ಉದಯವಾಹಿನಿ ದೇವದುರ್ಗ:- ತಾಲೂಕಿನ ಜನಪದ ಕಲಾವಿದ ಲಿಂಗೈಕ್ಯ ಶರಣಮ್ಮ ರಾಮಣ್ಣ ರುದ್ರಾಕ್ಷಿ ಇವರು ಜಾನಪದ ಲೋಕಕ್ಕೆ ಅಪಾರವಾದ ಕೊಡಗಿ ನೀಡಿದ್ದಾರೆ. ಕಲೆ ಸಾಹಿತ್ಯ ಸಂಗೀತ ಜನಪದ ಸಾಹಿತ್ಯ ಜನಪದ ಸಾಂಸ್ಕೃತಿ ಪರಂಪರೆ ಉಳಿಸಿ ಬೆಳೆಸಿದ್ದು ರುದ್ರಾಕ್ಷಿ ಅವರ ಸೇವೆ ಅಮೋಘ ಅವಿಸ್ಮರಣೆಯವಾಗಿದೆ. ಸಾಂಪ್ರದಾಯಿಕ ಜನಪದ ಸಂಸ್ಕೃತಿ ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯ ಎಂದು ಶರಣಮ್ಮ ರಾಮಣ್ಣ ರುದ್ರಾಕ್ಷಿ ಇವರ ಪುಣ್ಯಸ್ಮರಣೆ ಎಚ್. ಕಾರ್ಯಕ್ರಮದಲ್ಲಿ ಶಾಸಕರಾದ ಕರೆಮ್ಮ ನಾಯಕ್‌ ಅಭಿಪ್ರಾಯ ವ್ಯಕ್ತಪಡಿಸಿದರು.ಇದೇ ಸಂದರ್ಭದಲ್ಲಿ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಗುರು ಕುಮಾರೇಶ್ವರ ಮಹಾಸ್ವಾಮಿಗಳು ಮಾತನಾಡಿಮಾನವನು ಪರಿಶುದ್ಧವಾದ
ಬದುಕಿಗೆ ದೇವರಲ್ಲಿ ನಂಬಿಕೆ ಇಟ್ಟು ಸತ್ಕಾರ್ಯಗಳನ್ನು ಮಾಡುವುದರ ಮುಖಾಂತರಮೋಕ್ಷದಮಾರ್ಗವನ್ನು ನಾವೆಲ್ಲರೂ ಪಡೆಯುವುದು ಅಗತ್ಯವೆಂದರು.
ಈ ಸಂದರ್ಭದಲ್ಲಿ ವೇದಿಕೆ ಮೇಲೆ ಅಮಾತ್ಯಪ್ಪ, ಮಲ್ಲಪ್ಪ ಸತ್ಸಂಗ ಹಾಗೂ ತೆಲಂಗಾಣ ರಾಜ್ಯದ ಹೈಕೋರ್ಟ್‌ ವಕೀಲರಾದ ವೆಂಕಟೇಶ್ ವಿಭೂತಿ, ರಾಚಣ್ಣ ಟೇಲರ್, ಶರಣಮ್ಮಸೊಲ್ಲಾಪುರ್, ಚಿದಾನಂದಪ್ಪಶಿವಂಗಿ,ಹನುಮಂತಪ್ಪ ಮನ್ನಾಪುರ್. ರಂಗಪ್ಪಕೋತಿಗುಡ್ಡ, ಶಿವರಾಜ್‌, ಅಧ್ಯಕ್ಷರು ತಾಲೂಕ ಕನ್ನಡ ಸಾಹಿತ್ಯ ಪರಿಷತ್ತು ದೇವದುರ್ಗ ಸೇರಿದಂತೆ ಸಂಘ ಸಂಸ್ಥೆಗಳ ಮುಖಂಡರು ಮಾಳಗಡ್ಡೆ ಶಾಂತಿನಗರ ವಾರ್ಡಿನ ನಾಗರಿಕರು ವಿವಿಧ ಭಜನಾ ಮಂಡಳಿ ಸದಸ್ಯರು ಈ ಪುಣ್ಯಾತ್ತಿ ಕಾರ್ಯಕ್ರಮದಲ್ಲಿ ಭಾಗವಹಿಸಿಯಶಸ್ವಿಗೊಳಿಸಿದರು.

Leave a Reply

Your email address will not be published. Required fields are marked *

error: Content is protected !!