ಉದಯವಾಹಿನಿ ಕೆಂಭಾವಿ : ಪಟ್ಟಣದ ಮುದನೂರ್ ಗ್ರಾಮದ ಹಜರತ್ ಮಲಂಗಷಾ ವಲಿ ದರ್ಗಾದ ಜಾತ್ರೆಯ ನಿಮಿತ್ಯ ಗಂಧ ಲೇಪನ್ ಕಾರ್ಯಕ್ರಮಕ್ಕೆ ಸುರಪುರ ಶಾಶಕರಾದ ರಾಜಾ ವೆಂಕಟಪ್ಪ ನಾಯಕ ಅವರ ಸುಪುತ್ರರಾದ  ರಾಜಾ ವೇಣುಗೋಪಾಲ್ ನಾಯಕ ಚಾಲನೆ ನೀಡಿದರು.ಈ ಸಂಧರ್ಭದಲ್ಲಿ ಮಾತನಾಡಿದ ಅವರು ಸಮಾಜದಲ್ಲಿ ಸಾಮರಸ್ಯದಿಂದ ಬದುಕಿ, ಎಲ್ಲ ಧರ್ಮಗಳೂ ಸಾಮರಸ್ಯ, ಶಾಂತಿ ಹಾಗೂ ಸಮಾನತೆ ಸಾರಿವೆ. ಹಾಗಾಗಿ ಸಮಾಜದಲ್ಲಿ ಎಲ್ಲರೂ ಸಾಮರಸ್ಯದಿಂದ ಬದಕಬೇಕು ಎಂದು ಹೇಳಿದರು.
ಸುರಪುರ ವಿಭಾಗದ DYSP ಜಾವೀದ್ ಇನಾಮದಾರ್ ಇಲ್ಲಿ ಸರ್ವಧರ್ಮಿಯರು ಒಂದಾಗಿ ಊರುಸ್ ಆಚರಿಸುತ್ತಿರುವುದು ಶ್ಲಾಘನೀಯ. ಈ ಪರಂಪರೆಯನ್ನು ಮುಂದುವರಿದುಕೊಂಡು ಹೋಗಬೇಕು, ಎಂದು ಆಶಿಸಿದರು.ಈ ಸಂದರ್ಭದಲ್ಲಿ ಬಸನಗೌಡ ಮಾಲಿಪಾಟೀಲ್, ಭೀಮರೆಡ್ಡಿ ಬೇಕಿನಾಳ, ಪ್ರಭುಗೌಡ ಹರನಾಳ, ಮಡಿವಾಳಪ್ಪ ಗೌಡ ಬಳವಾಟ್, ರಾಜಮಹಮ್ಮದ್ ಮಕಾಂದಾರ್, ಬುಡ್ಡೆಸಾಬ್ ಬೈಚ್ಬಾಳ್,ಸೈಯದ್ ಸಾಬ್ ತಾಳಿಕೋಟಿ, ಗೌಸ್ ಪಟೇಲ್, ಶಾಹುಸೇನ್  ಮಕಾಂದರ್, ಇಸ್ಮಾಯಿಲ್ ಬಡೆಗೇರ್ ಹಾಗೂ ಇತರರು ಇದ್ದರು.

Leave a Reply

Your email address will not be published. Required fields are marked *

error: Content is protected !!