ಉದಯವಾಹಿನಿ,ಚಿಂಚೋಳಿ : ತಾನಾಯಿತು ತನ್ನ ಹೆಂಡರ ಮಕ್ಕಳ ಹೊಟ್ಟೆ ಬಟ್ಟೆಗಿದ್ದರೆ ಸಾಕು ಎನ್ನುವಂತ ಪ್ರಸ್ತುತ ದಿನಮಾನಗಳಲ್ಲಿ ನೆಲೆಯಿಲ್ಲದೆ ಅಲೆದಾಡುವ ಅಲೆಮಾರಿ ಆದಿವಾಸಿ ಕುಟುಂಬಗಳಿಗೆ ಆಸರೆಯಾಗಿ ಅರಿವು ಮೂಡಿಸುವ ಕಾರ್ಯ ಸಂಘಟನೆ ಮಾಡುತ್ತಿರುವುದು ಅತ್ಯಂತ ಶ್ಲಾಘನೀಯವಾಗಿದೆ ಎಂದು ಸುಲೇಪೇಟ ಠಾಣೆಯ ಪಿಎಸ್ಐ ನಂದಿನಿ ಹೇಳಿದರು.
ತಾಲ್ಲೂಕಿನ ಸುಲೇಪೇಟ ಗ್ರಾಮದಲ್ಲಿ ಬಾಂಸೆಫ ಮತ್ತು ಯೂನಿಟಿ ಆಫ್ ಮೂಲನಿವಾಸಿ ಬಹುಜನ ಸಂಘಟನೆ ವತಿಯಿಂದ ಹಮ್ಮಿಕೊಂಡ ವಿಶ್ವ ಆದಿವಾಸಿ ಬುಡಕಟ್ಟು ದಿನಾಚರಣೆ ಅಂಗವಾಗಿ ಅದಿವಾಸಿ ಬುಡಕಟ್ಟು ಕುಟುಂಬಸ್ಥರಿಗೆ ಬ್ಲ್ಯಾಂಕೆಟ್,ಲೆಕ್ಕಣಿಕೆ,ಕಾಪಿ,ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು,ಸಂವಿಧಾನದ ಅಡಿಯಲ್ಲಿ ಅಲೆಮಾರಿ ಆದಿವಾಸಿ ಬುಡಕಟ್ಟು ಜನಾಂಗದವರಿಗೆ ಸಾಕಷ್ಟು ಸೌಲಭ್ಯಗಳಿದ್ದು ಅವುಗಳನ್ನು ಪಡೆದುಕೊಂಡು ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ಹೇಳಿದರು.
ಸಂಘಟನೆಯ ರಾಜ್ಯ ಕಾರ್ಯದರ್ಶಿ ಮಾರುತಿ ಗಂಜಗಿರಿ ಮಾತನಾಡಿ ಪ್ರಪ್ರಥಮವಾಗಿ ಭಾರತ ದೇಶದಲ್ಲಿ ಗಣ್ಯವ್ಯವಸ್ಥೆ ಪರಿಕಲ್ಪನೆಯನ್ನು ಹುಟ್ಟು ಹಾಕಿದ ಕಿರ್ತಿ ಆದಿವಾಸಿ ಬುಡಕಟ್ಟು ಜನಾಂಗಕ್ಕೆ ಸಲ್ಲುತ್ತದೆ ಅಲೆಮಾರಿ ಜನಾಂಗದ ಕಲ್ಯಾಣಕ್ಕಾಗಿ ಹಗಲಿರುಳೆನ್ನದೆ ಹೋರಾಟ ಮಾಡಿದ ಬಿರ್ಸಾಮುಂಡನ ಇತಿಹಾಸ ಅರಿಯುವುದು ಅನಿವಾರ್ಯವಾಗಿದೆ.
ಸ್ವಾತಂತ್ರ್ಯ ಭಾರತದಲ್ಲಿ ಸುಮಾರು ಕೋಟಿಗಟ್ಟಲೆ ಆದಿವಾಸಿ ಬುಡಕಟ್ಟು ಜನರಿಗೆ ಬದುಕು ನಡೆಸುವುದು ದೂಸ್ತರವಾಗಿದೆ ಸುಮಾರು 30ಕೋಟಿ ಆದಿವಾಸಿ ಜನರು ಆಧಾರ್ ಕಾರ್ಡ್ ರೇಷನ್ ಕಾರ್ಡ್ ಇಲ್ಲದೆ ಪರದಾಡುವ ಪರಿಸ್ಥಿತಿ ಬಂದಿದೆ ಸರ್ಕಾರ ಮುತುವರ್ಜಿ ವಹಿಸಿ ಜನಾಂಗಕ್ಕೆ ಅನುಕೂಲ ಮಾಡಿಕೊಡುವಲ್ಲಿ ಕಾರ್ಯ ಪ್ರವೃತ್ತವಾಗಬೇಕು ಎಂದರು.
ಈ ಸಂದರ್ಭದಲ್ಲಿ ಸುಲೇಪೇಟ ಗ್ರಾಮ ಪಂಚಾಯತ ಅದ್ಯಕ್ಷ ಸಂತೋಷ ರಾಠೋಡ್,ರಜಾಕ ಪಟೇಲ್,ಸಿರಾಜ ಕುಪನೂರ,ರೇವಣಸಿದ್ದಪ್ಪ ಸುಭೆದಾರ,ಬಿಚ್ಚಪ್ಪ ಭಜಂತ್ರಿ,ಗೋಪಾಲ ಗಾರಂಪಳ್ಳಿ,ಹಾಫೀಜ್ ಸರ್ದಾರ್,ಮೌನೇಶ ಗಾರಂಪಳ್ಳಿ,ಸಾಗರ ಹೋಸಳ್ಳಿ,ಹರ್ಷವರ್ಧನ ಚಿಮ್ಮನಕಟ್ಟಿ,ಗಮ್ಮು ರಾಠೋಡ,ಸುಭಾಷ್ ತಾಡಪಳ್ಳಿ ಅನೇಕರಿದ್ದರು.

Leave a Reply

Your email address will not be published. Required fields are marked *

error: Content is protected !!