ಉದಯವಾಹಿನಿ, ಕೀವ್ : ರಷ್ಯಾ ತನ್ನ ದಾಳಿಯನ್ನು ಮುಂದುವರೆಸಿರುವ ಹಿನ್ನೆಲೆಯಲ್ಲಿ ಇದೀಗ ಈಶಾನ್ಯ ಭಾಗದ ಕುಪಿಯಾನ್ಸ್ಕ್‌ನ ೩೭ ವಸಾಹತುಗಳಲ್ಲಿ ಉಕ್ರೇನ್ ತನ್ನ ಎಲ್ಲಾ ನಾಗರಿಕರನ್ನು ಕಡ್ಡಾಯವಾಗಿ ಸ್ಥಳಾಂತರಿಸಲು ಆದೇಶಿಸಿದೆ. ಇಲ್ಲಿನ ಪ್ರದೇಶಗಳಲ್ಲಿ ರಷ್ಯಾ ನಿರಂತರವಾಗಿ ಭೀಕರ
ದಾಳಿ ನಡೆಸುತ್ತಿದ್ದು, ಹಾಗಾಗಿ ಖಾರ್ಕಿವ್ ಪ್ರದೇಶದ ಕುಪಿಯಾನ್ಸ್ಕ್ ಜಿಲ್ಲೆಯ ಅಧಿಕಾರಿಗಳು ಇಲ್ಲಿ ಕೆಲಸ ನಿರ್ವಹಿಸಬೇಕಾಯಿತು ಎಂದು ತಿಳಿಸಿದ್ದಾರೆ. ಶೆಲ್ ದಾಳಿಯಲ್ಲಿ ಮಹಿಳೆಯೋರ್ವರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು ಒಂದೆಡೆ ಇಲ್ಲಿನ ಪ್ರದೇಶಗಳಲ್ಲಿ ಸ್ವಲ್ಪ ಮುನ್ನಡೆ ಸಾಧಿಸಲಾಗಿದೆ ಎಂದು ರಷ್ಯಾದ ರಕ್ಷಣಾ ಸಚಿವಾಲಯ ಹೇಳಿಕೊಂಡಿದ್ದರೆ ಮತ್ತೊಂದೆಡೆ ಉಕ್ರೇನ್ ಎದುರಾಳಿಗಳ ದಾಳಿಯನ್ನು ಹಿಮ್ಮೆಟ್ಟಿಸಲಾಗಿದೆ ಎಂದು ವಾದಿಸಿದೆ. ಎರಡು ಪಟ್ಟಣಗಳ ಮತ್ತು ೩೫ ಹಳ್ಳಿಗಳ ನಿವಾಸಿಗಳನ್ನು ಸ್ಥಳಾಂತರಿಸಲಾಗುತ್ತಿದೆ ಎಂದು ಕುಪಿಯಾನ್ಸ್ಕ್ ಜಿಲ್ಲೆಯ ಅಧಿಕಾರಿಗಳು ಹೇಳಿಕೆಯಲ್ಲಿ ತಿಳಿಸಿದ್ದಾರೆ.
