಹಾತು ಸ್ಥಾಪಿಸಲು ಇಂಡಿಯ ಶಾಸಕರಾದ ಯಶವಂತರಾಯಗೌಡ ಪಾಟೀಲರು  ಇಂದು ಸಣ್ಣ ಕೈಗಾರಿಕೆ ಸಚಿವರಾದ ಶರಣಬಸಪ್ಪ ದರ್ಶನಾಪುರ ಇವರ ಜೊತೆಗೆ ಚರ್ಚಿಸಿದರು.ಇಂಡಿ ನಗರದ ವಸಂತ ನಗರದಲ್ಲಿ  ಸರಕಾರಿ ಜಮೀನು 100 ಎಕರೆ ಇದ್ದು ಅದನ್ನು ಬಳಸಿಕೊಳ್ಳಬಹುದು ಅಥವಾ ಇಂಡಿ ತಾಲೂಕಿನ ತಡವಲಗಾ ಗ್ರಾಮದಲ್ಲಿ ಸರಕಾರಿ ಜಮೀನು 300 ಎಕರೆ ಮತ್ತು ತಾಲೂಕಿನ ಹಳಗುಣಕಿ ಗ್ರಾಮದಲ್ಲಿ ಸರಕಾರಿ ಜಮೀನು 125 ಎಕರೆ ಜಮೀನು ಇದೆ ಅದಲ್ಲದೆ ಖಾಸಗಿ ವ್ಯಕ್ತಿಗಳು ಜಮೀನು ಕೊಡಲು ಮುಂದೆ ಬಂದಿದ್ದಾರೆ  ಎಂದು ಸಚಿವರಿಗೆ ಮನವರಿಕೆ ಮಾಡಿ ಕೊಟ್ಟಿದ್ದಾರೆ. ಅದಲ್ಲದೆ ಈಗಾಗಲೇ ತಾಲೂಕಿನ ಬೂದಿಹಾಳ ಗ್ರಾಮದ ರಿ.ಸ.ನಂ 65 ರಲ್ಲಿ ಸಣ್ಣ ಕೈಗಾರಿಕೆ ವಸಹಾತು ನಿರ್ಮಿಸುವ ಕುರಿತು ಇಗಾಗಲೇ ಜಮೀನು ಹಸ್ತಾಂತರಿಸಿದ್ದು ಕೂಡಲೇ ಅಭಿವೃದ್ದಿ ಪಡಿಸಲು ಕೇಳಿಕೊಂಡರು. ಇಂಡಿ  ತಾಲೂಕು ನಂಜುಡಪ್ಪನವರ ವರದಿ ಅನ್ವಯ  ಹಿಂದುಳಿದ ಪ್ರದೇಶವಾಗಿರುವದರಿಂದ ಶೈಕ್ಷಣ ಕ ಮತ್ತು ಅರ್ಥಿಜವಾಗಿ ಹಿಂದುಳಿದಿದ್ದು ಕಾರಣ ಇಲ್ಲಿ ಕೈಗಾರಿಕೆವಸಹಾತು ಮಾಡಿದರೆ ನಿರುದ್ಯೋಗಿ ತಾಂತ್ರಿಕ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ. ಅದಲ್ಲದೆ ಕೈಗಾರಿಕೆ ಪ್ರದೇಶಕ್ಕೆ ಬೇಕಾಗುವ ರೈಲು ಸಾರಿಗೆ, ರಾಷ್ಟಿಯ ಹೆದ್ದಾರೆ, ವಿದ್ಯುತ್, ಕುಡಿಯುವ ನೀರು  ಮತ್ತು ಜಮೀನು ಸೌಲಭ್ಯ ಇದೆ ಎಂದು ಮನವರಿಕೆ ಮಾಡಿದ್ದಾರೆ. ಅದಲ್ಲದೆ ಇಂಡಿ ತಾಲೂಕು ರಾಜ್ಯದಲ್ಲಿಯೇ ನಿಂಬೆ ಮತ್ತು ದ್ರಾಕ್ಷಿ ಬೆಳೆಗೆ ಪ್ರಸಿದ್ಧಿ ಇದೆ ಮತ್ತು ಮಾನವ ಸಂಪನ್ಮೂಲ ಇದೆ. ಕಾರಣ ಬಂಡವಾಳ ಹೂಡಿಕೆದಾರರಿಂದ  ಇಂಡಿ ತಾಲೂಕಿನಲ್ಲಿ ಕೈಗಾರಿಕೆ ಸ್ಥಾಪಿಸಲು ಶಾಶಕ ಯಶವಂತರಾಯಗೌಡ ಪಾಟೀಲರು ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಸಚಿವರ ಅಪ್ತ ಕಾರ್ಯದರ್ಶಿ ಮತ್ತು ಕೈಗಾರಿಕೆ ಇಲಾಖೆಯ ಹಿರಿಯ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!