
ಉದಯವಾಹಿನಿ ಸಿಂಧನೂರು: ಇಂದು ಜೈ ಭೀಮ್ ಘರ್ಜನೆ ಸಂಘಟನೆ ಕಛೇರಿಯನ್ನು ಸಂವಿಧಾನದ ತತ್ವ ಸಿದ್ಧಾಂತಗಳು ಮತ್ತು ಪ್ರತಿಜ್ಞೆಯೊಂದಿಗೆ ಉದ್ಘಾಟನೆ ಮಾಡಲಾಯಿತುಉದ್ಘಾಟನೆ ಆಗಮಿಸಿ ಮಾತನಾಡಿದ ಡಾ ಹುಸೇನಪ್ಪ ಅಮರಾಪುರ ಅವರ ಜೈ ಭೀಮ್ ಘರ್ಜನೆ ಸಂಘಟನೆ 2020 ರಂದು ಸ್ಥಾಪನೆ ಯಾಗಿ ಸತತ ಎರಡು ವರ್ಷಗಳ ಕಾಲ ನಿರಂತರವಾಗಿ ಸಾಮಾಜಿಕ ಕಾರ್ಯಕ್ರಮಗಳ ಜೊತೆಗೆ ಜನರು ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದೆ ಎಂದು ಹೇಳಿದರು.ಸರ್ಕಾರ ಸಂಸ್ಥೆಗಳ ಕೆಲಸವನ್ನು ಈ ಜೈ ಭೀಮ್ ಘರ್ಜನೆ ಸಂಘಟನೆ ಮಾಡುತ್ತದೆ ಮತ್ತು ಸಂಘಟನೆ ಸ್ನೇಹಿತರು ಎಲ್ಲಾರು ಒಗ್ಗಟ್ಟಾಗಿ ಇದ್ದರೆ ಮಾತ್ರ ಎಲ್ಲ ಸಾರ್ವಜನಿಕರು ಕೆಲಸವನ್ನು ಸರಳವಾಗಿ ಮಾಡಲಿಕ್ಕೆ ಸಾಧ್ಯವಾಗುತ್ತದೆ ಎಂದು ಹೇಳಿದರು
ಡಾ. ಬಾಬು ಸಾಹೇಬರು ಒಂದು ಮಾತನ್ನು ಹೇಳುತ್ತಾರೆ ಎಲ್ಲಾ ಹೋರಾಟಗಳಿಗೆ ಮುಖ್ಯ ವಾದ ಅಸ್ತ್ರ ಶಿಕ್ಷಣ. ಅದರಿಂದ ಜೈ ಭೀಮ್ ಸಂಘಟನೆ ಶಿಕ್ಷಣಕ್ಕೆ ಮೊದಲು ಆದ್ಯತೆ ನೀಡಬೇಕು
ಏಕೆಂದರೆ ಹಳ್ಳಿಯಿಂದ ಬರುವ ವಿದ್ಯಾರ್ಥಿಗಳಿಗೆ ಸರ್ಕಾರಿ ಶಾಲೆಗಳಲ್ಲಿ ಜಾಗ ಇಲ್ಲದೆ ಇರುವುದು ಮತ್ತು ಮಳೆಯ ಬಂದರೆ ಆವರಣದಲ್ಲಿ ನೀರು ನಿಂತು ಕೊಡುವುದಕ್ಕೆ ಜಾಗ ಇರುವುದಿಲ್ಲ ಇದರಿಂದ ಸರ್ಕಾರಿ ಸೌಲಭ್ಯ ಕೊರತೆಯಿಂದ ಶಾಲೆಗಳು ಮುಚ್ಚುವಂತ ಪರಿಸ್ಥಿತಿ ಬಂದಿದೆ.
ಸಂಘಟನೆ ಕಟ್ಟುವುದು ಸುಲಭ ಆದರೆ ನಿಭಾಯಿಸಿಕೊಂಡು ಹೋಗುವುದು ಬಹುಳ ಕಷ್ಟಕರವಾದ ಕೆಲಸ ಆದರೆ ಇಂತಹ
ಸಂದರ್ಭದಲ್ಲಿ ನಿರುಪಾದಿ ಅವರ ಚಿಕ್ಕ ವಯಸ್ಸಿನಲ್ಲೇ ಎಲ್ಲ ರೀತಿಯ ತಳ ಸಮುದಾಯದ ಜೊತೆಗೆ ಒಗ್ಗಟ್ಟಾಗಿ ಕೆಲಸ ಮಾಡುವಂತಹ ಮನೋಭಾವ ಹೊಂದಿದ್ದು ನಿಜಕ್ಕೂ ಗ್ರೇಟ್ ಎಂದು ಹೇಳಿದರು
ಮತ್ತು ರಾಜಕೀಯ ಸಂಘಟನೆ ಜೊತೆಗೆ ಗುತ್ತಿಗೆದಾರರು ಕೆಲಸವನ್ನು ಸಹ ಮಾಡುತ್ತಾರೆ ಡಾ ರಾಮಣ್ಣ ಅವರ ಮಾತನಾಡಿದರು ಎಂದರು.
ಈ ಸಂದರ್ಭದಲ್ಲಿ ಜೈ ಭೀಮ್ ಘರ್ಜನೆ ಸಂಘಟನೆ ಸ್ಥಾಪಕ ಹಾಗೂ ಅಧ್ಯಕ್ಷರಾದ ನಿರುಪಾದಿ ಅವರ ಒಂದು ವರ್ಷದಿಂದ ನಿರಂತರ ಕೆಲಸವನ್ನು ಮಾಡುತ್ತಾ ಬರುತ್ತಿದ್ದೇವೆ ಸಂವಿಧಾನದ ಅರಿವು ಕಡೆ ಮತ್ತು ಇಂದಿರಾ ಕ್ಯಾಂಟೀನ್ ಬಳಿ ಸಹ ಶುದ್ದ ಕುಡಿಯುವ ನೀರು ಆರವಟ್ಟಿಗೆ ಮಾಡಿದ್ದು ವಸತಿ ನಿಲಯ ಮತ್ತು ಹೋಬಳಿ ಘಟಕವನ್ನು ಈಗಾಗಲೇ ರಚನೆ ಮಾಡಲು ನಮ್ಮ ಸಮಿತಿ ಮಾಡುತ್ತಿದೆ ಎಂದು ಹೇಳಿದರು ಈ ಸಂದರ್ಭದಲ್ಲಿ ಪತ್ರಕರ್ತರಿಗೆ ಸನ್ಮಾನ ಮಾಡಲಾಯಿತು ಜೈ ಭೀಮ್ ಘರ್ಜನೆ ಸಂಘಟನೆ ತಾಲ್ಲೂಕು ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಇದ್ದರು ಸೇರಿದಂತೆ ಇತರರು
