
ಉದಯವಾಹಿನಿ ದೇವರಹಿಪ್ಪರಗಿ: ನೂತನ ತಹಶೀಲ್ದಾರ್ ಪ್ರಕಾಶ ಸಿಂದಗಿ ಅವರಿಗೆ ಬಿಜೆಪಿ ಮುಖಂಡರಿಂದ ಸನ್ಮಾನ. ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ ಗುರುವಾರದಂದು ತಹಶೀಲ್ದಾರ್ ಅವರಿಗೆ ಬಿಜೆಪಿ ಮುಖಂಡರಿಂದ ಸನ್ಮಾನಿಸಿ ಗೌರವಿಸಲಾಯಿತು.ಇದೇ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿಯಾದ ಸಿದ್ದು ಬುಳ್ಳಾ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಹಾಗೂ ಪ ಪಂ ಸದಸ್ಯರಾದ ರಮೇಶ ಮಸಿಬಿನಾಳ,ಪ ಪಂ ಸದಸ್ಯರುಗಳಾದ ಮಂಗಳೆಶ ಕಡ್ಲೆವಾಡ, ವಿನೋದ ಚವ್ಹಾಣ, ಸೋಮು ದೇವೂರ, ಸಿಂದಗಿ ಎಪಿಎಂಸಿ ಮಾಜಿ ಉಪಾಧ್ಯಕ್ಷ ಪ್ರಕಾಶ ಪಡಶೆಟ್ಟಿ ಸೇರಿದಂತೆ ಹಲವಾರು ಮುಖಂಡರು ಉಪಸ್ಥಿತರಿದ್ದರು.
