
ಉದಯವಾಹಿನಿ ಮುದ್ದೇಬಿಹಾಳ ; ಪಟ್ಟಣದ ತಾಲೂಕ ಸಾರ್ವಜನಿಕ ಸರಕಾರಿ ಆಸ್ಪತ್ರೆಗೆ ಗುರುವಾರ ವಿಜಯಪುರ ಉಪವಿಭಾಗಾಧಿಕಾರಿ ಬಸವಣಪ್ಪ ಕೆಲಶೆಟ್ಟಿ ಭೇಟಿ ನೀಡಿ ಪರಿಶೀಲನೆ ನಡೆಸಿದರು
ಗುರುವಾರ ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ತಾಲೂಕಮಟ್ಟದ ಅಧಿಕಾರಿಗಳೂಂದಿಗೆ ಆರೋಗ್ಯ ರಕ್ಷಾ ಸಮಿತಿ ಸಭೆಯನ್ನು ನಡೆಸಿ ನಂತರ ತಾಲೂಕು ಆಸ್ಪತ್ರೆಯ ವಾರ್ಡ್ ಗಳಿಗೆ ಭೇಟಿ ನೀಡಿ ರೋಗಿಗಳೂಂದಿಗೆ ಆಸ್ಪತ್ರೆಯಲ್ಲಿಯ ಸಮಸ್ಯೆಗಳ ಕುರಿತು ಆಸ್ಪತ್ರೆಯಲ್ಲಿ ವೈದ್ಯರು ಸರಿಯಾದ ಸಮಯಕ್ಕೆ ಬರುತ್ತಾರೆಯೇ ಎಂದು ವಿಚಾರಿಸಿದರುಆಸ್ಪತ್ರೆಯ ಹೆರಿಗೆ ಜನರಲ್ ವಾರ್ಡ್ ಗೆ ಭೇಟಿ ಮಳೆ ಬಂದಾಗ ಈ ವಾರ್ಡ್ ನ ಮೇಲ್ಚಾವಣಿ ಸೂರುವ ಕುರಿತು ಆಸ್ಪತ್ರೆಯ ಆಡಳಿತ ಅಧಿಕಾರಿ ಅನಿಲ್ ಕುಮಾರ್ ಶೇಗುಣಸಿ ವಿವರಿಸಿದರು
ಡಯಾಲಿಸಿಸ್ ಕೇಂದ್ರಕ್ಕೆ ಭೇಟಿ ನೀಡಿದ ವೇಳೆ ಆಸ್ಪತ್ರೆಯಲ್ಲಿ ಒಟ್ಟು ಎರಡು ಡಯಾಲಿಸಿಸ್ ಒಂದು ಯಂತ್ರ ಮಾತ್ರ ಕಾರ್ಯನಿರ್ವಹಿಸುತ್ತಿದ್ದು ಒಂದು ದುರಸ್ತಿ ಮಾಡಬೇಕಿದೆ, ಎಸಿ ಇಲ್ಲಾ ಮತ್ತು ಡಯಾಲಿಸಿಸ್ ಸಿಬ್ಬಂದಿಯಾದ ಮಾಲಾಶ್ರೀ ತೋಟದ ತಮಗೆ ಸರಿಯಾಗಿ ವೇತನ ಸಹ ಸಿಗುತ್ತಿಲ್ಲವೆಂದು ತಮ್ಮ ಅಳಲನ್ನು ಉಪವಿಭಾಗಾಧಿಕಾರಿಗಳ ಮುಂದೆ ತೂಡಿಕೂಂಡರು , ಆಸ್ಪತ್ರೆಯಲ್ಲಿ ಶುದ್ದು ಕುಡಿಯುವ ನೀರಿನ ಘಟಕ ಕಟ್ಟಿದ್ದು ದುರಸ್ತಿಗೂಳಿಸುವಂತೆ ತಿಳಿಸಿದರು.ಮಾಧ್ಯಮಗಳ ಜೊತೆ ಮಾತನಾಡಿದ ಉಪವಿಭಾಗಾಧಿಕಾರಿ ಬಸವಣಪ್ಪ ಕಲಶೆಟ್ಟಿ ತಾಲೂಕ ಮಟ್ಟದ ಪ್ರಮುಖ ಅಧಿಕಾರಿಗೂಳಡನೆ ಇವತ್ತು ಆರೋಗ್ಯ ರಕ಼ಾ ಸಮಿತಿ ಸಭೆಯನ್ನು ನಡೆಸಿ ಆಸ್ಪತ್ರೆಯ ಪ್ರತಿ ವಾರ್ಡ್ ಗಳಿಗೆ ಭೇಟಿ ಪರಿಶೀಲನೆ ಮಾಡಿದ್ದೇವೆ ತಾಲೂಕು ಆಸ್ಪತ್ರೆಗೆ ಬೇಕಾದ ಮೂಲಭೂತ ಸೌಕರ್ಯಗಳನ್ನು ಕಲ್ಲಿಸುವ ಕುರಿತು ಆಸ್ಪತ್ರೆಯ ಸಮಸ್ಯೆಗಳ ಬಗ್ಗೆ ಮಾಹಿತಿಯನ್ನು ಪಡೆದುಕೊಂಡಿದ್ದು ಸಂಭಂದಿಸಿದ ಮೇಲಾಧಿಕಾರಿಗಳೂಂದಿಗೆ ಚರ್ಚೆ ಮಾಡುತ್ತೇನೆ ಮತ್ತು ಡಯಾಲಿಸಿಸ್ ಸೇವೆಯನ್ನು ಗುತ್ತಿಗೆ ಆಧಾರದ ಮೇಲೆ ನೀಡಲಾಗಿದೆ ಈ ಸಮಸ್ಯೆ ರಾಜ್ಯದ ಎಲ್ಲಾ ಆಸ್ಪತ್ರೆಯಲ್ಲಿ ಇದೆ ವೃತನ ಸಮಸ್ಯೆ ಇದೆ ಈ ಕುರಿತು ಸಹ ಮೇಲಾಧಿಕಾರಿಗಳ ಗಮನಕ್ಕೆ ತರುವುದಾಗಿ ಹೇಳಿದರು ಮತ್ತು ಆರೋಗ್ಯ ರಕ್ಷಾ ಸಮಿತಿ ಸಭೆಯಲ್ಲಿ ಶೌಚಾಲಯ ಹಾಗೂ ನೀರಿನ ಪೈಪು ಜೋಡಣೆ,ವಿದ್ಯುತ್ ವೈಯರ್ ಅಳವಡಿಕೆ, ಆಸ್ಪತ್ರೆಯ ಮೇಲ್ಚಾವಣಿ ದುರಸ್ತಿ, ಟೈಲ್ಸ್ ಅಳವಡಿಕೆ, ಶೌಚಾಲಯ ದುರಸ್ತಿ, ನವಜಾತ ಶಿಶು ನಿರ್ವಹಣೆ ಕೇಂದ್ರದ ಗೋಡೆಗಳಿಗೆ ಟೈಲ್ಸ್ ಜೋಡಣೆ,ಎಸಿ ಅಳವಡಿಕೆ, ಆಸ್ಪತ್ರೆಗೆ ಬಣ್ಣ ಹಚ್ಚುವುದು ಸೇರಿದಂತೆ ಅನೇಕ ಮೂಲಭೂತ ಸೌಕರ್ಯಗಳ ಕುರಿತು ಚರ್ಚೆ ಮಾಡಲಾಗಿದೆ ಎಂದು ಮಾಹಿತಿಯನ್ನು ನೀಡಿದರು ಈ ವೇಳೆ ತಹಶಿಲ್ದಾರ ಶ್ರೀಮತಿ ರೇಖಾ ಟಿ, ತಾಪಂ ಇಒ ಸಂಜೀವ ಜನ್ನೂರ, ತಾಲೂಕು ವೈದ್ಯಾಧಿಕಾರಿ ಸತೀಶ್ ತಿವಾರಿ, ಆಸ್ಪತ್ರೆಯ ಆಡಳಿತ ಅಧಿಕಾರಿ ಅನಿಲ್ ಕುಮಾರ್ ಶೇಗುಣಸಿ, ವಿದ್ಯುತ್ ಇಲಾಖೆಯ ಎಇಇ ಹಾದಿಮನಿ, ಪಿಎಸೈ ಆರೀಪ್ ಮುಶಾಪೂರಿ, ತಾಲೂಕು ಸರಕಾರಿ ಆಸ್ಪತ್ರೆಯ ಸಂಜಿವ್ ಭೋಸಲೆ ಮುಂತಾದವರು ಈ ವೇಳೆ ಉಪಸ್ಥಿತರಿದ್ದರು.
