
ಉದಯವಾಹಿನಿ,ಶಿಡ್ಲಘಟ್ಟ:ತಾಲೂಕು ಆಡಳಿತ ಹಾಗೂ ಗ್ರಾಮ ಪಂಚಾಯತಿ ಆಡಳಿತ ವತಿಯಿಂದ 4 ತಿಂಗಳಿಗೊಮ್ಮೆ ನೆಪ ಮಾತ್ರಕ್ಕೆ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಾರೆ ಎಂದು ಡಿಎಸ್ಎಸ್ ಸಂಘದ ತಾಲೂಕು ಅಧ್ಯಕ್ಷ ಟಿ ಎ ಚಲಪತಿ ಅಧಿಕಾರಿಗಳ ವಿರುದ್ಧ ಗುಡಿಗಿದರು. ತಾಲ್ಲೂಕಿನ ದಿಬ್ಬೂರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಶುಕ್ರವಾರ ಸ್ವಚ್ಛತಾ ಸಪ್ತಾಹದ ಅಂಗವಾಗಿ ಹಮ್ಮಿಕೊಂಡ ಕಾರ್ಯಕ್ರಮವನ್ನು ತಾಲೂಕು ಕಾರ್ಯ ನಿರ್ವಹಣಾಧಿಕಾರಿ ಜಿ ಮುನಿರಾಜು ಉದ್ಘಾಟಿಸಿದರು.
ದಿಬ್ಬೂರಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಸ್ವಚ್ಛತೆ ಮರೀಚಿಕೆಯಾಗಿದೆ. ತಾಲೂಕು ಆಡಳಿತ ವತಿಯಿಂದ ಸ್ವಚ್ಛತಾ ಅಭಿಯಾನವನ್ನು ಹಮ್ಮಿಕೊಂಡಿದ್ದು ಕೇವಲ ಮುಖ್ಯರಸ್ತೆಗಳಲ್ಲಿ ಹೆಸರಿಗೆ ಮಾತ್ರ ಸ್ವಚ್ಛತಾ ಕಾರ್ಯವನ್ನು ಮಾಡುತ್ತಾರೆ.ಅಂಗಡಿಗಳ ಮುಂದೆ ಹಾಗೂ ಶಾಲೆ, ಅಂಗನವಾಡಿಗಳ ಮುಂದೆ ಇರುವಂತ ಕಸವನ್ನು ಅಭಿವೃದ್ಧಿ ಅಧಿಕಾರಿಗಳು
ನೋಡಿ ನೋಡದಂತೆ ಹೋಗುತ್ತಾರೆ. ಅದೇ ರೀತಿ ಕೆಇಬಿ ಜಾಗದಲ್ಲಿ ಸ್ವಚ್ಛತೆ ಇಲ್ಲದೆ ಗಬ್ಬುನಾರುತ್ತಿದೆ ಇದರ ಬಗ್ಗೆ ಅವರಿಗೆ ಅರಿವೇ ಇಲ್ಲದಂತೆ ಇದ್ದಾರೆ. ಜನರಿಗೆ ಇದರಿಂದ ರೋಗರು ಜನಗಳು ಹೆಚ್ಚಾಗಿ ಖಾಯಿಲೆಗಳಿಗೆ ತುತ್ತಾಗುತ್ತಾರೆ. ಸಾರ್ವಜನಿಕರು ಅಭಿವೃದ್ಧಿ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಪತ್ರ ನೀಡಿದರು ಪ್ರಯೋಜನವಾಗಲಿಲ್ಲ ಮುಂದಿನ ದಿನಗಳಲ್ಲಿ ಇದೇ ರೀತಿ ಇದ್ದರೆ ಉಗ್ರ ಹೋರಾಟ ಮಾಡುತ್ತೇವೆ ಎಂದು ತಿಳಿಸಿದರು.
ಮೇಲಾಧಿಕಾರಿಗಳು ನಾಲ್ಕೃದು ತಿಂಗಳಿಗೊಮ್ಮೆ ಇದೇ ಪಂಚಾಯಿತಿಯಲ್ಲಿ ಸ್ವಚ್ಚತಾ ಅಭಿಯಾನದ ಕಾರ್ಯಕ್ರಮಗಳನ್ನು ಮಾಡಿ ಸಾರ್ವಜನಿಕರಿಗೆ ಅರಿವು ಮೂಡಿಸಿದರೆ, ಅದು ಅವತ್ತಿಗೆ ಮಾತ್ರ ಸೀಮಿತವಾಗಿರುತ್ತದೆ. ಮತ್ತು ಬೇರೆ ದಿನಗಳಲ್ಲಿ ಸ್ವಚ್ಚತೆ ಮರೀಚಿಕೆಯಾಗಿದೆ. ದಿಬ್ಬೂರಹಳ್ಳಿ ಗ್ರಾಪಂ ಮುಂದೆ, ಅಂಗನವಾಡಿ ಮತ್ತು ಕಿರಿಯ ಪ್ರಾಥಮಿಕ ಶಾಲೆಯ ಮುಂಭಾಗ ಕಸದ ರಾಶಿಯೇ ತುಂಬಿರುತ್ತದೆ. ಅಭಿವೃದ್ಧಿ ಅಧಿಕಾರಿಗಳು ನೋಡಿದರೂ ಗಮನ ಅರಿಸುವುದಿಲ್ಲ. ಅಭಿವೃದ್ಧಿ ಮಾಡುವಂತಹ ಅಧಿಕಾರಿಗಳೇ ಹೀಗಾದರೆ ಹೇಗೆ ಎಂದರು.
-ಶ್ರೀನಿವಾಸ್.ವಿ. ಗ್ರಾಮಸ್ಥರು.
