
ಉದಯವಾಹಿನಿ ಮುದ್ದೇಬಿಹಾಳ ; ಧರ್ಮದ ನಿಜ ವಾಕ್ಯಾಣವೆಂದರೆ ಒಬ್ಬರನ್ನು ನೋಡಿ ಒಬ್ಬರು ಸಂತೋಷ ಪಡಬೇಕು ಯಾವಾಗ ಇನ್ನೂಬ್ಬರನ್ನು ನೋಡಿ ಸಂತೋಷ ಆಗುತ್ತದೆಯೋ ಅದು ಧರ್ಮವೆಂದು ಕೊಪ್ಪಳ ಗವಿಮಠಸಂಸ್ಥಾನದ ಶ್ರೀ ಗವಿ ಸಿದ್ದೇಶ್ವರ ಮಹಾಸ್ವಾಮಿಗಳು ಹೇಳಿದರು ಶುಕ್ರವಾರ ಮುದ್ದೇಬಿಹಾಳ ತಾಲ್ಲೂಕಿನ ಯರಝರಿ ಗ್ರಾಮದ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಹಾಗೂ ಶತಸಂಭ್ರಮ ಸ್ಮರಣ ಸಂಚಿಕೆ ಲೋಕಾರ್ಪಣೆ ಸಮಾರಂಭದಲ್ಲಿ ದಿವ್ಯ ಸಾನಿಧ್ಯವನ್ನು ವಹಿಸಿ ಮಾತನಾಡಿದರು ನಮ್ಮ ಧರ್ಮ ಮೇಲು ಅಂತ ಕಚ್ಚಾಡಿ ರಕ್ತ ಚೆಲ್ಲುವುದಲ್ಲ ರಕ್ತಬೇಕಾದ ರೋಗಿಗೆ ರಕ್ತ ನೀಡುವುದು ಧರ್ಮವಾಗಿದೆ, ಮನುಷ್ಯ ಕುಶಲತೆಯಿಂದ ಸರಳತೆಯಿಂದ ಬದುಕುವುದುನ್ನು ಕಲಿಯುವುದೆ ಬದುಕಿನ ಕಲೆಯಾಗಿದೆ ,ಮಕ್ಕಳಿಗೆ ಒಳ್ಳೆಯ ಹವ್ಯಾಸ ಕಲಿಸಿಬೇಕು ಒಳ್ಳೆಯ ಪುಸ್ತಕ ಸಂಗ್ರಹ ಮನೆಯಲ್ಲಿ ಮಾಡಿದಾಗ ಮಕ್ಕಳು ಓದುವುದನ್ನು ಕಲಿಯುತ್ತಾರೆ.
ಶಾಲೆಗಳಲ್ಲಿ ಪುಕ್ಕಟೆಯಾಗಿ ಇಸಿದುಕೂಳ್ಳುವುದನ್ನು ಕಲಿಸಿದಾಗ ಭಾರತ ಮತ್ತೆ ವಿಶ್ವಗುರುವಾಗುತ್ತದೆ ಪ್ರಕೃತಿ ನಾಶಮಾಡದೆ ತಂದೆ ತಾಯಿ ಗೌರವದಿಂದ ಯಾರು ಕಾಣುತ್ತಾರೋ ಅವರು ನಿಂತ ನೆಲೆವೇ ಕಾಶಿ ಕಾಬಾ ಆಗುತ್ತದೆ ಎಂದು ಆ಼ಧ್ಯಾತ್ಮೀಕವಾಗಿ ಹೇಳಿದರುಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಸಿ.ಎಸ್ ನಾಡಗೌಡ ಅಪ್ಪಾಜಿ ಪಾಲಕರಾದವರು ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಬೇಕು ಅವರಿಗೆ ಉನ್ನತ ಶಿಕ್ಷಣ ನೀಡುವ ಸಂಕಲ್ಪ ಮಾಡಬೇಕು ಹೆಣ್ಣು ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲಿ ಮದುವೆ ಮಾಡಬಾರದು ಸ್ವಾವಲಂಬಿ ಜೀವನ ರೂಪಿಸಿಕೊಳ್ಳವಂತೆ ಶಿಕ್ಷಣ ನೀಡಬೇಕು ಎಂದ ಶಾಸಕರು ಈ ಹಿಂದೆ ಯರಝರಿಯ ಶತಮಾನ ಕಂಡ ಶಾಲೆಯ ಹಿರಿಯ ಶಿಕ್ಷಕರು ತಿಂಗಳಿಗೆ 60 ರೂ ಪಡೆದು ಗುಣಮಟ್ಟದ ಶಿಕ್ಷಣ ನೀಡಿ ಅನೇಕ ವಿದ್ಯಾರ್ಥಿಗಳನ್ನು ವಿದ್ಯಾವಂತರನ್ನಾಗಿ ಮಾಡಿದ್ದಾರೆ ಆದರೆ ಈಗ 70 ಸಾವಿರ ಸಂಬಳ ಪಡೆಯುವ ಶಿಕ್ಷಕರು ಎಷ್ಟು ವಿದ್ಯಾರ್ಥಿಗಳನ್ನು ವಿದ್ಯಾವಂತರನ್ನಾಗಿ ಮಾಡಿದ್ದಿರಿ ಎಂದು ಪ್ರಶ್ನೆ ಮಾಡಿದರು.
70% ಶಿಕ್ಷಕರು ಶಾಲೆಗಳಿಗೆ ಸರಿಯಾದ ಸಮಯಕ್ಕೆ ಬರುವುದಿಲ್ಲ ಪಾಲಕರು ಶಿಕ್ಷಕರನ್ನು ಬಸ್ ಸ್ಟಾಪ್ ನಲ್ಲಿ ಭೇಟಿಮಾಡುವ ಸಂದರ್ಭ ಇದೆ ಎಂದರುಕಾಂಗ್ರೆಸ್ ಪಕ್ಷದ ಮುಖಂಡ ಶಾಂತಗೌಡ ಪಾಟೀಲ್ ನಡಹಳ್ಳಿ ಮಾತನಾಡಿ ಮಕ್ಕಳಿಗೆ ಸಮಾನ ಶಿಕ್ಷಣ ನೀಡಬೇಕು ಏಕ ನೀತಿ ನಾಗರಿಕ ಸಂಹಿತೆ ಜಾರಿಗೆ ಬರಬೇಕು ಎಂದರು ಎಲ್ಲರಿಗೂ ಒಂದೇ ಕಾನೂನು ಎಲ್ಲರಿಗೂ ಒಂದೇ ಶಿಕ್ಷಣ ಸಿಗಬೇಕು ಎಂದರು. ಈ ವೇಳೆ ಮಾಜಿ ಜಿಪಂ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ಬಿಜೆಪಿ ಮುಖಂಡ ಮಲಕೇಂದ್ರಗೌಡ ಪಾಟೀಲ್ ಹಾಗೂ ಯರಝರಿ ಸರಕಾರಿ ಶಾಲೆಯಲ್ಲಿ ಕಲಿತ ಉನ್ನತ ಸ್ಥಾನ ಪಡೆದು ಸನ್ಮಾನಿತರಾದ ನಿವೃತ್ತ ಡಿವೈಎಸ್ಪಿ ಎಸ್ ಎಸ್ ಹುಲ್ಲೂರ,ಸಿಪಿಐ ಆರ್ ಎಸ್ ಬಿರಾದಾರ, ಬಾಗಲಕೋಟೆ ಜಿಲ್ಲಾ ಆಸ್ಪತ್ರೆಯ ಸರ್ಜನ್ ಡಾ | ಆರ್ ಸಿ ನಾಗಾವಿ,ಡೀನ್ ಮುಖ್ಯಸ್ಥ ಡಾ| ವೀರಯ್ಯಾ ಆರ್ ಹಿರೇಮಠ ಮಾತನಾಡಿ ತಮ್ಮ ಬಾಲ್ಯದ ನೆನಪುಗಳನ್ನು ಮೆಲುಕು ಹಾಕಿದರು.
ರಾಮಗಲ್ಲ ತಾಲೂಕು ಗಚ್ಚಿನಮಠ ಹಿರೇಮಠ ಸಂಸ್ಥಾನದ ಶ್ರೀ ಚನ್ನಮಲ್ಲ ಶಿವಾಚಾರ್ಯ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು
ಕಾರ್ಯಕ್ರಮದಲ್ಲಿ ಯರಝರಿ ಯಲ್ಲಾಲಿಂಗೇಶ್ಚರಮಠದ ಮಲ್ಲಾಲಿಂಗಪ್ರಭುಗಳು,ಬಂಟನೂರ ಗಚ್ಚಿನಮಠದ ಮಾತೋಶ್ರೀ ಸರೋಜಮ್ಮನವರು, ಮುಖಂಡರಾದ ಮಲ್ಲಣ್ಣ ಅಪರಾಧಿ, ಗುರು ತಾರನಾಳ, ಎ.ಗಣೇಶ,ಶರಣು ಸಜ್ಜನ, ಬಿಇಓ ಎಸ್ ಜೆ ನಾಯಕ,ಬಿ ವೈ ಕವಡಿ ಶಿಕ್ಷಕರಾದ,ಹೆಚ್ ಐ ಮ್ಯಾಗೇರಿ,ಜಿ ಗೀತಾಂಜಲಿ, ಎಸ್ ಪಿ ಮಾದರ,ಡಿ ಸಿ ಚಲವಾದಿ,ಸುಕನ್ಯಾ ಪಾಟೀಲ್ ಸೇರಿದಂತೆ ಅನೇಕ ಗಣ್ಯ ಮಹನೀಯರು ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು
ಕಾರ್ಯಕ್ರಮದಲ್ಲಿ ಡಾ.ಪ್ರಕಾಶ ನಗಗುಂದ ಸಂಪಾದಕತ್ವದ ಯರಝರಿ ಶಾಲೆಯ ಶತ ಸಂಭ್ರಮ ಸ್ಮರಣ ಸಂಚಿಕೆ ಲೋಕಾರ್ಪಣೆ ಮಾಡಲಾಯಿತು ,ಶಾಲೆಯ ನಿವೃತ್ತ ಶಿಕ್ಷಕರನ್ನು ಸನ್ಮಾನ ಮಾಡಲಾಯಿತು
ಸ್ವಾಗತ ಜಿ.ಎಸ್ ಇಬ್ರಾಹಿಮಪುರ ,ಪ್ರಾಸ್ತಾವಿಕ ನುಡಿ ಮುಖ್ಯಗುರುಗಳಾದ ಎಸ್ ಬಿ ಮೇಟಿ, ಕಾರ್ಯಕ್ರಮದ ನಿರೂಪಣೆ ಗೋಪಾಲ ಹೋಗಾರ,ಸಿದ್ದನಗೌಡ ಬಿಜ್ಜೂರ, ಹೇಮಾ ಬಿರಾದಾರ ವಂದನಾರ್ಪಣೆ ಎ.ಬಿ ಹಡಪದ ಶಿಕ್ಷಕರು ಮಾಡಿದರು
ಶತಮಾನೋತ್ಸವ ಕಂಡ ಯರಝರಿ ಶಾಲೆಗೆ ಸರಕಾರದಿಂದ 8 ನೇ ತರಗತಿಗೆ ಈ ಕ್ಲಾಸ್ ಮಂಜೂರು ಮಾಡಿಸ್ತನೆ ಮಕ್ಕಳು ಡಿಜಿಟಲ್ ಬೋರ್ಡ್ ಮೂಲಕ ಶಿಕ್ಷಣ ಕಲಿಯಲು ಸಹಾಯ ಆಗುತ್ತದೆ .
ಸಿ ಎಸ್ ನಾಡಗೌಡ ಅಪ್ಪಾಜಿ ; ಶಾಸಕರು
