ಉದಯವಾಹಿನಿ ಸಿರುಗುಪ್ಪ : ನಗರದ ತಾ.ಪಂ. ಸಭಾಂಗಣದಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ಸಭೆ ನಡೆಸಿದ ಶಾಸಕ ಬಿ.ಎಮ್.ನಾಗರಾಜ, ಅವರು ಕಾಮಗಾರಿ ವಿಳಂಬ, ಅಧಿಕಾರಿಗಳ ನಿರ್ಲಕ್ಷö್ಯತೆಯ ವಿರುದ್ದ ಹರಿಹಾಯ್ದರು. ಸಭೆಯಲ್ಲಿ ಮಾತನಾಡಿ ಮೂಲಭೂತ ಸೌಲಭ್ಯಗಳಾದ ಶುದ್ದ ಕುಡಿಯುವ ನೀರು, ಶಿಕ್ಷಣ, ವಿದ್ಯುತ್, ವಸತಿ, ಆಮೆಗತಿಯಲ್ಲಿರುವ ಕಾಮಗಾರಿ ಉದ್ಯಾನವನಗಳ ದು:ಸ್ಥಿತಿ, ಕಟ್ಟಡಗಳ ಕೊರತೆಯಿಂದಾಗಿ ಸಮಸ್ಯೆಯಲ್ಲಿರುವ ಅಂಗನವಾಡಿಗಳ ಕೇಂದ್ರಗಳು, ರಸ್ತೆ ಅಭಿವೃದ್ದಿ, ಆಟದ ಮೈದಾನ, ಸುಸ್ಸಜ್ಜಿತ ಕೊಠಡಿಗಳು ಮತ್ತು ಅಡುಗೆ ಕೋಣೆಗಳಿಲ್ಲದ ಶಾಲೆಗಳ ಸಮಸ್ಯೆಯ ದೂರು ತಾಲೂಕಿನೆಲ್ಲೆಡೆ ಕೇಳಿ ಬರುತ್ತಿದೆ.
ಸೂಕ್ತ ನಿರ್ವಹಣೆಯಿಲ್ಲದ ಕೆರೆಗಳು, ಜನರಿಗೆ ಉಪಯೋಗಕ್ಕೆ ಮುಂಚೆಯೇ ಹಾಳಾಗಿರುವ ಆರ್.ಓ ಘಟಕಗಳು ಶೇ.೭೦ರಷ್ಟಿರುವ ಬಗ್ಗೆ ಗ್ರಾ.ಪಂ.ಗಳ ಆರೋಪವಿದ್ದು ಗ್ರಾ.ಪಂ.ಅನುದಾನದಲ್ಲಿ ಕೆರೆ ಮತ್ತು ಶುದ್ದ ಘಟಕಗಳ ನಿರ್ವಹಣೆ ಮಾಡುವುದಾದರೆ ನಿಮ್ಮ ಇಲಾಖೆಯಿರುವುದಾದರೂ ಯಾಕೆ? ಟೆಂಡರ್ ಪಡೆದ ಗುತ್ತಿಗೆದಾರರು ನಿರ್ವಹಣೆಗೆ ನಿರ್ಲಕ್ಷö್ಯ ಎದ್ದು ಕಾಣುತ್ತಿದ್ದರೂ ನೀವು ಮೌನವಹಿಸಿರುವುದಕ್ಕೆ ಕಾರಣವೇನೆಂದು ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಅಭಿಯಂತರ ಎಸ್.ರವೀಂದ್ರನಾಥರನ್ನು ಪ್ರಶ್ನಿಸಿದರು.
ಕಾಮಗಾರಿ ಆರಂಭವಾಗದ ಮತ್ತು ಅರೆಬರೆಯಲ್ಲಿರುವ ಯಾತ್ರಿ ನಿವಾಸಗಳು, ಸಂಪೂರ್ಣವಾಗಿದ್ದರೂ ಸುರ್ಪದಿಗೊಳಗಾಗದಿರುವುದು. ನಿರೀಕ್ಷಣಾ ಮಂದಿರದಲ್ಲಿನ ಅನೈತಿಕ ಚಟುವಟಿಕೆ ಮತ್ತು ಅವ್ಯವಸ್ಥೆ ಕುರಿತು ಶೀಘ್ರದಲ್ಲೇ ಸೂಕ್ತ ಕ್ರಮವಹಿಸಿ ಎಲ್ಲಾ ಸಮಸ್ಯೆಗಳ ಇತ್ಯರ್ಥಕ್ಕೆ ಸಂಬAದಿಸಿದ ಅಧಿಕಾರಿಗಳು ಮುಂದಾಗಬೇಕು. ತಮ್ಮಿಂದಾಗದAತಹ ಸಮಸ್ಯೆಗಳಿದ್ದಲ್ಲಿ ನಮ್ಮ ಗಮನಕ್ಕೆ ತರಬೇಕೆಂದು ಸೂಚಿಸಿದರು.
ತಹಶೀಲ್ದಾರ್ ಹೆಚ್.ವಿಶ್ವನಾಥ ಮಾತನಾಡಿ ಶಾಲೆಗೆ ಸಂಬAದಿಸಿದ ಸಮಸ್ಯೆಗಳಿದ್ದಲ್ಲಿ ನಮ್ಮ ಗಮನಕ್ಕೆ ತಂದಲ್ಲಿ ಬಗೆಹರಿಸುವುದಾಗಿ ತಿಳಿಸಿದರು.
ಇದೇ ವೇಳೆ ತಾ.ಪಂ.ಇ.ಓ ಪವನ್‌ಕುಮಾರ್, ಬಿ.ಇ.ಓ. ಗರ‍್ರಪ್ಪ, ವಿದ್ಯುತ್ ಇಲಾಖೆ ಜೆ.ಇ.ಸುನೀಲ್, ಪಿ.ಡಬ್ಲು.ಡಿ.ಎ.ಇ ಚೆನ್ನನಗೌಡ, ನಗರಸಭೆ ಆಯುಕ್ತ ಜೀವನ್, ಸಿ.ಡಿ.ಪಿ.ಓ ಪ್ರದೀಪ್,ಪಂ.ರಾ. ಕಾರ್ಯನಿರ್ವಾಹಕ ಇಂಜಿನೀಯರ್ ತಿಪ್ಪೆಸ್ವಾಮಿ, ಕೆ.ಆರ್.ಐ.ಡಿ ಎ.ಇ. ಬಿ.ವಾಣಿ, ಇದ್ದರು
