ಉದಯವಾಹಿನಿ ಸಿರುಗುಪ್ಪ : ನಗರದ ನೂತನ ಡಿವೈಎಸ್‌ಪಿ ಕಛೇರಿಯ ಆವರಣದೊಳಗೆ ಪೋಲೀಸ್ ಇಲಾಖೆ ಹಾಗೂ ಆರೋಗ್ಯ ಇಲಾಖೆಯ ಸಹಯೋಗದಲ್ಲಿ ಉಪವಿಭಾಗದ ಪೋಲೀಸ್ ಅಧಿಕಾರಿಗಳು, ಸಿಬ್ಬಂದಿಗಳು, ಗೃಹರಕ್ಷಕ ಸಿಬ್ಬಂದಿಗಳ ವತಿಯಿಂದ ೭೬ನೇ ಸ್ವಾತ್ಯಂತ್ರೋತ್ಸವದ ಅಂಗವಾಗಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರದ ಕಾರ್ಯಕ್ರಮದಲ್ಲಿ ರಕ್ತದಾನ ಮಾಡಿದ ಡಿವೈಎಸ್‌ಪಿ ವೆಂಕಟೇಶ್ ಅವರಿಗೆ ಶಾಸಕ ಬಿ.ಎಮ್.ನಾಗರಾಜ, ಎಸ್.ಪಿ.ರಂಜೀತ್ ಭಂಡಾರು ಅವರು ಪ್ರಮಾಣ ಪತ್ರ ವಿತರಿಸಿದರು.
ನಂತರ ಕಾರ್ಯಕ್ರಮವನ್ನುದ್ದೇಶಿಸಿ ಶಾಸಕರು ಮಾತನಾಡಿ ಹಗಲಿರುಳು ಸಾರ್ವಜನಿಕರ ಹಿತದೃಷಿಗಾಗಿ ಶ್ರಮಿಸುತ್ತಿರುವ ಇಲಾಖೆಯು ಇಂತಹ ಸಾಮಾಜಿಕ ಕಳಕಳಿಯುಳ್ಳ ಕಾರ್ಯಗಳನ್ನು ಮಾಡುತ್ತಿರುವುದು ಶ್ಲಾಘನೀಯವೆಂದರು.
ಎಸ್.ಪಿ.ರಂಜೀತ್ ಭಂಡಾರು ಮಾತನಾಡಿ ಸಮಾಜದಲ್ಲಿ ಶಾಂತಿ ಸುಭದ್ರತೆಯ ಸೇವೆಯಲ್ಲಿರುವ ನಮ್ಮ ಇಲಾಖೆಯು ಕೆಲವು ನಿಯಮಗಳಾದ ವಾಹನ ಚಲಾವಣೆಯಲ್ಲಿ ಮೊಬೈಲ್ ಬಳಕೆ ನಿಷೇದ, ಕುಡಿದು ವಾಹನ ಚಲಾಯಿಸುವುದು, ಮಿತಿಯ ವೇಗವನ್ನು ಅನುಸರಿಸುವಂತೆ ಇನ್ನಿತರ ಸಂಚಾರಿ ನಿಯಮಗಳ ಪಾಲನೆ ಹಾಗೂ ಕಾನೂನಾತ್ಮಕ ನಿಯಮಗಳನ್ನೂ ಜಾಗೃತಿ ಮೂಡಿಸುವ ಸಲುವಾಗಿ ಸದಾ ಸಾರ್ವಜನಿಕರೊಂದಿಗೆ ವಾಗ್ವಾದಕ್ಕಿಳಿಯುವುದು ಅನಿವಾರ್ಯವಾಗಿದೆ.
ನಮ್ಮ ಉದ್ದೇಶವಿಷ್ಟೇ ಅವಘಡಗಳಿಂದ ರಕ್ತವನ್ನು ರಸ್ತೆಯಲ್ಲಿ ಚೆಲ್ಲದಿರಿ ಮತ್ತೊಬ್ಬರ ಜೀವಕ್ಕೆ ನಿಮ್ಮ ರಕ್ತವು ಸಂಜೀವಿನಿಯಾಗಲೆAಬುದಾಗಿದೆ. ಅದರಂತೆ ನಮ್ಮ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸಹ ಅಗತ್ಯವಿರುವವರಿಗೆ ಜೀವವನ್ನುಳಿಸಲು ಮುಂದಾಗಿರುವುದು ನಮ್ಮ ಇಲಾಖೆಗೆ ಹೆಮ್ಮೆಯ ಸಂಗತಿಯಾಗಿದೆAದು ತಿಳಿಸಿದರು.
ರಕ್ತದಾನ ಶಿಬಿರದಲ್ಲಿ ಪೋಲೀಸ್ ಅಧಿಕಾರಿಗಳು, ಸಿಬ್ಬಂದಿಗಳು, ಗೃಹರಕ್ಷಕ ದಳದವರು ಹಾಗೂ ಸಾರ್ವಜನಿಕರು ಸೇರಿ ೭೦ಕ್ಕೂ ಅಧಿಕ ರಕ್ತದಾನ ಮಾಡಿದರು. ಇದೇ ವೇಳೆ ತಾಲೂಕು ಆರೋಗ್ಯಾಧಿಕಾರಿ ಡಾ.ಈರಣ್ಣ, ಉಪ ವಿಭಾಗದ ಸಿ.ಪಿ.ಐ ಗಳಾದ ಸುಂದ್ರೇಶ್, ಎಂ.ಉಮೇಶ, ಸತೀಶ, ಪಿ.ಎಸ್.ಐಗಳಾದ ತಿಮ್ಮಣ್ಣ ನಾಯಕ, ಶಾಂತಮೂರ್ತಿ, ಸದ್ದಾಂಹುಸೇನ್, ಶಶಿಧರ ಹಾಗೂ ವಿಮ್ಸ್ನ ರಕ್ತ ಭಂಡಾರದ ಸಿಬ್ಬಂದಿಗಳು ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಇದ್ದರು.
