ಉದಯವಾಹಿನಿ,ಮಾಸ್ಕೋ : ರಷ್ಯಾದ ರೊಸ್ಕೊಸ್ಮೊಸ್ ಇದೀಗ ಬರೊಬ್ಬರಿ ೫೦ ವರ್ಷಗಳ ಬಳಿಕ ಮತ್ತೊಮ್ಮೆ ತನ್ನ ಶಕ್ತಿ ಅನಾವರಣಕ್ಕೆ ಸಿದ್ಧತೆ ನಡೆಸಿದೆ. ಚಂದ್ರನ ಮೇಲಿನ ವಾತಾವರಣವನ್ನು ಅಧ್ಯಯನ ನಡೆಸುವ ದೃಷ್ಟಿಯಿಂದ ರಷ್ಯಾದ ಬಾಹ್ಯಾಕಾಶ ಸಂಸ್ಥೆ ಇಂದು ಲುನಾ-೨೫ ಅನ್ನು ನಭಕ್ಕೆ ಚಿಮ್ಮಿಸಿದ್ದು, ಈ ಮೂಲಕ ೫೦ ವರ್ಷಗಳ ಬಳಿಕ ರಷ್ಯಾ ತನ್ನ ಶಕ್ತಿ ಪ್ರದರ್ಶಿಸಿದೆ. ಹಾಗಾಗಿ ಮುಂದಿನ ಐದು ದಿನಗಳಲ್ಲಿ ಚಂದ್ರನ ಕಕ್ಷೆಯನ್ನು ಲುನಾ-೨೫ ತಲುಪಲಿದ್ದು, ಹಾಗಾಗಿ ಭಾರತದ ಇಸ್ರೋದ ಚಂದ್ರಯಾನ-೩ರ ಜೊತೆ ನೇರವಾಗಿಯೇ ಆರೋಗ್ಯಕರ ಸ್ಪರ್ಧೆಗೆ ಇಳಿದಂತಾಗಿದೆ.
ಚಂದ್ರಯಾನ-೩ರ ಮೂಲಕ ಇಸ್ರೋ ಚಂದ್ರನ ದಕ್ಷಿಣ ಧ್ರುವಕ್ಕೆ ಈಗಾಗಲೇ ಪ್ರಯಾಣ ಬೆಳೆಸಿದ್ದು, ಕೆಲ ದಿನಗಳಲ್ಲಿ ಇದು ತಲುಪಲಿದೆ. ಒಂದು ವೇಳೆ ಇದು ಸಫಳತೆ ಕಂಡರೆ ಆಗ ಚಂದ್ರನ ದಕ್ಷಿಣ ಧ್ರುವಕ್ಕೆ ಪ್ರೋಬ್ ಕಳುಹಿಸಿದ ವಿಶ್ವದ ಮೊದಲ ದೇಶವೆಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಆದರೆ ರಷ್ಯಾದ ರೊಸ್ಕೊಸ್ಮೊಸ್ ಇದಕ್ಕೂ ಮುನ್ನವೇ ಚಂದ್ರನ ದಕ್ಷಿಣ ಧ್ರುವಕ್ಕೆ ಕಾಲಿರಿಸಲು ಎಲ್ಲಾ ಯೋಜನೆ ಹಾಕಿಕೊಂಡಿದ್ದು, ಅದರಂತೆ ಇಂದು ಲುನಾ-೨೫ ಚಿಮ್ಮಿಸಿದೆ. ಹಾಗಾಗಿ ಒಂದು ವೇಳೆ ಇದು ಸಫಲತೆ ಕಂಡರೆ ಜಾಗತಿಕ ಮಟ್ಟದಲ್ಲಿ ಮೊದಲ ರಾಷ್ಟ್ರವಾಗಿ ಹೊರಹೊಮ್ಮಲಿದೆ.

 

Leave a Reply

Your email address will not be published. Required fields are marked *

error: Content is protected !!