
ಉದಯವಾಹಿನಿ ಮಸ್ಕಿ: ಗ್ರಾಮ ಪಂಚಾಯಿತಿಯ ಸಮಗ್ರ ಅಭಿವೃದ್ಧಿಗೆ ಶ್ರಮಿಸುವೆ. ಅಭಿವೃದ್ಧಿಗೆ ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ, ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ ಎಂದು ನೂತನ ಗ್ರಾ.ಪಂ ಅಧ್ಯಕ್ಷ ರವಿ ಕುಮಾರ ಬೆಳ್ಳಿಗನೂರ ಹೇಳಿದರು.ತಾಲೂಕಿನ ಗೌಡನಬಾವಿ ಗ್ರಾಮದ ಗ್ರಾಮ ಪಂಚಾಯಿತಿಯಲ್ಲಿ ಗುರುವಾರ ನಡೆದ ನೂತನ ಗ್ರಾಮ ಪಂಚಾಯತ ಅಧ್ಯಕ್ಷ, ಉಪಾಧ್ಯಕ್ಷರ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಅಧಿಕಾರ ಸ್ವೀಕಾರ ಮಾಡಿ ಮಾತನಾಡಿದರು.ಜನರ ಆಶೊತ್ತರಗಳಿಗೆ ಸ್ಪಂದಿಸಿ ಉತ್ತಮ ಆಡಳಿತ ನೀಡಲಾಗುವುದು. ಅಭಿವೃದ್ದಿ ವಿಚಾರದಲ್ಲಿ ಯಾವುದೇ ರಾಜಕಾರಣ ಮಾಡದೆ ಎಲ್ಲರೂ ಒಂದೇ ಎಂಬ ಭಾವನೆಯಿಂದ ಗ್ರಾಮದ ಅಭಿವೃದ್ದಿಗೆ ಸರ್ವರು ಕೈಜೋಡಿಸಬೇಕು. ಗ್ರಾಮದಲ್ಲಿ ಸ್ವಚ್ಚತೆ, ನೀರು ಪೂರೈಕೆ, ಶುದ್ದ ಕುಡಿಯುವ ನೀರು, ನರೇಗಾ ಯೋಜನೆಯ ಸಮರ್ಪಕ ಜಾರಿ ಮುಂತಾದವುಗಳ ಬಗ್ಗೆ ಆದ್ಯತೆ ನೀಡಲಾಗುವುದು ಎಂದರು.ಈ ಸಂದರ್ಭದಲ್ಲಿ ಬಸಪ್ಪ ಬಿಜೆಪಿ, ಟಿ ಬಸಪ್ಪ, ಅಮರೇಶ ಗುರಿಕಾರ ವಕೀಲರು, ಬಸವರಾಜ್ ಮಾಜಿ ತಾ,ಪಂ, ಸದಸ್ಯ,ನಾಗರಾಜ್ ಬಾವಿ, ಹೊಳಿಯಪ್ಪ ಸಿಂಧನೂರು, ರೆಡ್ಡಪ್ಪ ಜೀನೂರ್, ದುರ್ಗಪ್ಪ ಮಾಜಿವ ಅಧ್ಯಕ್ಷ, ಈರೇಶ ಸಿರಿಗೇರಿ, ಲಕ್ಷ್ಮಣ್, ಕೆಂಚಣ್ಣ, ನಾಗೇಶ್, ಮಲ್ಲಪ್ಪ, ಮೌನೇಶ, ಗೌಡನ್ ಭಾವಿ ಗ್ರಾಮ ಪಂಚಾಯತಿಯ ಸರ್ವ ಸದಸ್ಯರು, ಬಿಜೆಪಿಯ ಮುಖಂಡರು, ಗ್ರಾಮ ಪಂಚಾಯಿತಿಯ ಅಭಿವೃದ್ದಿ ಅಧಿಕಾರಿ, ಸಿಬ್ಬಂದಿ ವರ್ಗದವರು ಇತರರು ಇದ್ದರು.
